ದೇವರಹಳ್ಳಿ ಧನಂಜಯ
ವೈವಿಧ್ಯದಲ್ಲಿ
ವಿದ್ಯೆ ಇದೆ ತೆರೆದ
ಕಣ್ಣಿಗೆ ಇಲ್ಲಿ
ಪರಿಸರದಲ್ಲಿ
ಅಸಂಖ್ಯ ಗುರುಗಳು
ಬದುಕ ಪಾಠಗಳು
ಅರಳು ಮಗ್ಗು
ಸಹಜ ಸ್ಪಂದನವ
ಕಲಿಸುತಿದೆ
ಎಲೆ ಇಬ್ಬನಿ
ಪುಟ್ಟ ಬದುಕ ದೊಡ್ಡ
ಅರ್ಥ ಹೇಳಿವೆ
ಸದಾ ಮೂಡುವ
ಸೂರ್ಯನೂ ಸಾರುತಿಹ
ನಿರಂತರವ
ಮೌನ ಚಿಗುರು
ಸದ್ದಿಲ್ಲದೆ ಮಾಡಿವೆ
ಬೆಳೆವ ಪಾಠ
ಬೆಳ್ಳಂಬೆಳಗ್ಗೆ
ಕೂಗುವ ಕಾಗೆಯದು
ಎಚ್ಚರ ಪಾಠ
ಒಗ್ಗಟ್ಟು ಪಾಠ
ಹಿಂಡಿಂಡು ಹೊರಡುವ
ಪಕ್ಷಿಗಳದ್ದು
ಎದೇಪಸೆಯ
ಜೊತೆ ಸದಾ ಸಾಗುವ
ಗೆದ್ದಲ ಪಾಠ
ಇರುವೆಯದು
ದುಡಿಮೆ ದೇವರೆಂಬ
ಬದುಕ ಪಾಠ
ಸಗಣಿ ಹುಳು
ಕಸ ರಸ ಮಾಡುವ
ಪಾಠ ಹೇಳಿದೆ
ಕಲಿಸುತ್ತಿದೆ
ತುಪ್ಪ ತಿನ್ನದ ಜೇನು
ಸಾರ್ಥಕತೆಯ
ಪ್ರಾಣಿ ಪಕ್ಷಿಗೆ
ಜಾತಿ ಧರ್ಮ ಗಳಿಲ್ಲ
ದಿಕ್ಕು ತಪ್ಪಲು
ಕಲಿವುದಿದೆ
ಗುಡಿ ಗಡಿ ಇಲ್ಲದ
ಪ್ರಾಣಿಗಳಿಂದ
ವೈವಿಧ್ಯದಲ್ಲಿ
ಮತ್ತೆ ಕಟ್ಟಬೇಕಿದೆ
ಹೊಸ ಬದುಕ