ಪಬ್ಲಿಕ್ ಸ್ಟೋರಿ
ಗುಬ್ಬಿ : ತಾಲೂಕಿನ ಸಿ.ಎಸ್.ಪುರ ಹೋಬಳಿ ಅಂಕಲಕೊಪ್ಪ ಮಜರೆ ವೀರಣ್ಣನಗುಡಿ ಶ್ರೀ ಭದ್ರಕಾಳಿ ಸಮೇತ ವೀರಭದ್ರಸ್ವಾಮಿಯವರ ಬ್ರಹ್ಮರಥೋತ್ಸವವು ಸಾವಿರಾರು ಭಕ್ತಾಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು.
ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆಯಿಂದಲೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು ಪ್ರತಿ ವರ್ಷದಂತೆ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಅಭಿಷೇಕ, ಹೂವಿನ ಅಲಂಕಾರ ಸೇರಿದಂತೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ನಡೆಸಲಾಯಿತು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭÀಕ್ತಾಧಿಗಳು ತಮ್ಮ ಇಷ್ಠಾರ್ಥ ಪೂಜೆಗಳನ್ನು ಸಲ್ಲಿಸುವುದರ ಜತೆಗೆ ಭಕ್ತಾಧಿಗಳಿಗೆ ವಿಶೇಷವಾಗಿ ಪಾನಕ.ಫಲಹಾರಗಳನ್ನು ವಿತರಿಸಿದರು. ದೇವಾಯಲಯ ಸಮಿತಿವತಿಯಿಂದ ದಾಸೋಹ ವ್ಯವಸ್ಥೆಯನ್ನು ಮಾಡಲಾಗಿತ್ತು. ರಥೋತ್ಸವದ ಅಂಗವಾಗಿ ಗಂಗಾ ಪೂಜೆ. ನವಗ್ರಹ ಪೂಜೆ, ಕಳಶ ಸ್ಥಾಪನೆ, ಗಣಪತಿ ಹೋಮ, ಭದ್ರಕಾಳಿ ಅಮ್ಮನವರಿಗೆ ಕುಂಕುಮಾರ್ಚನೆ, ಪೂರ್ಣಹುತಿ, ಸುಮಂಗಳಿಯವರ ಪೂಜೆ, ಶ್ರೀವೀರಭದ್ರಸ್ವಾಮಿಗೆ ಕುಂಭಾಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಕುಂಭಾಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಲಿರುವ ಭಕ್ತಾಧಿಗಳು ರಥೋತ್ಸವಕ್ಕೆ ದವನ ಸಿಕ್ಕಿಸಿದ ಬಾಳೆ ಹಣ್ಣು ಮತ್ತು ವೀಳ್ಯದೆಲೆ ಎಸೆಯುವ ಮೂಲಕ ತಮ್ಮ ಭಕ್ತಿ ಬಾವ ಸಮರ್ಪಿಸಿದರು.
ರಥೋತ್ಸವದಲ್ಲಿ ಶಿಲ್ಪಾ ತಂಡದವರಿAದ ಆಕರ್ಷಕ ವೀರಗಾಸೆ ಕುಣಿತ, ನಂದೀಧ್ವಜ ಕುಣಿತ, ಕರಡಿ ವಾಧ್ಯ, ಲಿಂಗದ ವೀರರ ಕುಣಿತ, ಸೇರಿದಂತೆ ವಿವಿಧ ಸಾಂಸ್ಕೃತಿಕ ಜನಪದ ಕಲಾತಂಡದಿAದ ಮೇರವಣಿಗೆ ಮಾಡಲಾಯಿತು. ಜಾತ್ರಾಮಹೋತ್ಸವಕ್ಕೆ ಅಗಮಿಸಿದ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಲಭ್ಯಗಳನ್ನು ದೇವಾಲಯ ಸಮಿತಿವತಿಯಿಂದ ವ್ಯವಸ್ಥಿತವಾಗಿ ಮಾಡಲಾಗಿತ್ತು. ಜಾತ್ರಾಮಹೋತ್ಸವಕ್ಕೆ ಬರುವ ಭಕ್ತಾಧಿಗಳಿಗೆ ಹೆಬ್ಬೂರಿನಿಂದ ವಿಶೇಷವಾಗಿ ಬಸ್ ವ್ಯವಸ್ಥೆಯನ್ನು ಮಾಡಲಾಗಿತ್ತು.
ರಥೋತ್ಸವದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಶಾಸಕ ಮಸಾಲೆಜಯರಾಮು, ಗುತ್ತಿಗೆದಾರ ರಮೇಶ್‌ಕೌಲಗಿ, ಎಪಿಎಂಸಿ ಸದಸ್ಯೆ ಪದ್ಮ.ವಿ.ಡಿ, ಬೆಂಗಳೂರು ದಕ್ಷಿಣ ಶಾಸಕ ಹೆಚ್.ಕೆ.ಕೃಷ್ಣ, ಗೋಪಾಲಕೃಷ್ಣಶರ್ಮ ಸ್ವಾಮಿಜಿ, ಶ್ರೀವೀರಭದ್ರಸ್ವಾಮಿ ದೇವಾಲಯ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವಿ.ಪುಟ್ಟಸ್ವಾಮಿ, ಉಪಾಧ್ಯಕ್ಷ ಗಂಗಣ್ಣ, ಕಾರ್ಯದರ್ಶಿ ಟಿ.ಎನ್.ಶಿವರುದ್ರಯ್ಯ, ಕಾರ್ಯಾಧ್ಯಕ್ಷ ಎಂ.ವಿ.ಬಸವರಾಜು, ಖಜಾಂಚಿ ವಿ.ಎನ್.ನಂಜುAಡಯ್ಯ, ಪದಾಕಾರಿಗಳಾದ ಫಣೀಂದ್ರ, ಹೆಚ್.ಆರ್.ಶಿವಶಂಕರ್, ಅರ್ಚಕ ಶ್ರೀಧರ್ ದೀಕ್ಷಿತ್, ಮತ್ತು ಭಕ್ತರು ಮುಖಂಡರು ಇನ್ನಿತರರು ಹಾಜರಿದ್ದರು.