ವೆನ್ನಲ ಕೃಷ್ಣ
ಹೊಸ ವರ್ಷದ ಪ್ರತಿ ಕ್ಷಣ
ಆತ್ಮ ವಿಶ್ವಾಸವೆ ನೀನಿರುವೆ
ನೀ ಬರುವೆ ಜೊತೆ ಜೊತೆಗೆ
ಏರು ಪೇರುಗಳನ್ನು ದಾಟಿ
ಜೀವ ನದಿ ನಮ್ಮ ಜೀವನದಿ
ಸಾಗುತ್ತಿದೆ ಹೊತ್ತು ಹೊತ್ತಿಗೆ
ಮುಖ ಚಿತ್ರ ಬರೆದವರೊಬ್ಬರು
ಅಕ್ಷರಗಳ ಜೋಡಣೆಯೊಬ್ಬರು
ಒಳಗಿರುವುದು ನಮ್ಮ ಬರವಣಿಗೆ
ಮುನ್ನುಡಿ ಬರೆದವರೊಬ್ಬರು
ಬೆನ್ನುಡಿ ಹಾರೈಸಿದವರೊಬ್ಬರು
ನಮ್ಮದೇ ಹೂರಣ ಹೊತ್ತಿಗೆಗೆ
ಹಿಂದಿನ ನಡೆಯ ಅನುಭವ
ಇಂದು ಬರೆದ ಭಾವಕ್ಕೆ ತೋರಣ
ಆದರ್ಶವಾಗಲಿ ನಾಳಿನ ಬದುಕಿಗೆ
ಹೊಸ ವರ್ಷದ ಹೊಸ್ತಿಲಲ್ಲಿ
ದೃಢವಾದ ಸಂಕಲ್ಪ ನನ್ನದು
ನಾನೇ ಪಠ್ಯವಾಗಬೇಕು ಓದಿಗೆ. ||