ತುಮಕೂರು ನಗರದ ಶೇಷಾದ್ರಿಪುರಂ ಪಿಯು ಕಾಲೇಜಿನ ವಿದ್ಯಾರ್ಥಿಗಳು 2022 ನೇ ಸಾಲಿನಲ್ಲಿ ವಿದ್ಯಾರ್ಥಿಗಳು ನೀಟ್ ಮತ್ತು ಸಿ.ಎ. ಫೌಂಡೇಶನ್ ನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನೀಟ್ ನಲ್ಲಿ ಸಾಧನೆ ಮಾಡಿರುವ ನಿರೀಕ್ಷ ಸಿದ್ಧಗಂಗ ಮೆಡಿಕಲ್ ಕಾಲೇಜು ತುಮಕೂರು, ಚೈತ್ರ ಎಂ.ಎನ್. ಮಂಡ್ಯ ಮೆಡಿಕಲ್ ಕಾಲೇಜು, ಪ್ರತೀಕ್ಷ ಕೆ. ಜಿ. ಸಿದ್ಧಾರ್ಥ ಮೆಡಿಕಲ್ ಕಾಲೇಜು ತುಮಕೂರು ಇಲ್ಲಿ ದಾಖಲಾತಿ ಪಡೆದ್ದಾರೆ. ಸಿ.ಎ. ಫೌಂಡೇಶನ್ ನಲ್ಲಿ ಕೋಮಲ,ಎಂ.ಎ, ನಿಸರ್ಗ ಎಚ್.ಆರ್., ಪ್ರತ್ಯುಷ್ ಎನ್.ಬಿ. ಸಾಧನೆ ಮಾಡಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯದರ್ಶಿಗಳಾದ ನಾಡೋಜ ಡಾ.ವೂಡೇ.ಪಿ.ಕೃಷ್ಣ ರವರು ಸನ್ಮಾನ ಮಾಡಿದರು
ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಬೇಕು. ಒಳ್ಳೆಯ ಶಿಕ್ಷಣ ಪಡೆದು ಸಮಾಜಸೇವೆ ಮಾಡಿ ಉತ್ತಮ ಪ್ರಜೆಗಳು ಎನಿಸಿಕೊಳ್ಳಬೇಕು. ಉತ್ತಮ ಚಿಂತನೆಗಳನ್ನು ಮಾಡಿ ಅವುಗಳಿಂದ ಚಿಂತನಾ ನಾಯಕರಾಗಬೇಕು. ವಿದ್ಯಾರ್ಥಿಗಳು ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ತುಮಕೂರಿನಲ್ಲಿ ನಮ್ಮ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯು ಈ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಉಳಿದ ವಿದ್ಯಾರ್ಥಿಗಳು ಇವರಂತೆ ಸಾಧನೆ ಮಾಡಿ ಉನ್ನತ ವ್ಯಾಸಂಗಕ್ಕೆ ಹೋಗಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಬ್ಲ್ಯೂ. ಡಿ. ಅಶೋಕ್, ಪ್ರಾಂಶುಪಾಲರಾದ ಪ್ರೊ. ಬಸವಸರಾಜು ಬಿ.ವಿ, ಶೇಷಾದ್ರಿಪುರಂ ಪಿಯು ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.