ಪ್ರೊ. ಗಿರಿಜಾ
ಕೇಳಿಸಲೇ ಇಲ್ಲ ನಿಮಗೆ
ನಮ್ಮ ದನಿ
ಸಾಗರೋಪಾದಿಯಲ್ಲಿ ನಾವು ನಡೆದುಬಂದರೂ
ಕೇಳಿಸಲೇ ಇಲ್ಲ ನಿಮಗೆ
ನಮ್ಮ ದನಿ
ಸಾವುನೋವುಗಳ ಕಂಡು ಹೈರಾಣರಾದ ನಾವು ನ್ಯಾಯ
ಕೇಳಲು ಬಂದರೆ
ತಿಳಿಯಲೇ ಇಲ್ಲ ನಿಮಗೆ
ನಮ್ಮ ಅಳಲು
ನಮ್ಮ ದುಃಖ ದುಮ್ಮಾನಗಳ
ಹತಾಶೆಯ ಬದಿಗೊತ್ತಿ
ನೋವು ಸಂಕಟಗಳ ಮರೆತು
ದನಿ ಎತ್ತಿ ತಲೆ ಎತ್ತಿ ಮುನ್ನಡೆದರೊ
ಕೇಳಿಸಲೇ ಇಲ್ಲವೇ ನಮ್ಮ ಕೂಗು ನಿಮಗೆ
ಮಾರ್ದನಿಸುವುದು ನಮ್ಮ ದನಿಯೊ ನೊರ್ಪಟ್ಟು
ಇಂದಲ್ಲ ನಾಳೆ,
ಮತ್ತೆ ಬಂದೇ ಬರುವೆವು
ಮತ್ತಷ್ಟು ಶಕ್ತಿಯ ಹೊತ್ತು
ಇಂದು ಕೇಳಿಸದ ದನಿಯು
ಅಂದು ಕೇಳಲೇಬೇಕು
ಕೇಳಸಿಗದಿದ್ದರೆ ಮೇಳೈಸುವುದು
ಹೊಸ ಅಲೆಯೊಂದು
ನವ ಪೀಳಿಗೆಯೊಂದು
ಕೇಳಲೇ ಬೇಕು ಆಗ ನೀವು
ನಮ್ಮ ದನಿಯ