ತುಮಕೂರು: ಸ್ಮಾರ್ಟ್ಸ್ ಸಿಟಿ ಯೋಜನೆಯಡಿ ನಗರದ ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣದ ನಿರ್ಮಾಣ ಕಾಮಗಾರಿಯು ಆರಂಭವಾಗುತ್ತಿದೆ. ಈ ಹಿನ್ನಲೆಯಲ್ಲಿ ನವೆಂಬರ್ ೧೮ ರಿಂದ ಜೆಸಿ ರಸ್ತೆಯಲ್ಲಿರುವ ಕೆಸ್ಸಾರ್ಟಿಸಿ ಘಟಕ ೧ರ ಸ್ಥಳಕ್ಕೆ ತಾತ್ಕಾಲಿಕವಾಗಿ ಬಸ್ಸು ನಿಲ್ದಾಣ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆಸ್ಸಾರ್ಟಿಸಿ, ಸ್ಮಾರ್ಟ್ಸಿಟಿ ಮಹಾನಗರ ಪಾಲಿಕೆ ಹಾಗೂ ಪೋಲಿಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ತುಮಕೂರು ನಗರದಲ್ಲಿರುವ ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣ ಹೈಟೆಕ್ ಆಗಿ ನಿರ್ಮಾಣ ಮಾಡಲು ಸ್ಮಾಟ್ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಯು ಪೂರ್ಣ ಗೊಳ್ಳುವರೆಗೂ ಈಗಿರುವ ಬಸ್ಸು ನಿಲ್ದಾಣದ ಹತ್ತಿರದಲ್ಲಿರುವ ಜೆಸಿರಸ್ತೆಯ ಕೆಸ್ಸಾರ್ಟಿಸಿ ಬಸ್ಸು ಡಿಪೋ ಸ್ಥಳಕ್ಕೆ ನಿಲ್ದಾಣ ಸ್ಥಳಾಂತರಿಸಿ ಅಲ್ಲಿಂದ ಬಸ್ಸುಗಳನ್ನು ಓಡಿಸಿದರೆ ಸಾರ್ವಜನಿಕರಿಗೆ ಅನೂಕೂಲವಾಗಲಿದೆ ಎಂದರು.
ಬಸ್ಸುಗಳು ಹೊಸ ಸ್ಥಳದಿಂದ ಕಾರ್ಯಾಚರಣೆ ಆರಂಭಿಸುವ ಮೊದಲು ಅಶೋಕ ರಸ್ತೆ, ಜೆಸಿ ರಸ್ತೆ, ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆ ಸೇರಿದಂತೆ ನಿಲ್ದಾಣವನ್ನು ಸಂದಿಒಸುವ ರಸ್ತೆಗಳು ಸ್ವಚ್ಛವಾಗಿರಬೇಕು.ಬಸ್ಸುಗಳ ಸಂಚಾರಕ್ಕೆ ಸಮರ್ಪಕವಾಗಿರುವಂತೆ ನವೆಂಬರ್ ೧೫ರೊಳಗೆ ಈಗಾಗಲೇ ಕೈಗೊಂಡಿರುವ ಕಾಮಗಾರಿ ಪೊರ್ಣಗೋಳಿಸಬೇಕು ಎಂದು ಸೂಚನೆ ನೀಡಿದರು.
ಜೆಸಿ ರಸ್ತೆ, ಪ್ರಶಾಂತ ಚಿತ್ರಮಂದಿರ ರಸ್ತೆ, ಕೆನರಾಬ್ಯಾಂಕ್ ರಸ್ತೆ ಹಾಗೂ ಆಶೋಕ ರಸ್ತೆಗಳಲ್ಲಿ ವಾಹನ ನಿಲುಗಡೆ ಮುಕ್ತ ರಸ್ತೆಯನ್ನಾಗಿ ಘೋಷಿಸಬೇಕಾಗಿದೆ. ಗುಬ್ಬಿವೀರಣ್ಣ ಕಲಾ ಕ್ಷೇತ್ರದ ರಸ್ತೆಯಲ್ಲಿ ಕ್ಯಾಂಟರ್ಗಳು ಗೂಡ್ಸ್ ವಾಹನಗಳ ನಿಲ್ದಾಣವಿದ್ದು ಬೇರೆಡೆಗೆ ಸ್ಥಳಾಂತರಿಸಬೇಕಿದೆ. ಈ ವಾಹನಗಳು ಟ್ರಕ್ ಟರ್ಮಿನಲ್ಲಿ ನಿಲುಗಡೆ ಮಾಡಿಕೊಳ್ಳಲ್ಲಿ ನಗರದ ಒಳಗಡೆ ದೊಡ್ಡ ವಾಹನಗಳ ಪಾರ್ಕಿಂಗ್ಗೆ ಅವಕಾಶವಿಲ್ಲ
ಮಂಡಿಪೇಟೆ ಸೇರಿದಂತೆ ನಗರದ ವಹಿವಾಟು ಪ್ರದೇಶಗಳಿಗೆ ಸರಕು ಗಳನ್ನು ತರುವ ದೊಡ್ಡ ವಾಹನಗಳಿಗೆ ರಾತ್ರಿ ೯ ಗಂಟೆಯಿಂದ ಬೆಳಿಗ್ಗೆ ೮ ಗಂಟೆಯವರೆಗೆ ಒಳ ಪ್ರವೇಶಿಸಲು ಅವಕಾಶ ನೀಡಿದರೆ ಸೂಕ್ತ. ಇದರಿಂದ ನಗರದ ಸಂಚಾರ ದಟ್ಟಣೆ ತಡೆಗಟ್ಟಬಹುದು. ಈ ಕುರಿತು ಅಧಿಸೂಚನೆ ಹೊರಡಿಸಲು ಸೂಕ್ತ ಪ್ರಸ್ತಾವನೆ ಇನ್ನೆರಡು ದಿನಗಳಲ್ಲಿ ಸಲ್ಲಿಸುವಂತೆ ತುಮಕೂರು ಡಿವೈಎಸ್ಪಿ ತಿಪ್ಪೇಸ್ವಾಮಿ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಬಸ್ಸು ನಿಲ್ದಾಣದ ಬದಲಾವಣೆ ಹಾಗೂ ರಸ್ತೆ ಮಾರ್ಗದ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಪ್ರಚಾರ ನೀಡಬೇಕು. ರೂಟ್ಮ್ಯಾಪ್ನ ಬಗ್ಗೆ ೩೦ ಸೆಕೆಂಡಿನ ವಿಡೀಯೋ ಸಿದ್ದಪಡಿಸಿ ವಾಟ್ಸಾಪ್ ಗ್ರೂಫ್ಗಳಲ್ಲಿ ಶೇರ್ ಮಾಡಬೇಕು. ತಾತ್ಕಾಲಿಕ ಬಸ್ಸು ನಿಲ್ದಾಣಕ್ಕೆ ಹೊಂದಿಕೊಂಡಂತೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಮುಂಭಾಗದಲ್ಲಿ ಆಟೋಗಳಿಗೆ ನಿಲ್ದಾಣ ಕಲ್ಪಿಸಲಾಗುವುದು ಎಂದರು.
ನಿರ್ಮಾಣ ಕಾಮಗಾರಿ ಕೈಗೊಂಡಿರುವ ಎಂ.ಜಿ ಕ್ರೀಡಾಂಗಣ ಹಾಗೂ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಕಾಂಕ್ರೀಟ್, ಜಲ್ಲಿ ಸೇರಿದಂತೆ ಅವಶ್ಯಕತೆಯಿರದ ತ್ಯಾಜ್ಯ ವಸ್ತುಗಳನ್ನು ತುಮಕೂರು ನಗರದ ಹೊರವಲಯದ ಅಮಲಾಪುರದಲ್ಲಿ ಗುರ್ತಿಸಿರುವ ಪ್ರದೇಶದಲ್ಲಿ ಸುರಿಯುವಂತೆ ಇಂಜಿನಿಯರ್ಗಳಿಗೆ ಸೂಚಿಸಿದ ಅವರು ತ್ಯಾಜ್ಯ ವಸ್ತುಗಳನ್ನು ಪುನರ್ ಬಳಕೆ ಮಾಡಲು ಚಿಂತಿಸಲಾಗಿದೆ ಎಂದು ಹೇಳಿದರು.ಳ್ಳಿ ಪಂಚಾಯತಿ ಸೇರ್ಪಡೆ ಮಾಡಿದರೆ ಅನುಕೂಲವಾಗುತ್ತದೆ.
ಕೊಳೆತು ನಾರುತಿದೆ ಖಾಸಗಿ ಬಸ್ ನಿಲ್ದಾಣ
ಸ್ಮಾರ್ಟ್ ಸಿಟಿ ಏನೋ ಸರಿ. ಆದರೆ ಖಾಸಗಿ ಬಸ್ ನಿಲ್ದಾಣದ ಪರಿಸ್ಥಿತಿಯನ್ನು ಸರಿಮಾಡುವುದರತ್ತಲೂ ಗಮನ ಹರಿಸಬೇಕು, ಈ ನಿಲ್ದಾಣ ಕೊಳೆತು ನಾರುತ್ತಿದೆ. ಕೊಳೆಯನ್ನು ಮೊದಲು ತೆಗೆಯಿರಿ. ನಂತರ ಕೋಟ್ಯಂತರ ರೂಪಾಯಿ ಕಾಮಗಾರಿ ಮಾಡಿ. ಜಿಲ್ಲಾಧಿಕಾರಿ ಕಚೇರಿಯ ಕೂಗಳತೆ ದೂರದಲ್ಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಜಿಲ್ಲಾಧಿಕಾರಿ ಒಮ್ಮೆ ಭೇಟಿ ಕೊಟ್ಟರೆ ಸಿಟಿಯ ನಿಜ ದರ್ಶನ ಆಗಲಿದೆ.
ಕರಿಬಸವಯ್ಯ. ವಕೀಲರು