ನವರಾತ್ರಿಯ ಎರಡನೇ ದಿನ ಹಸಿರು ಆಗಿದೆ. ಪ್ರಕೃತಿ, ಹಸಿರು ಬಣ್ಣದ ಜೀವ ಸೆಲೆಯನ್ನು ಎಲ್ಲೆಲ್ಲಿ ಇಟ್ಟಿದೆ ಎಂಬುದನ್ನು ಸಾಂಕೇತಿಕವಾಗಿ ಕವನದಲ್ಲಿ ಡಾ. ರಜನಿ ಹೇಳಿದ್ದಾರೆ.
ಆಡು ಭಾಷೆ ಸೊಗಡಿನ ಈ ಕವನವು ಪ್ರಕೃತಿಯು ಎಲ್ಲೆಲ್ಲಿ ಹಸಿರು ಬಣ್ಣವನ್ನು ಇಟ್ಟಿದೆ ಎಂಬುದನ್ನು ಹೇಳುವುದರ ಜತೆಗೆ ಜೀವದ ಹುಟ್ಟು, ನಿರ್ಗಮದ ಅಂತಸತ್ವದ ಬಗೆಗೂ ಹೇಳುತ್ತದೆ.
ನವ ರಾತ್ರಿಯೆಂದರೆ ಒಂಬತ್ತು ರಂಗುಗಳ ಹಬ್ಬ. ಪ್ರತಿ ದಿನವೂ ಒಂದೊಂದು ಬಣ್ಣಗಳ ರಂಗು. ಈ ಒಂದೊಂದು ಬಣ್ಣದ ಬಗ್ಗೆಯೂ ಡಾ.ರಜನಿ ಅವರಿಂದ ನಿರೀಕ್ಷಿಸಬಹುದು
ಹಳದಿ
******
ನವರಾತ್ರಿಯ ಮೊದಲ ದಿನ
ಹಳದಿ
ಸೂರ್ಯ ಹುಟ್ಟುತ್ತಾ
ಮುಳುಗುತ್ತಾ
ದೇವಿಗೆ ಪ್ರಿಯ ನಿಂಬೆ..
ಕೆನ್ನೆಯ ಅರಿಶಿನ
ಸೂರ್ಯಕಾಂತಿ ಹೂವು
ಹೊಳೆವ ಹೊನ್ನು..
ಮೊಟ್ಟೆಯ ಭಂಡಾರ
ಜೀವ ಜೀವದ ಅಣು..
ಉರಿಯುವ ಬೆಂಕಿ
ದುರ್ಗೆಯ ಉರಿಗಣ್ಣು..
ದೀಪದ ಬೆಳಕು
ಸ್ನೇಹದ ಬಣ್ಣ..
ಜ್ಞಾನದ ಸಂಕೇತ
ವಿಷ್ಣುವಿನ ಉಡುಗೆ..
ಹಳದಿ ಶಾಮಂತಿಗೆ
ಕನ್ನಡದ ಬಾವುಟ
ಬಾಳೆ ಹಣ್ಣು, ಚಂಡು ಹೂವ,
ಹಲಸು ,ಕುಂಬಳ,ಹುಗ್ಗೆದನ್ನ,ಹುಚ್ಚೆಳ್ಳುವ್ವ
ಮತ್ಸರದ ಹೊಗೆ
ಕಾಮಾಲೆಯ ರಂಗು ..
ಹಳದಿ…. ಕಿತ್ತಳೆಯಾಗಿ
ಕೆಂಪಾಗಿ ಮಾಗಿ
ಎಲ್ಲಿಲ್ಲ ಹಳದಿ?
ಮತ್ತೆ ಸೂರ್ಯ ಅಸ್ತಂಗತ..
ಡಾII ರಜನಿ