ತುಮಕೂರು; ಜಿಲ್ಲೆಯಲ್ಲಿ ಕೊರೊನಾ ಸೋಂಕು ಎಷ್ಟು ವ್ಯಾಪಕವಾಗಿ ಹರಡಿದೆಯೆಂದರೆ ಪ್ರತಿ 67 ಜನರಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.
ಈ ಅಂಕಿ ಸಂಖ್ಯೆಗಳನ್ನು ನೋಡಿದರೆ ಎದೆ ಝೆಲ್ಲೆನ್ನುತ್ತದೆ.
ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಹಿರೋಹಿಯಿಸಂ ತೋರುತ್ತಿರುವರಿಗೆ ಇದು ಗೊತ್ತಾಗಬೇಕಾಗಿದೆ.
ಪ್ರತಿ 67 ಜನರಲ್ಲಿ ಒಬ್ಬರಿಗೆ ಸೋಂಕು ತಗುಲಿದವರೆಲ್ಲರೂ ಸೋಂಕಿಗೆ ಒಳಗಾದವರು. ಇವರೆಲ್ಲರೂ ರೋಗ ಪತ್ತೆಯಾದವರು.
ಸೋಂಕಿನ ಲಕ್ಷಣ ಇಲ್ಲದವರು ಎಷ್ಟು ಜನರಿದ್ದಾರೋ ದೇವರೆ ಬಲ್ಲ.
ಜಿಲ್ಲೆಯಲ್ಲಿ ಈಗ ಒಟ್ಟು 39709 ಜನರಿಗೆ ಸೋಂಕು ತಗುಲಿದವರು. ಇದನ್ನು 2011 ಜನ ಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡು ಈ ವಿಶ್ಲೇಷಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ 2011 ರಲ್ಲಿ 2678980 ಜನ ಸಂಖ್ಯೆ ಇದೆ ಎಂದು ಜನಗಣತಿಯಲ್ಲಿ ಹೇಳಲಾಗಿದೆ. ಜಿಲ್ಲೆಯಲ್ಲಿ ಜನಸಂಖ್ಯಾ ದರ 3.5 ಇದನ್ನು ಲೆಕ್ಕ ಹಾಕಿದರೂ ಈಗಿನ ಜನ ಸಂಖ್ಯೆ 28 ಲಕ್ಷ ಮೀರುವುದಿಲ್ಲ.
ಜಿಲ್ಲೆಯ ಜನಸಂಖ್ಯೆಗೆ ಹೋಲಿಸಿದರೆ ಪ್ರತಿ 67 ಜನರಲ್ಲಿ ಒಬ್ಬರು ಕೊರೊನಾ ಪೀಡಿತರಾಗಿದ್ದಾರೆ. ಇದು ಬೆಚ್ಚಿ ಬೀಳಿಸುವ ಅಂಕಿ ಅಂಶವೇ ಸರಿ.
ಒಟ್ಟು ಸಕ್ರಿಯ ಪ್ರಕರಣಗಳನ್ನು ತೆಗೆದುಕೊಂಡರೂ ಪ್ರತಿ 267 ಜನರಿಗೆ ಒಬ್ಬರು ರೋಗಿಗಳು ಇದ್ದಾರೆ.
ಪ್ರತಿ 300 ಜನರ ಗುಂಪಿನಲ್ಲಿ ಒಬ್ಬರು ಕೊರೊನಾ ಪೀಡಿತರು ಇದ್ದಾರೆ ಎಂಬುದನ್ನು ಮರೆಯುವ ಆಗಿಲ್ಲ.
ಜಿಲ್ಲಾ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಅಂಕಿ ಸಂಖ್ಯೆಗಳು ಹೇಳುವಂತೆ ಹಳ್ಳಿಗಳಲ್ಲೂ ಕೊರೊನಾ ಹೆಚ್ಚಿದೆ.
ಜಿಲ್ಲೆಯಲ್ಲಿ ಶೇ 77 ರಷ್ಟು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಹಳ್ಳಿ ಜನರ ಯೋಗಕ್ಷೇಮದತ್ತ ಜಿಲ್ಲಾಡಳಿತ ಹೆಚ್ಚು ನ ಹರಿಸವೇಕಾಗಿದೆ.