Saturday, July 20, 2024
Google search engine
Homeಜನಮನಶಿಕ್ಷಕರ ದಿನಾಚರಣೆ: ಪ್ರತಿ ದಿನ ನೆನಪಾಗುವ ನನ್ನ ಗುರುಗಳು

ಶಿಕ್ಷಕರ ದಿನಾಚರಣೆ: ಪ್ರತಿ ದಿನ ನೆನಪಾಗುವ ನನ್ನ ಗುರುಗಳು

ಶಿಲ್ಪಾ ಎಂ


ನಾವು ಅಂಗನವಾಡಿಗೆ ಹೋಗುವ ವಯಸ್ಸಾದರು ನಮ್ಮೂರಿನಲ್ಲಿ ಅಂಗನವಾಡಿಯೆ ಇರದ ದಿನಗಳಲ್ಲಿ ಪ್ರ್ಯೆಮರಿ ಶಾಲೆಯ ಮೇಷ್ಟ್ರು ನಮಗೆ ಅಕ್ಷರಗಳನ್ನು ಕಲಿಸಲು ಫ್ರಾರಂಭಿಸಿದ್ದರು.

ನಾವು ಖುಷಿಯಿಂದ ಶಾಲೆಗೆ ಹಾಜರುಗುತಿದ್ದೆವು. ಆ ಸಮಯಕ್ಕೆ ಅಂಗನವಾಡಿ ನಮ್ಮೂರ ದೇವಸ್ಥಾನದಲ್ಲಿ ಫ್ರಾರಂಭವಾಗಿತ್ತು ಮತ್ತೆ ನೀವು ಅಂಗನವಾಡಿಗೆ ಹೋಗಬೇಕು ಎಂದಾಗ ಹಠ ಮಾಡಿ ಶಾಲೆಯಲ್ಲೆ ಉಳಿದೆವು.

ಅಷ್ಟು ಚೆಂದ ಕಲಿಕೆ ನಮ್ಮ ಮೇಷ್ಟ್ರೆಯಿಂದನೇ ಆಗುತಿತ್ತು ಬಿಟ್ಟು ಹೋಗುವ ಮನಸೆ ಇರಲಿಲ್ಲ. ಅಂಗನವಾಡಿಯನ್ನು ಶಾಲೆಯಲ್ಲೆ ಕಲಿತು ಒಂದನೇ ತರಗತಿಯಿಂದ ೫ ನೇ ತರಗತಿ ಅಲ್ಲೆ ಮುಂದುವರೆಯಿತು.

ನಮ್ಮ ಮೇಷ್ಟ್ರು ಬಸ್ಸು ಹತ್ತಿ ಬಂದು ಒಂದು ಕಿ.ಲೋ ಮೀಟರ್ ನೆಡೆದು ನಮ್ಮೂರಿನ ಶಾಲೆಗೆ ಬರುತ್ತಿದ್ದರು. ಈಗ ನನ್ನ ಕಲ್ಪನೆಯಲ್ಲಿರುವ ಗುರುಕುಲ ಆಗ ನಮ್ಮ ಶಾಲೆಯೆ ಗುರುಕುಲದಂತಿತ್ತು ಎಂದು ಹೆಮ್ಮೆ ಆಗುತ್ತದೆ.

ಶಿಕ್ಷಣ ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದು ಎಂದು ನಮ್ಮ ಮೇಷ್ಟ್ರು ಹೆಚ್ಚು ತಿಳಿದಿದ್ದರು ಎನಿಸುತ್ತಿದೆ.

ಶಾಲೆ ಚಿಕ್ಕದಾದರು ಜೀವನಕ್ಕೆ ಬುನಾದಿ ಹಾಕುವ ಪ್ರ್ಯೆಮರಿ ಸ್ಕೂಲ್ ಗಳ ಶಿಕ್ಷಕರ ಪಾತ್ರ ಮತ್ತು ಶಿಕ್ಷಣ ದೊಡ್ದದಿರುತ್ತದೆ.

ನಮ್ಮ ಚಿಕ್ಕ ಶಾಲೆಯನ್ನು ಸ್ವಚ್ಛ ಮಾಡಲು ಮುಂದಾಗುತಿದ್ದ ಶಿಕ್ಷರೊಟ್ಟಿಗೆ ಮಕ್ಕಳು ಕೈ ಜೋಡಿಸಿ ಸ್ವಚ್ಚತೆಯ ಪಾಠ ಕಲಿಯಿತಿದ್ದೆವು .

ಹಲಗೆಗಳನ್ನು ಜೋಡಿಸಿ ಶಿಸ್ತಾಗಿ ಕೂರುವ ಅಭ್ಯಾಸ ಮಾಡಿಸಿದ್ದರು. ಅವರು ಬರುವವರೆಗು ಓದು ಬರಹದಲ್ಲಿ ನಿರತರಾಗುತ್ತಿದ್ದೆವು.

ಎಂತಹ ದಡ್ಧ ಮಗುವಿಗು ಅಕ್ಷರ ಕಲಿಸುವುದರಲ್ಲಿ ಸೋಲುತ್ತಿರಲಿಲ್ಲ. ಸಕಾ೯ರಗಳಿಂದ ಆಗ ಅಷ್ಟೇನು ಸೌಲಭ್ಯಗಳಿರಲಿಲ್ಲ ಆದರೆ ಅದನ್ನೆ ನೆಪ ಮಾಡಿಕೊಳ್ಳದೆ ಅನಾವಶ್ಯಕವಾಗಿ ಏಟು ಕೊಡದೆ ಕಲಿಸುತ್ತಿದ್ದರು.

ನಮ್ಮ ಜೊತೆ ಓದುತ್ತಿದ್ದ ಒಬ್ಬ ಹುಡುಗ ಅಂಗವಿಕಲನಿದ್ದ ಅವನಿಗೆ ಕಲಿಸುವುದು ಕಷ್ಟವಿತ್ತು ಆದರೆ ನಮ್ಮ ಮೇಷ್ಟ್ರು ಅವನಿಗೆ ಕಲಿಸುವುದರಲ್ಲಿ ಸೋತಿರಲಿಲ್ಲ ಅವನಿಗೆ ಕಲ್ಲು ಹೂ ಎಲೆ ಇಂಗೆ ತುಂಬಾ ಉದಾಹರಣೆಗೆಯೊಟ್ಟಿಗೆ ಅಕ್ಷರ ಕಲಿಸಿದ್ದರು ನಮ್ಮೂರಿಗು ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದರು.

ನಾವು ಊಟ ಮಾಡುವಾಗಲೆಲ್ಲ ನಮ್ಮೂಟ್ಟಿಗೆ ಕೂತು ಊಟ ಮಾಡುತ್ತಿದ್ದರು ಯಾರಾದರೂ ಊಟವಿಲ್ಲದೆ ಬಂದರೆ ತಮ್ಮ ಊಟವನ್ನೆ ಕೊಟ್ಟು ಮಕ್ಕಳನ್ನು ಶಾಲೆಯಲ್ಲಿದ್ದಾಗ ತಾಯಿಯಂತೆ ಪೋಷಿಸುತ್ತಿದ್ದರು.

ಸ್ವತಂತ್ರ ದಿನ ಗಣರಾಜ್ಯೋತ್ಸವ ಇಂತಹ ದಿನಗಳಲ್ಲಿ ಎಲ್ಲರಿಗೂ ನೃತ್ಯ ಹಾಡುಗಳನ್ನು ಕಲಿಸಿ ಅವಕಾಶಕೊಟ್ಟು ಧ್ಯೆಯ೯ ತುಂಬುತಿದ್ದರು.

ಅವರೊಮ್ಮೆ ೫ ದಿನ ಟ್ರ್ಯೆನಿಂಗ್ ಹೋಗಿದ್ದರು ಅವರ ಬದಲು ಬೇರೆ ಮೇಷ್ಟ್ರು ಬಂದಿದ್ದರು ಅವರು ನಮಗೆ ಟೆಸ್ಟ್ ಕೊಟ್ಟರು ನಾವೇಲ್ಲ ದೂರ ದೂರ ಕೂತು ಬರೆಯಲು ಶುರುಮಾಡಿದೆವು ಆದರೆ ಮೇಷ್ಟ್ರು ಅಯ್ಯೊ ಬುಕ್ ನೋಡಿಕೊಂಡು ಬರಿರಿ ಅಂದರು ನಾವು ಇಲ್ಲ ಸರ್ ನಮ್ಮ ಮಾಷ್ಟ್ರು ಬ್ಯೆತ್ತಾರೆ ಅಂದಾಗ ಏನಾಗಲ್ಲ ಬರಿರೂ ನೋಡಿಕೊಂಡು ಅಂತ ಗದರಿದರು ನಾವು ಭಯಕ್ಕೆ ನೋಡಿಕೊಂಡೆ ಉತ್ತರಿಸಿದೆವು. ನಮ್ಮ ಮೇಷ್ಟ್ರು ಟ್ರ್ಯೆನಿಂಗ್ ಮುಗಿಸಿಕೊಂಡು ಬಂದು ಟೆಸ್ಟ್ ಪೇಪರ್ ನ ಕರೆಕ್ಷನ್ ಮಾಡುವಾಗ ಏನು ನೋಡಿಕೊಂಡ ಬರೆದರ ಅಂದರು ನಾವು ಹು ಅವರೇ ಹೇಳಿದ್ದರು ಎಂದಾಗ ಬೇಜಾರಾಗಿ ಆ ಪೇಪರ್ ನ ಕರೆಕ್ಷನ್ ಮಾಡುವುದನ್ನೆ ನಿಲ್ಲಸಿದರು ಅಂದರೆ ಕಾಪಿ ಮಾಡುವುದು ಸರಿಯಲ್ಲ ಅನ್ನುವುದನ್ನು ನಮಗೆ ಆ ಚಿಕ್ಕ ವಯಸ್ಸಿನಲ್ಲಿ ಆ ಪ್ರಜ್ಞೆಯನ್ನು ಅರಿವಾಗಿಸಿದ್ದರು.

ಇಂತಹ ಅದೆಷ್ಟುೂ ವಿಚಾರಗಳನ್ನು ನಮಗೆ ಕಲಿಸಿದ್ದ ಅವರು ಇಂದು ನಾವೆಲ್ಲ ಮಾತಿಗೆ ಕೂತಾಗ ಅವರನ್ನು ನೆನಪಿಸಿಕೊಳ್ಳದೆ ಇರಲಾರೆವು.
ನಾವು ಪ್ರ್ಯೆಮರಿ ಮುಗಿಸುವಷ್ಟರಲ್ಲಿ ಅವರು ನಮ್ಮ ಊರು ಶಾಲೆಯನ್ನು ಬಿಟ್ಟು ಬೇರೆ ಊರಿಗೆ ವಗಾ೯ವಣೆ ಆದರೂ ಆಮೇಲೆ ಬಂದವರೆಲ್ಲ ದಡ್ದರನೆಲ್ಲ ದಡ್ಡರಾಗಿ ಉಳಿಸಿದರು ಕಲಿತ ಅಕ್ಷರಗಳನೆಲ್ಲ ಮರೆಸಿದರು ಮಕ್ಕಳಲ್ಲಿದ್ದ ಬದ್ದತೆಯನ್ನು ಕಸಿದುಕೊಂಡರು.

ಬದ್ದತೆ ಶಿಸ್ತು ಕಲಿಕೆ ಕಲಿಸಿದ ಗುರುವಿಗೆ ನಮ್ಮ ಮತ್ತು ನಮ್ಮೊರಿನ ಮೆಚ್ಚಿನ ಗುರುವಿಗೆ ಎಂದು ಮರೆಯದ ವಸಂತಕುಮಾರ್ ಮೇಷ್ಟ್ರಿಗೆ ನಿಮ್ಮ ಚರಣಗಳಿಗೆ ನಮನ..

ಶಿಲ್ಪ ಎಂ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?