Public story
ತುಮಕೂರು : ರಕ್ತಕ್ರಾಂತಿಯಾಗದೆ ಯಾವುದೇ ದೇಶಕ್ಕೆ ಸ್ವಾತಂತ್ರ್ಯ ದೊರೆತ ಉದಾಹರಣೆಗಳಿಲ್ಲ. ಆದರೆ, ಶತ್ರುಗಳನ್ನು ಅಹಿಂಸೆ ಮುಖಾಂತರವೂ ಸೋಲಿಸ ಬಹುದು ಎನ್ನುವುದನ್ನು ಗಾಂಧೀಜಿ ಭಾರತದಲ್ಲಿ ತೋರಿಸಿಕೊಟ್ಟಿದ್ದರು ಎಂದು ತುಮಕೂರು ಕೆನರಾ ಬ್ಯಾಂಕ್ ಎಜಿಎಂ ರವಿ ಬಣ್ಣಿಸಿದರು.
ನಗರದ ಮಹಾಲಕ್ಷ್ಮೀ ನಗರದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಕೆನರಾ ಬ್ಯಾಂಕ್ ನ ಪ್ರಾಂತೀಯ ಕಚೇರಿಯ ವತಿಯಿಂದ ಭಾನುವಾರ ಉದ್ಯಾನವನ ಸ್ವಚ್ಛತೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅಹಿಂಸಾ ತತ್ವದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾನ್ ಚೇತನ. ಅದಕ್ಕಾಗಿ ಅವರನ್ನು ಇಡೀ ವಿಶ್ವವೇ ಗೌರವಿಸುತ್ತದೆ ಎಂದರು.
ಮಹಾತ್ಮ ಗಾಂಧಿ ಜಯಂತಿ ಆಚರಣೆಗಷ್ಟೇ ಸೀಮಿತವಾಗಬಾರದು. ಅವರ ತತ್ತ್ವಾದರ್ಶ, ಮೌಲ್ಯಗಳನ್ನು ಜೀವನದಲ್ಲಿ ಎಲ್ಲರೂ ಪಾಲಿಸುವಂತಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಸಿಬ್ಬಂದಿ ಶ್ರಮದಾನ ಮಾಡುವ ಮೂಲಕ ಸ್ವಚ್ಛತಾ ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ನ ವ್ಯವಸ್ಥಪಕಾರದ ವಿನಯ್ ಕುಮಾರ್, ರವೀಂದ್ರ ರೆಡ್ಡಿ, ಗಂಗಾಧರ್ ಇನ್ನಿತರರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಷನ್ :
ತುಮಕೂರು ನಗರದ ಮಹಾಲಕ್ಷ್ಮೀ ನಗರದಲ್ಲಿ ಗಾಂಧಿಜಯಂತಿ ಪ್ರಯುಕ್ತ ಕೆನರಾ ಬ್ಯಾಂಕ್ ನ ಪ್ರಾಂತೀಯ ಕಚೇರಿಯ ವತಿಯಿಂದ ಉದ್ಯಾನವನ ಸ್ವಚ್ಛತಾ ಕಾರ್ಯ ನಡೆಯಿತು.