ತುಮಕೂರು:
ಕೊರೊನಾ ಹಿನ್ನಲೆ ದೇಶದಾದ್ಯಂತ ಆರ್ಥಿಕ ವಹಿವಾಟು ನಿಂತು ಹೋಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಶೇ ರಿವರ್ಸ್ ರೆಪೊ ದರ ಶೇ. 4ರಷ್ಟು ನಿಗದಿ ಪಡಿಸಿದ್ದ ಆರ್‌ಬಿಐ, ಶುಕ್ರವಾರ 25 ಅಂಶ ಕಡಿತಗೊಳಿಸಿ ಶೇ. 3.75ಕ್ಕೆ ಇಳಿಕೆ ಮಾಡಿದೆ.
ಆರ್‌ಬಿಐ, ಹಣಕಾಸು ವ್ಯವಸ್ಥೆಯಲ್ಲಿನ ಹೆಚ್ಚುವರಿ ಹಣದ ಹರಿವಿಗೆ ಕಡಿವಾಣ ಹಾಕುವ ಉದ್ದೇಶದಿಂದ ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರ ‘ರಿವರ್ಸ್ ರೆಪೊ’ ಆಗಿರುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಆರ್ಥಿಕತೆ ಚೇತರಿಕೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಭಾರತ ಶೇ 1.9ರಷ್ಟು ಸಕಾರಾತ್ಮಕ ಬೆಳವಣಿಗೆ ಕಾಣಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಅಂದಾಜು ಮಾಡಿದೆ. ಇದು ಜಿ20 ಆರ್ಥಿಕತೆಗಳ ಪೈಕಿ ಅತಿ ಹೆಚ್ಚು ಎಂದರು.
ಜಾಗತಿಕ ಆರ್ಥಿಕ ಮಾರುಕಟ್ಟೆಗಳಲ್ಲಿ ಏರಿಳಿತ ಮುಂದುವರಿಯಲಿದೆ.
ಕಚ್ಚಾ ತೈಲ ದರದಲ್ಲಿಯೂ ವ್ಯತ್ಯಾಸವಾಗಲಿದೆ. ಸಕಾರಾತ್ಮಕ ಜಿಡಿಪಿ ಕಂಡು ಬರಲಿವೆ ಜಗತ್ತಿನ ಕೆಲವೇ ರಾಷ್ಟ್ರಗಳಲ್ಲಿ ಭಾರತ ಸಹ ಸೇರಿದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿ ಅಂದಾಜಿನ ಪ್ರಕಾರ, 2021–22ರಲ್ಲಿ ಭಾರತದ ಆರ್ಥಿಕತೆ ಅತಿ ಹೆಚ್ಚು ಬೆಳವಣಿಗೆ ಕಾಣಲಿದೆ.
ಲಾಕ್‌ಡೌನ್ ಅವಧಿಯಲ್ಲಿ ಇಂಟರ್‌ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್‌ನಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಎಟಿಎಂಗಳು ಶೇ. 91ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಿವೆ. ಆರ್‌ಬಿಐ ಕ್ರಮಗಳಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣದ ಹರಿವು ಕಂಡು ಬಂದಿದೆ.
ನಬಾರ್ಡ್, ಎಸ್‌ಐಡಿಬಿಐ, ಎನ್‌ಎಚ್‌ಬಿ ಸೇರಿದಂತೆ ಹಣಕಾಸು ಸಂಸ್ಥೆಗಳಿಗೆ ₹50,000 ಕೋಟಿ ವಿಶೇಷ ಹಣಕಾಸು ಸೌಲಭ್ಯ ನೀಡಲಾಗುತ್ತದೆ. ಲಾಕ್‌ಡೌನ್ ಅವಧಿಯಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ.
ಪ್ರಸ್ತುತ ಚಾಲ್ತಿಯಲ್ಲಿರುವ ಸಾಲಗಳ ಪಾವತಿ ಮೇಲೆ ಬ್ಯಾಂಕ್‌ಗಳು ನೀಡಿರುವ ತಾತ್ಕಾಲಿಕ ತಡೆಗೆ 90 ದಿನಗಳ ಎನ್‌ಪಿಎ ಅನ್ವಯವಾಗುವುದಿಲ್ಲ .
ದೇಶದ ಕೋವಿಡ್–19 ಪರಿಸ್ಥತಿಯನ್ನು ಸಮೀಪದಿಂದ ಆರ್‌ಬಿಐ ಗಮನಿಸುತ್ತಿರುವುದಾಗಿ ಶಕ್ತಿಕಾಂತ ದಾಸ್ ಹೇಳಿದರು. ಮುನ್ನೆಲೆಯಲ್ಲಿ ನಿಂತು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮೆಚ್ಚುಗೆ ಸೂಚಿಸಿದರು.
ಬ್ಯಾಂಕಿಂಗ್ ವ್ಯವಸ್ಥೆ ಮುಂದುವರಿಸಲು ಸಹಕಾರಿಯಾಗಿರುವ ಆರ್‌ಬಿಐ ಸಿಬ್ಬಂದಿಯ ಕಾರ್ಯಾಚರಣೆ ನಡೆಸಿರುವುದಾಗಿ ತಿಳಿಸಿದ ಅವರು, ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದರು.