ಅದೊಂದು ಕೂಡು ಕುಟುಂಬ ಚೆನ್ನಾಗಿ ಓದುತ್ತಿದ್ದ ಆ ಹುಡುಗನನ್ನು ಕಂಡರೆ ಅವರ ಚಿಕ್ಕಪ್ಪನಿಗೆ ಇನ್ನಿಲ್ಲದ ಕೋಪ. ತನ್ನ
ತುಂಬಾ ಚೆಂದವಾಗಿ ಓದುತ್ತಿದ್ದಾರೆ ನನ್ನ ಮಕ್ಕಳು ಓದುವುದಿಲ್ಲ ಎಂಬುದು ತಮ್ಮನ ಕೊರಗು. ಹೀಗಾಗಿ ತನ್ನ ಅಣ್ಣನ ಮಗನಿಗೆ ಇನ್ನಿಲ್ಲದಂತೆ ಕಿರುಕುಳ ಕೊಡಲು ಆರಂಭಿಸಿದ ಚಿಕ್ಕಪ್ಪ.
ಚಿಕ್ಕಪ್ಪನ ಕಿರಿಕುಳವನ್ನು ತಾಳಲಾಗದೆ ಹಾಗೂ ಹೀಗೂ ಹಳ್ಳಿ ಹುಡುಗ 7 ತರಗತಿ ಪಾಸ್ ಆಗಿಬಿಟ್ಟ . ಮುಂದೆ ಶಿಕ್ಷಣಕ್ಕೆ ಸೇರಬೇಕೆಂದು ಎಷ್ಟೇ ಮನವಿ ಮಾಡಿದರು ಸಹ ಚಿಕ್ಕಪ್ಪ ಒಪ್ಪಲೇ ಇಲ್ಲ. ಚಿಕ್ಕಪ್ಪನಿಗೆ ಅಣ್ಣನ ಮಗ ಓದಲು ಇಷ್ಟ ಇರಲಿಲ್ಲ. ಮನೆ ಕೆಲಸ ಕೃಷಿ ಕೆಲಸ ಮಾಡಿ ಕೊಡುವಂತೆ ಒತ್ತಾಯ ಮಾಡತೊಡಗಿದ.
ದೊಡ್ಡಪ್ಪನ ಕಿರಿಕ್ಕೊಳಕ್ಕೆ ಹುಡುಗ ಸಹಿಸಲಾರದೆ ಊರು ಬಿಟ್ಟು ಓಡಿ ಹೋದ. ಏನು ಮಾಡಲೆಂದು ಗೊತ್ತಾಗದ ಹುಡುಗ ಊರೂರು ತಿರುಗಿದ.
ಕೊನೆಗೂ ಸಣ್ಣ ಪುಟ್ಟ ಕೆಲಸ ಮಾಡಿಕೊಂಡ. ಓದುವುದನ್ನು ಮಾತ್ರ ಬಿಡಲಿಲ್ಲ. ಅವನಿಗೆ ಸಾಂಪ್ರದಾಯಿಕ ಶಿಕ್ಷಣ ಸಿದ್ಧಿಸಲಿಲ್ಲ ಆದರೆ ಓದಿನ ಕಲೆ ಹತ್ತಿದ್ದು. ಸಿಕ್ಕಸಿಕ್ಕ ಪುಸ್ತಕಗಳನ್ನೆಲ್ಲ ಓದಿದ.
ಸಿಟಿಯಲ್ಲಿ ಸಿಕ್ಕ ಸಣ್ಣ ಸಣ್ಣಪುಟ್ಟ ಕೆಲಸಗಳನ್ನೆಲ್ಲ ಮಾಡಿದ. ಓದುವನಲ್ಲಿ ಅಗಾಧ ಬದಲಾವಣೆ ತಂದಿತು. ಯಾವುದೋ ಒಂದು ಫ್ಯಾಕ್ಟರಿಯನ್ನು ಸೇರಿದ. ಅಲ್ಲೇ ಕೆಲಸವನ್ನು ಸಹ ಕಲಿತ. ಓದಿನ ಕಾರಣದಿಂದಲೇ ಅವನಲ್ಲಿ ಕಿಚ್ಚು ಹತ್ತಿದ್ದು, ಒಂದು ಸಣ್ಣ ವ್ಯಾಪಾರ ಆರಂಭಿಸಿದ. ಅವನಿಂದ ದೊಡ್ಡ ವ್ಯಾಪಾರಿ. ಕೋಟಿ ಕೋಟಿ ಹಣವಂತ.
ನಮ್ಮನ್ನು ಯಾವುದು ಹುಡುಕಿಕೊಂಡು ಬರುವುದಿಲ್ಲ, ನಾವು ಹುಡುಕಿಕೊಂಡು ಹೋಗಬೇಕು. ನಮಗೆ ಯಾವುದು ಬಗ್ಗುವುದಿಲ್ಲ, ನಾವೇ ಬಗ್ಗಿಸಿಕೊಳ್ಳಬೇಕು. ಇದು ಅವನ ದುಡಿಮೆಯ ಮೂಲ ಮಂತ್ರ.
ದೊಡ್ಡಪ್ಪನ ಮಾತಿಗೆ ಮಣಿದಿದ್ದರೆ ನಾನು ಊರಿನಲ್ಲಿ ಕೂಲಿ ಕಾರ್ಮಿಕನಾಗುತ್ತಿದ್ದೆ. ಯಾವುದೇ ಪರಿಸ್ಥಿತಿಯಲ್ಲಿ ನಮ್ಮ ಕನಸನ್ನು ಬಿಟ್ಟುಕೊಡಬಾರದು. ಮನಸು ಮಾಡಿದರೆ ನಾವು ಅಂದುಕೊಂಡ ಡೆಸ್ಟಿನೇಷನ್ ತಲುಪಬಹುದು.