Public story/prajayoga
ತುಮಕೂರು ಗ್ರಾಮಾಂತರದ ಸ್ವಾಂದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಅಜ್ಜಪ್ಪನಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ ದೇಗುಲದಲ್ಲಿ ಭಾನುವಾರ ರಾತ್ರಿ ಕಳ್ಳರು ಬೀಗ ಹೊಡೆದು ಹುಂಡಿ ಕಳವು ಮಾಡಿದ್ದಾರೆ.
ದೇಗುಲದಲ್ಲಿದ್ದ ಹುಂಡಿ ಕದ್ದ ಕಳ್ಳರು, ದೇಗುಲದ ಹೊರಗೆ ತೆಗೆದುಕೊಂಡು ಹೋಗಿ,ಹುಂಡಿಯಲ್ಲಿದ್ದ ರೂ. 2-3 ಲಕ್ಷ ಹಣ ಕದ್ದು,ಖಾಲಿ ಹುಂಡಿಯನ್ನು ಪೊದೆಯಲ್ಲಿ ಬಿಸಾಕಿ ಹೋಗಿದ್ದಾರೆ.
ಈ ಹಿಂದೆ ಮೂರು ಭಾರಿ ಇದೇ ದೇಗುಲದಲ್ಲಿ ಹುಂಡಿ ಕಳವು ಮಾಡಲಾಗಿತ್ತು,ನಾಲ್ಕನೇ ಭಾರಿ ಹುಂಡಿ ಕಳವು ಮಾಡಲಾಗಿದೆ.
ತಾಲೂಕು ಆಡಳಿತದ ನಿರ್ಲಕ್ಷ್ಯದಿಂದಾಗಿ ದೇಗುಲದಲ್ಲಿ ಪದೇ,ಪದೇ ಹುಂಡಿ ಕಳವು ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೂಡಲೇ ತಹಸೀಲ್ದಾರ್ ಗಮನವಹಿಸಿ ದೇಗುಲದಲ್ಲಿ ನಿರಂತರವಾಗಿ ಹುಂಡಿ ಕಳ್ಳತನವಾಗುತ್ತಿರುವುದನ್ನು ತಪ್ಪಿಸಲು ಕ್ರಮ ಜರುಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.