Publicstory. in
Tumkuru: ಕೊರೊನಾ ನಗರ ಜನರು, ದಿನಗೂಲಿ ನೌಕರರ ಬದುಕನ್ನು ಮಾತ್ರವೇ ಕಸಿದಿಲ್ಲ.ಜಿಲ್ಲೆಯ ಹೂವು ಬೆಳೆಗಾರರನ್ನು ಬೀದಿಗೆ ತಂದು ನಿಲ್ಲಿಸಿದೆ.
ಸರ್ಕಾರ, ಜಿಲ್ಲಾಡಳಿತ ಕೂಡಲೇ ಇವರ ಸಮಸ್ಯೆ ಬಗೆಹರಿಸಲು ಗಮನ ಹರಿಸಬೇಕಾಗಿದೆ.
ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಸುತ್ತಮುತ್ತಲಿನ ಅನೇಕ ಹಳ್ಳಿಗಳಲ್ಲಿ ಹೂವಿನ ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ಧು ಕೊರೋನಾ ಹರಡದಂತೆ ತಡೆಯಲು ಸರ್ಕಾರಗಳು ಬಿಗಿಯಾದ ಕ್ರಮ ತೆಗೆದುಕೊಂಡಿರುವುದರಿಂದ ಸಾರಿಗೆ ಸೌಲಭ್ಯದ ಇಲ್ಲದೇ ಬೆಳೆಗಾರರು ತೀವ್ರ ನಷ್ಠ ಅನುಭವಿಸುತ್ತಿದ್ದಾರೆ.
ಹೂವನ್ನು ಕಿತ್ತು ಏನು ಮಾಡುವುದು ಎನ್ನುವ ಗೊಂದಲ ರೈತರಲ್ಲಿ ಮೂಡಿದೆ.
ಸೋಮವಾರ ತುಮಕೂರು ಮಾರುಕಟ್ಟೆ ಯಲ್ಲಿ ಒಂದು ಕೈ ಹೂವಿನ ಮಾಲೆ 1600-2000 ದವರೆಗೂ ಮಾರಾಟವಾಗಿತ್ತು. ಅನುಭವಿ ಬೆಳೆಗಾರ ರೈತರ ಅಭಿಪ್ರಾಯ ದಂತೆ ಮಂಗಳವಾರ 3000 ರೂ ಮುಟ್ಟುತ್ತಿತ್ತು. ಅದರೆ ಕೊರೋನಾ ನಮ್ಮಗಳ ಅಸೆಗೆ ಮಣ್ಣು ಎರಚಿತ್ತು.
ಮಂಗಳವಾರ ತುಮಕೂರು ಮಾರುಕಟ್ಟೆ ಗೆ ಹೂವು ತೆಗೆದುಕೊಂಡು ಹೋದಾಗ ಬಂದ್ ಅಗಿತ್ತು.
ಅದನ್ನು ವಾಪಸು ತಂದು ತೋವಿನಕೆರೆ ಬಸ್ ನಿಲ್ದಾಣದಲ್ಲಿ ಒಂದು ಮಾರ್ ಗೆ 25 ರೂ ನಂತೆ ಮಾರಾಟ ಮಾಡಿದೆವು.
ಬುಧವಾರ ತೋವಿನಕೆರೆ ಬಸ್ ನಿಲ್ದಾಣದ ಲ್ಲಿ ನೀನೇ ಅಳತೆ ಮಾಡಿಕೊಂಡು ನೀನೆ ಹಣ ಕೊಡು ಎನ್ನುವಂತೆ ಹೂವಿನ ರಾಶಿರಾಶಿಯೇ ಕಂಡುಬಂತು.