ಡಾ. ರಜನಿ ಎಂ
ಚಕ್ರ ಬಡ್ಡಿ
ನಿನ್ನ ಪ್ರೀತಿಯನ್ನು
ಬಡ್ಡಿ ಸಮೇತ
ತೀರಿಸಲು ಹೋಗಿ
ಆಯಿತಲ್ಲ
ಚಕ್ರ ಬಡ್ಡಿ…
ಅಸಲೂ ತೀರುತ್ತಿಲ್ಲ.
ಪ್ರೀತಿಯ ಲೆಕ್ಕ
ನೀನು
ಶೂನ್ಯ ದಲ್ಲಿ
ಹುಟ್ಟಿ
ಶೂನ್ಯಕ್ಕೇ
ತಳ್ಳುವ
ಗುರು.
ನಾನು
ಎಲ್ಲಾ ಲೆಕ್ಕ
ಪ್ರಯತ್ನಿಸಿ ದರೂ
ಕೇವಲ ಪಾಸು
ಮಾಡುವ
ಜಿಪುಣಿ ನೀನು.
ನಿನ್ನ ಪ್ರೀತಿ
ಹೇಗೆಂದರೆ
ಮಗ್ಗಿ..
ಮುಗಿಯವ ಮುನ್ನ
ಬಲು ಮತ್ತು.
ಕೋಪದಲ್ಲಿ
ವ್ಯವಕಲನ…
ಕೋಪ
ಇಳಿದ ನಂತರ
ಬರೇ
ಸಂಕಲನ
ಗುಣಾಕಾರ ಪ್ರಿಯೆ
ನಿನ್ನ…ಮೋಹ
ನಾನೂ ನೀನೂ
ಸಮ
ಎಂದು ಸಮೀಕರಣ
ಮಾಡಲು ಹೋಗಿ
ನಾನು
ಸೋತಿದ್ದು.