Publicstory/prajayoga
ಹೊಸಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ವಿಪ ಸದಸ್ಯ
ಶಿರಾ: ಗ್ರಾಮೀಣ ಪ್ರದೇಶಗಳ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿ ಕೃಷಿ ಚಟುವಟಿಕೆಗಳಿಗೆ ಪ್ರೇರಣೆ ನೀಡುವ ಉದ್ದೇಶದಿಂದ ವರುಣ ಕೃಪೆ ತೋರಿದ್ದು, ದಶಕಗಳ ನಂತರ ಹಲವಾರು ಕೆರೆಗಳು ಭರ್ತಿಯಾಗಿ ತುಂಬಿ ಕೋಡಿ ಬಿದ್ದಿರುವುದು ಸಂತಸ ಮೂಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಹರ್ಷ ವ್ಯಕ್ತಪಡಿಸಿದರು.
ತಾಲೂಕಿನ ಹುಲಿಕುಂಟೆ ಹೋಬಳಿಯ ಹೊಸಹಳ್ಳಿ ಗ್ರಾಮದ ಕೆರೆ ತುಂಬಿ ಕೋಡಿ ಹರಿದಿದ್ದು, ಕೆರೆಯಲ್ಲಿ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಮದಲೂರು ಕಳ್ಳಂಬೆಳ್ಳ ಶಿರಾ ದೊಡ್ಡಕೆರೆ ಹೇಮಾವತಿ ವ್ಯಾಪ್ತಿಯ ಇತರೆ ಕರೆಗಳು ಭರ್ತಿಯಾಗಿದ್ದು ಬಿಟ್ಟರೆ ನೈಸರ್ಗಿಕವಾಗಿ ವರುಣನ ಕೃಪೆಯಿಂದ ಹಲವಾರು ಕೆರೆಗಳು ಭರ್ತಿಯಾಗಿ ಎರಡು ದಶಕವೇ ಕಳೆದಿತ್ತು. ಇದೀಗ ಕಾಮಗೊಂಡನಹಳ್ಳಿ, ಹೆಂದೊರೆ, ಹೊಸಹಳ್ಳಿ, ವೀರಪುರ, ಕಲ್ಲಹಳ್ಳಿ, ಕರಿರಾಮನಹಳ್ಳಿ, ಹುಳಿಗೆರೆ, ರಂಗಪುರ ಸೇರಿದಂತೆ ತಾಲೂಕಿನಲ್ಲಿ ಸುರಿದ ಕುಂಭದ್ರಣ ಮಳೆಗೆ ಸುಮಾರು 25 ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿರುವುದು ಮುಂಬರುವ ವರ್ಷಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಗ್ರಾಮಗಳಲ್ಲಿ ಜನನೆಮ್ಮದಿಯಿಂದ ಬದುಕಲು ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಹೊಸಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಅನ್ನಪೂರ್ಣಮ್ಮ ಶ್ರೀರಂಗಯ್ಯ, ಸದಸ್ಯರಾದ ಮಲ್ಲಿಕಾರ್ಜುನ್, ಗಂಗಾಧರ್, ಮಾಜಿ ಸದಸ್ಯ ಚಿದಾನಂದ್, ಪ್ರಸನ್ನ, ಪುಟ್ಟಯ್ಯ, ಮುಖಂಡ ಸಿದ್ದಲಿಂಗಪ್ಪ, ಗೋಪಿ ಕುಂಟೆ ಶ್ರೀನಿವಾಸ್, ನಾದೂರು ಕುಮಾರ್, ಮಾಜಿ ತಾಪಂ ಅಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಹೆಚ್. ಎಸ್. ಪ್ರಕಾಶ್, ಶಿವಣ್ಣ, ಹನುಮಂತರಾಯ, ಪಿಡಿಓ ತಿಪ್ಪೇಸ್ವಾಮಿ, ದೊಡ್ಡ ಹನುಮಯ್ಯ ಸೇರಿದಂತೆ ಹಲವಾರು ಮುಖಂಡರುಗಳು ಹಾಜರಿದ್ದರು.