ಶಿಲ್ಪಾ ಎಂ
ಮೊನ್ನೆ ಮೊನ್ನೆ ಸ್ವತಂತ್ರ ದಿನವನ್ನು ಆಚರಿಸಿದ ನಾವು ತಲೆ ತಗ್ಗಿಸಬೇಕಾದ ವಿಚಾರ ನೆಡೆದು ಹೋಗಿದೆ. ಅದು, ಸಾಮೂಹಿಕ ಅತ್ಯಾಚಾರ.
ಪದೇ ಪದೇ ಆಕ್ರೋಶಕ್ಕೆ ಕಾರಣವಾಗುವ ಪದೇ ಪದೇ ಚಚೆ೯ಗೆ ಸಿಗುವ ಮಾಮೂಲಿನ ವಿಚಾರವಾಗಿದೆ.
ಇದು ಮಾಮೂಲಿನ ವಿಚಾರವಾಗಿರುವುದೇ ವಿಷಾದ ಅನ್ನಿಸುತ್ತಿದೆ.
ಹೆಣ್ಣಿನ ಮೇಲಾದ ಅತ್ಯಚಾರ ಚಚೆ೯ಗೆ ಬಂದಾಗೆಲ್ಲ ಏನಾಗುತ್ತದೆ ಸುದ್ದಿವಾಹಿನಿಗಳು ಒಂದು ಎರಡು ದಿನ ಅಯ್ಯೋ ಪಾಪ ಎನ್ನುವರೇನೂ ,ಆರೋಪಿಗಳಿಗೆ ಉಗಿಯುವರೇನೂ, ಜನಸಮಾನ್ಯರು ಮನದಲ್ಲಿ ಆಕ್ರೋಶ ವ್ಯಕ್ತಪಡಿಸಿ ಮರೆತು ಬಿಡುವರೇನೂ ,ರಾಜಕಾರಣಿಗಳು ಮನಬಂದಂತೆ ಮಾತಾಡುವವರೇನೂ ,ಕಾನೂನು ಆರೋಪಿಗಳನ್ನು ಬಂಧಿಸಿಬಿಡಿವರೇನೂ.
ಇದರ ಮೇಲೆ ಇನ್ನೇನು ಆಗಿದೆ ಮತ್ತೆ ಮತ್ತೆ ಅಲ್ಲಿ ಇಲ್ಲಿ ಅತ್ಯಚಾರಗಳಾಗುತ್ತಲೇ ಇವೆ.
ಹೀಗಾಗಿ ಇದು ಮಾಮೂಲಿನ ವಿಚಾರವಾಗಿದೆ. ಅತ್ಯಾಚಾರದ ವಿಕೃತ ಯಾರಿಗೂ ಅರ್ಥವಾಗುತ್ತಿಲ್ಲವ ಎಂಬುದು ಪ್ರಶ್ನೇ ಆಗಿದೆ.
ಇದನ್ನು ತಡೆಯಲು ಯಾರು ಬರಬೇಕಿದೆ ಅಯೋಧ್ಯೆಯಲ್ಲಿ ಇರುವ ರಾಮನೇ? ಇಲ್ಲ ಮಧ್ಯೆ ರಾತ್ರಿ ಒಬ್ಬಳು ಹೆಣ್ಣು ಮಗಳು ಧ್ಯೆಯ೯ವಾಗಿ ಓಡಾಡಲು ಸ್ವತಂತ್ರ ವಿದೆಯೆಂದು ತಿಳಿಸಲು ಮತ್ತೆ ಸ್ವತಂತ್ರಿಸಲು ಗಾಂಧೀಜಿಯೆ?
ಅತ್ಯಚಾರಗಳಾದಗಲೆಲ್ಲ ಹೆಣ್ಣು ಪ್ರಶ್ನೆಗೆ ಬರುತ್ತಿದ್ದಾಳೆ ಇವಳು ಏಕೆ ಅಷ್ಟೂತ್ತಲಿ ಅಲ್ಲಿ ಹೋಗಿದ್ದಳು ? ೭ ಗಂಟೆಯ ಒಳಗೆ ಮನೆ ಸೇರಬೇಕಿರುವ ಹೆಣ್ಣು ರಾತ್ರಿ ಅಲ್ಲಿ ಏನು ಮಾಡುತ್ತಿದ್ದಳು?
ಹೌದು ಆಕೆ ಅಲ್ಲೆ ಏಕೆ ಹೋಗಿದ್ದಳು ? ಅವಳು ಮನುಷ್ಯಳಲ್ಲವೇ ಅವಳಿಗೆ ಒಂದು ಏಕಾಂತದಲ್ಲಿ ತನ್ನ ಗೆಳೆಯನೊಟ್ಟಿಗೆ ಓಡಾಡುವ ಹಕ್ಕಿಲ್ಲವೇ?
ಅವಳು ಅಲ್ಲಿ ಕೆಲಸವಿಲ್ಲದೆ ಗೆಳೆಯನೊಟ್ಟಿಗೆ ಹೋಗಿದ್ದಕ್ಕೆ ಅತ್ಯಾಚಾರ ವಾಯಿತು. ಅಲ್ಲಿ ಹೋಗಿದ್ದು ಅವಳದ್ದೆ ಅಪರಾಧವಿರಬಹುದು. ಇದು ಬೆಳಕಿಗೆ ಬಂದ ವಿಕೃತಿ ಹಾಗಾಗಿ ಜನ ಆಕೆಯನ್ನು ಪ್ರಶ್ನಿಸುತ್ತಿದ್ದಾರೆ.
ಆದರೆ ಬೆಳಕಿಗೆ ಬಾರದ ಬಂದರು ಮುಚ್ಚಿಹೋಗುವ ಪ್ರಕರಣಗಳ ಬಗ್ಗೆ ಜನರ ತಕರಾರು ಇಲ್ಲ ಏಕೆ ?
ಸಾಮಾಜಿಕ ಜಾಲಾತಾಣಗಳಲ್ಲಿ ಹೆಣ್ಣಿನ ಬಗ್ಗೆ ಪ್ರಶ್ನೆ ಎದ್ದಿವೆ. ಇದು ನಿಜವಾಗಲೂ ದುರಂತ.
ರಾತ್ರಿ ಪಾಳಯ ಮುಗಿಸಿ ಮನೆಗೆ ಬರುವ ಅದೆಷ್ಟು ಹೆಣ್ಣುಮಕ್ಕಳಿದ್ದಾರೆ ? ಇವರಿಗೆಲ್ಲ ಇವರ ಉತ್ತರ ಏನು. ಹಾಗಾದರೆ ರಾತ್ರಿ ಪಾಳಿ ಬೇಡವೇ? ಹಗಲು ಸಮಯದಲ್ಲಿ ಓಡಾಡುವುದೇ ಕಷ್ಟವಾಗಿರುವ ಈ ಸಮಾಜದಲ್ಲಿ ಹೆಣ್ಣಿಗೆ ನಿಭ೯ಯತೆ ಎಲ್ಲಿದೆ.
ಯೋಚಿಸಿ ಹೆಣ್ಣು ಎಲ್ಲಿಗಾದರೂ ಎಷ್ಟು ಹೊತ್ತಾಲ್ಲಾದರು ಒಂಟಿಯಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ ಇದಕ್ಕೆ ಕಾರಣ ಹೆಣ್ಣನ್ನು ಪ್ರಶ್ನೆಗೆ ತರುವುವರೇ.
ಅವಳ ಬಟ್ಟೆಯನ್ನು, ಅವಳ ಸಮಯವನ್ನು ಪ್ರಶ್ನಿಸುವುದಾದರೆ ಪುರುಷನಿಗೆ ನಿಮ್ಮ ಪ್ರಶ್ನೆಗಳೇನು?
ಅತ್ಯಾಚಾರ ನಿಲ್ಲಬೇಕೆಂದರೆ ಹೆಣ್ಣು ಮನೆಯಲ್ಲಿ ಬಂಧಿಯಾಗಬೇಕು. ಇದೇ ಮಾಗ೯ವಾದರೆ , ಹೆಣ್ಣು ಗಂಡು ಸಮಾನರೆಂದು ಸಾರಿ ಸಾರಿ ಹೇಳಿದ ಸಾವಿತ್ರಿ ಬಾ ಪುಲೆ ,ಅಂಬೇಡ್ಕರ್ ,ಗಾಂಧೀಜಿ, ಇವರೆಲ್ಲರ ಹೋರಾಟಕ್ಕೆ ಬೆಲೆ ಎಲ್ಲಿದೆ.
ನಾವು ಯೋಚಿಸಬೇಕಿದೆ ಪ್ರತಿ ಮನೆಯಲ್ಲಿ ಹೆಣ್ಣನ್ನು ಬೆಳೆಸುವಷ್ಟು ಸೂಕ್ಷ್ಮವಾಗಿ ಗಂಡನ್ನು ಬೆಳೆಸಬೇಕಿದೆ. ಪದೇ ಪದೇ ಅತ್ಯಾಚಾರಗಳಾಗುತ್ತಿವೆ. ಈ ವಿಷಯಕ್ಕೆ ಯಾರು ಕಾರಣರು? ಕಾನೂನು ,ಸಕಾ೯ರಗಳು ,ಅಲ್ಲದೇ ಸಮಾಜ ಕೂಡ?
ಗಂಡು ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಸಮಾಜ ಸೋತಿದೆ ಇದನ್ನು ಒಪ್ಪಿಕೊಳ್ಳಬೇಕಿದೆ.