ಬೇಸಿಗೆಯ ತಾಪ ಕಳೆದು ಮಳೆಯ ತಂಪು ಇಳೆಯನ್ನಾವರಿಸಿರುವಾಗ ಬೇಸಿಗೆ ಎಂದರೆ ಬಾಯಲ್ಲಿ ನಿರೂರಿಸುವ ಮಾವು ಹಲಸಿನ ಬಗ್ಗೆ ಇಲ್ಲಿ ಒಂದಷ್ಟು ಚುಟುಕಗಳನ್ನು ಕವಯಿತ್ರಿ ಡಾ ರಜನಿ ಯವರು ರಚಿಸಿದ್ದಾರೆ.
ಬಿಸಿಲು
………
ಬಿಸಿಲಿಗೆ ಬೈದು
ಬಸವಳಿದವರು
ಮಳೆಗೆ
ತಂಪಿಗೆ
ಧನ್ಯವಾದ ಹೇಳಲಿಲ್ಲ.
ಮಳೆ
—‐–
ನಿನ್ನಾಣತಿ
ಎನಗಿಲ್ಲ ..
ತಗ್ಗು
ಬೋರೇ ನನಗೆ ಗೊತ್ತಿಲ್ಲ.
ಸ್ನಾನ
……
ಮರಕ್ಕೆ ,
ಕಟ್ಟಡಕ್ಕೆ ,
ಭೂಮಿಗೆ ,
ನದಿಗೆ ,
ಕೊನೆಗೆ….
ಸಮುದ್ರಕ್ಕೆ
Shower ಮಾಡಿಸುವ ಶಕ್ತಿ
ಮಳೆಗೆ ಮಾತ್ರ .
ಮಳೆ🌧🌨
…..
ಮಳೆ ಬಿದ್ದ
ಮೇಲೆ ..ತಿನ್ನು ಮಾವು
ಹಲಸು
ಎಂದವರು…
ನಾಟಿ ಕೋಳಿ
ತಂದರು.
ಹಲಸು
ಹಣ್ಣು
ಬಿಡಿಸಲು
ಬಾರದ ಪೇಟೆ
ಮಂದಿ
..ಬೀಜ ಸುಟ್ಟು
ತಿನ್ನುವರೇ..
ಹಲಸಿನ ಬಿತ್ತ ಹಾಕಿದ ಬ್ಯಾಳೆ
ಸಾರು …ಕಮ….ಕಂಡವರೇ?
ಮಾವು
ಹಲ್ಲಿ ನಲ್ಲಿ
ತೂತು
ಮಾಡಿ ಸೀಪಿ
ತಿನ್ನದವರು
ವಾಟೆ ವಾಟೆ
ಯಾರು ಎನ್ನುವರೇ ??
ಕಾಯುವುದು
ಎಂದರೆ
ಸುಮ್ಮನಲ್ಲ …..
ಮಳೆಗೆ ಕಾದoತೆ
ಕಾಯಬೇಕು…
ಬೇರೆ ದಾರಿ ಇಲ್ಲವೆಂದು
ತಿಳಿದು….