ಲಕ್ಷ್ಮೀಸುಬ್ರಹ್ಮಣ್ಯ
ಪದಗಳಿಗೆ ಪ್ರೀತಿಯ ಮುತ್ತಿಟ್ಟು
ಮೆರೆಸ ಬೇಕೆನಿಸುತ್ತದೆ,
ಅದರಲ್ಲಿರುವ ಭಾವಕ್ಕೆ ಮತ್ತು ಬಳಸುವ
ನಮ್ಮ ಭಾಷೆಗೆ.
ಅರಿವು ಮೂಡಿದಾಗಿ೦ದ ಆಲೋಚನೆಗೆ ಅಡಿಪಾಯ ಹಾಕಿದ ಭಾಷೆ
ಭಾವನೆಗಳಿಗೆ ಬಣ್ಣ ಬಣ್ಣದ ಗರಿ ಇಟ್ಟ ಭಾಷೆ
ತೊದಲು ನುಡಿಯಿಂದ ಹಿಡಿದು ಉದ್ದುದ್ದ ಭಾಷಣ ಹೇಳುವ ಭಾಷೆ
ಅಜ್ಜಿಯ ಅಕ್ಕರೆಯ ಕೈತುತ್ತಿನ ಜೊತೆಗೆ ಕಥೆಗಳ ಹೆಣೆಯುವ ಭಾಷೆ!!
ಚಂಪೂ ವೆಂಬ ಮುತ್ತಿನ ಪದಗಳ ಮಣಿ ಹಾರವನ್ನು ಕೊರಳಿಗೆ ಧರಿಸಿ
ರಾರಾಜಿಸುವ ರಗಳೆಗಳ ಮೂಗುನತ್ತನು ಹಾಕಿ
ವಚನಗಳ ಒಡ್ಯಾಣವನು ಧರಿಸಿ
ಕಿವಿಗಳಿಗೆ ಕೀರ್ತನೆಯ ಲೋಲಾಕು ಹಾಕಿ
ಹಳದಿ ಕೆಂಪು ಸೀರೆಯಲ್ಲಿ ಎಷ್ಟು ಚೆಂದ ನೀನು!!
ಎತ್ತಿ ಮೆರೆಸಬೇಕೆನಿಸುತ್ತದೆ ನಿನ್ನ
ನಮ್ಮಮ್ಮ ನೀನು ಬಲು ಮುದ್ದು!!!