ತುರುವೇಕೆರೆ: ತಾಲ್ಲೂಕಿನ ಪೂರ್ವ ಮುಂಗಾರು ಭಿತ್ತನೆಗೆ ಹಾಗು ಈಗಾಗಲೇ ಭಿತ್ತನೆ ಮಾಡಿದ ಬೀಜ, ಸರಿಯಾಗಿ ಮೊಳೆಕೆಯಾಗದೆ ರೈತರು ಮುಗಿಲು ನೋಡುವಂತಾಗಿದೆ.
ತಾಲ್ಲೂಕಿನಾದ್ಯಂತ ಏಪ್ರೀಲ್ ತಿಂಗಳಲ್ಲಿ ವಾಡಿಕೆ ಮಳೆ44 ಆದರೆ ವಾಸ್ತವಿಕ ಮಳೆ 96 ಮಿ.ಮೀಟರ್ ಉತ್ತಮ ಮಳೆಯಾದ್ದರಿಂದ ರೈತರು ತಮ್ಮ ಭೂಮಿ ಹಸನು ಮಾಡಿಕೊಂಡರು.
ಇದಕ್ಕೂ ಮುನ್ನಾ ರೈತರು ಪೂರ್ವ ಮುಂಗಾರು ಭಿತ್ತನೆ ಬೀಜಗಳಾದ ಹೆಸರು, ಅಲಸಂಡೆ, ಉದ್ದು, ತೊಗರಿ ಆಗೆಯೇ ಎಳ್ಳು, ಜೋಳದ ಬೀಜ ಮತ್ತು ರಸ ಗೊಬ್ಬರಗಳನ್ನು ಸಂಗ್ರಹಿಸಿಕೊಂಡಿದ್ದರು.
ಏಪ್ರೀಲ್ ಕೊನೆಯಲ್ಲಿ ಮತ್ತು ಮೇ ತಿಂಗಳ ಆರಂಭದಲ್ಲಿ ತಾಲ್ಲೂಕಿನ ಅಲ್ಲಲ್ಲಿ ಸಾಧಾರಣ ಮಳೆಯಾಗಿತು. ಭೂಮಿ ಹದ ಮಾಡಿಕೊಂಡಿದ್ದ ರೈತರು ಪೂರ್ವ ಮುಂಗಾರು ಭಿತ್ತನೆಗೆ ಮುಂದಾದರು.
ಬಾಣಸಂದ್ರ, ಲೋಕಮ್ಮನಹಳ್ಳಿ, ಮಾದಿಹಳ್ಳಿ, ಅರಳೀಕೆರೆ, ಎ.ಹೊಸಹಳ್ಳಿ, ಗುರುವಿನಮಠ, ಕಡೆಹಳ್ಳಿ, ಅರೆಮಲ್ಲೇನಹಳ್ಳಿ, ತಂಡಗ, ಮಾವಿನ, ಮಾಯಸಂದ್ರ ವ್ಯಾಪ್ತಿಯ ಮುತ್ತಗದಹಳ್ಳಿ, ಭೈತರ ಹೊಸಹಳ್ಳಿ, ಗುಡ್ಡೇನಹಳ್ಳಿ ಸೇರಿದಂತೆ ಶೇ.40 ರಷ್ಟು ಭಿತ್ತನೆಯಾಗಿದೆ.
ದಂಡಿನಶಿವರ ಹೋಬಳಿಯ ಹಡವನಹಳ್ಳಿ, ಅಮ್ಮಸಂದ್ರ, ಕೊಂಡಜ್ಜಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು, ದಬ್ಬೇಘಟ್ಟ, ಕಸಬಾ, ಮಾಯಸಂದ್ರದ ಹೋಬಳಿಯ ಕೆಲವೆಡೆ ಭೂಮಿ ಹದ ಮಾಡಿಕೊಂಡಿದ್ದು ಮಳೆ ಇಲ್ಲದೆ ಭಿತ್ತನೆಯೇ ಆಗಿಲ್ಲ.
ಏಪ್ರೀಲ್ 27 ರಿಂದ ಮೇ.11ರವರೆಗೆ ಭರಣಿ ಮಳೆ ಬೀಳುವುದರಿಂದ ಈ ಅವಧಿಯೊಳಗೆ ಪೂರ್ವ ಮುಂಗಾರು ಭಿತ್ತನೆ ಮಾಡಬೇಕು. ಒಂದು ವೇಳೆ ತಡವಾಗಿ ಭಿತ್ತನೆ ನಡೆಸಿದರೆ ಇಳುವರಿ ಸರಿಯಾಗಿ ಬರುವುದಿಲ್ಲ. ಜೊತೆಗೆ ಮುಂಗಾರು ಭಿತ್ತನೆಗೂ ಅಡಚಣೆಯಾಗುತ್ತದೆ. ಇನ್ನು ಕೆಲವೆಡೆ ಮೊಳಕೆಯೊಡೆದಿರುವ ಹೆಸರು ತಾಕಿಗೆ ವಾರದೊಳಗೆ ಮಳೆ ಬರದಿದ್ದರೆ ಬೆಳೆ ಓಣಗುವ ಆತಂಕದಲ್ಲಿ ತಾಲ್ಲೂಕಿನ ರೈತರಿದ್ದಾರೆ.
ತಾಲ್ಲೂಕಿನ ನಾಲ್ಕು ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಸರು 24, ಅಲಸಂಡದೆ16.8, ಮತ್ತು ತೊಗರಿ 8 ಕ್ವಿಂಟಾಲ್ ಭಿತ್ತನೆ ಬೀಜ ದಾಸ್ಥಾನಿದೆ. ಇವುಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ.
ಕಸಬಾ ವ್ಯಾಪ್ತಿಯಲ್ಲಿ ಹೆಸರು ತಾಕೀನ ಗುರಿ 370 ಹೆಕ್ಟೇರ್, ಭಿತ್ತನೆಯಾಗಿರುವುದು 45, ಅಲಸಂದೆ ಗುರಿ 450 ಭಿತ್ತನೆ28, ಉದ್ದು 15 ಗುರಿ, 5 ಭಿತ್ತನೆ ಹೆಕ್ಟೇರ್.
ಮಾಯಸಂದ್ರ ಹೆಸರು ತಾಕು 350 ಗುರಿ, ಭಿತ್ತನೆ 40, ಅಲಸಂದೆ ಗುರಿ 450 ಭಿತ್ತನೆ 25, ಉದ್ದು ಗುರಿ15 ಭಿತ್ತನೆ 5 ಹೆಕ್ಟೇರ್ .
ದಂಡಿನಶಿವರ ಹೆಸರು ತಾಕಿನ ಗುರಿ 250 ಭಿತ್ತನೆ100, ಅಲಸಂದೆ ಗುರಿ 150 ಭಿತ್ತನೆ20, ಉದ್ದು ಗುರಿ 15 ಭಿತ್ತನೆ 5 ಹೆಕ್ಟೇರ್.
ದಬ್ಬೇಘಟ್ಟ ಹೆಸರು ತಾಕಿನ ಗುರಿ 280 25 ಹೆಕ್ಟೇರ್ ಭಿತ್ತನೆ, ಅಲಸಂದೆ ಗುರಿ 300 ಭಿತ್ತನೆ 20 ಹೆಕ್ಟೇರ್, ಉದ್ದು ಗುರಿ 15 ಭಿತ್ತನೆಯಾಗಿರುವುದು 5 ಹೆಕ್ಟೇರ್ ಪ್ರದೇಶವಾಗಿದೆಂದು ಇಲಾಖಾ ಮೂಲಗಳು ತಿಳಿಸಿವೆ.
ಪೂಜಾ.ಬಿ, ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕರು
- ‘ಪೂರ್ವ ಮುಂಗಾರು ಭಿತ್ತನೆಗೆ ಅವಕಾಶ ಇದೆ. ಈ ಸಲ ರೈತ ಸಂಪರ್ಕ ಕೇಂದ್ರಗಳಿಂದ ಭಿತ್ತನೆ ಬೀಜ ಪಡೆದವರಿಗೆ ಮುಂದಿನ ಬಾರಿ ಭೀಜ ವಿತರಣೆ ಮಾಡಲಾಗದು. ಆಗಾಗಿ ರೈತರು ಬೆಳೆದ ಬೀಜವನ್ನೇ ಸಂಗ್ರಹಿಸಿಟ್ಟುಕೊಂಡು ಭಿತ್ತನೆ ಮಾಡಬೇಕು.’
ವೆಂಕಟಯ್ಯ, ರೈತ
- ‘ಹೆಸರು ಕಾಳು, ಗೊಬ್ಬರ, ಉಳುಮೆಗೆಂದು ಸಾವಿರಾರು ರೂಪಾಯಿಗಳನ್ನು ಖರ್ಜು ಮಾಡಿ ಭಿತ್ತನೆ ಮಾಡಿದ್ದೇನೆ. ಇನ್ನೂ ಬೀಜ ಸರಿಯಾಗಿ ಹುಟ್ಟಿಲ್ಲ. ಮೂರ್ನಾಲ್ಕು ದಿನಗಳಲ್ಲಿ ಮಳೆ ಬರದಿದ್ದರೆ ಕಷ್ಟವಾಗುತ್ತದೆ’ .