ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 07/05/2022 ರಂದು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಎನ್ನುವ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಿಗೆ ಸನ್ಮಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿದ ನಿವೃತ್ತ ಯೋಧ ರಾದ ನಂಜುಂಡಯ್ಯ ಎಚ್ ಬಿ ಯವರು ಮಾತನಾಡಿ ಸಾವಿರಾರು ವರ್ಷಗಳಿಂದ ಅನೇಕ ಹಿರಿಯರು ತ್ಯಾಗ ಪರಿಶ್ರಮದಿಂದ ದೇಶವನ್ನ ನಿರ್ಮಾಣ ಮಾಡಿದ್ದಾರೆ. ಹಿಂದಿನ ಹಿರಿಯರ ಋಣವನ್ನು ತೀರಿಸುವುದೇ ಇಂದಿನ ಯುವಕರ ಪಾತ್ರವಾಗಿದೆ ಎಂದು ಹೇಳಿದರು .
ಅಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕುಮಾರ ಕೂಡ ಸಮವಸ್ತ್ರ ಧರಿಸಿ ಸಾಮಾನ್ಯನಂತೆ ವಿದ್ಯೆ ಕಲಿಯಬೇಕಿತ್ತು. ಸಮಾನತೆಗಾಗಿ ಸಮವಸ್ತ್ರ ಮುಖ್ಯಎಂದು ಹೇಳಿದರು.
ಯುದ್ಧ ಬೇಕೇ ? ಬುದ್ದ ಬೇಕೇ? ಎಂದು ಪ್ರಶ್ನಿಸಿದ ಅವರು ನಮಗೆ ಸ್ವಾಭಿಮಾನ ಆತ್ಮ ರಕ್ಷಣೆಗಾಗಿ ಹೋರಾಟ ಬೇಕು ಉಳಿದಂತೆ ಶಾಂತಿ ಕಾಪಾಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಮತ್ತೊರ್ವ ನಿವೃತ್ತ ಯೋಧ ರಾದ ಪಾಂಡುರಂಗಯ್ಯ ಅವರು ಮಾತನಾಡಿ ಭಾರತ ದೇಶದ ಸೈನಿಕ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಯೋಧ ರಾದ ನಾಗರಾಜಯ್ಯ ವಿ ಬಿ ಮತ್ತು ನಟರಾಜು ಬಿ.ಎಚ್.ಎಂ ಅವರು ಶಿಸ್ತು ಯಶಸ್ಸಿನ ಮಾರ್ಗ ಎಂದರು.
ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ್ ಬಿ ವಿ. ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.