ತೋವಿನಕೆರೆ: ಇಲ್ಲಿನ ಸಂತೆಯಲ್ಲಿ ವೀಳ್ಯದೆಲೆ ನೂರು ಎಲೆಗಳ ಒಂದು ಕಟ್ಟು ಎರಡು ಗಳಿನಿಂದ 150 ರೂಗೆ ಮಾರಾಟವಾಯಿತು.
ಜನವರಿ ತಿಂಗಳಲ್ಲಿ 100 ಗಡಿ ದಾಟಿ ಮಾರಾಟವಾದರೆ ಫೆಬ್ರವರಿ ಮೊದಲವಾರ 160 ತಲುಪಿ ನಂತರ 210 ಗೆ ತಲುಪಿ ಇತಿಹಾಸ ನಿರ್ಮಿಸಿತು.
ಮೂರು ವಾರಗಳಿಂದ 150 ರೂ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.
ಬೆಲೆ ಹೆಚ್ಚು ಇದ್ದರೂ ಮಾರುಕಟ್ಟೆಗೆ ಉತ್ತಮವಾದ ಎಲೆ ಮಾರಾಟಕ್ಕೆ ಬರುತ್ತಿಲ್ಲ.
ಹಬ್ಬಗಳು, ಜಾತ್ರೆಗಳು, ಮದುವೆಗಳು ಹೆಚ್ಚಾಗಿ ನಡೆಯುತ್ತಿದ್ದು ವೀಳ್ಯದೆಲೆ ಇಳುವರಿ ಚಳಿಯ ಕಾರಣದಿಂದ ಕಡಿಮೆಯಾಗಿದೆ. ಕಳೆದ ವರ್ಷ ಬಿದ್ದ ಮಳೆಯು ಇಳುವರಿ ಮೇಲೆ ಪರಿಣಾಮ ಬೀರಿದೆ. ವೀಳ್ಯದೆಲೆ ತೋಟಗಳಲ್ಲಿ ಶೇ 70 ರಷ್ಡು ಇಳುವರಿ ಕಡಿಮೆಯಾಗಿದೆ ಎನ್ನುತ್ತಾರೆ ಬೆಳೆಗಾರ ಲಿಂಗಸಂದ್ರದ ನಟರಾಜು.
ರೈತರು ಬಳ್ಳಿಯನ್ನು ಮರದಿಂದ ಇಳಿಸಿ ಭೂಮಿಗೆ ಅದ್ದಿಯುತ್ತಿದ್ದಾರೆ. ಮತ್ತೆ ಬಳ್ಳಿ ಚಿಗುರು ಬರ ಬೇಕು. ಇದೇ ವಾತಾವರಣ ಮುಂದುವರೆದರೆ ಎಲೆಗಳು ಬರುವುದು ತಡವಾಗಿ ಬೆಲೆ ಇನ್ನು ಹೆಚ್ಚಾಗ ಬಹುದು ತೋವಿನಕೆರೆ ಬೆಳೆಗಾರ ನಾರಾಯಣಪ್ಪ ನವರ ಅಭಿಪ್ರಾಯ.
ಚಿಲ್ಲರೆ ಮಾರಾಟಗಾರರು 150 ರಿಂದ 200 ರೂಗಳಿಗೆ ಒಂದು ಕಟ್ಟು ಮಾರಾಟ ಮಾಡುತ್ತಿದ್ದಾರೆ.
ತುಮಕೂರು ಜಿಲ್ಲೆಯ ತೋವಿನಕೆರೆಯಲ್ಲಿ ಪ್ರತಿ ಶುಕ್ರವಾರ ನಡೆಯುವ ಸಂತೆಗೆ ವೀಳ್ಯದೆಲೆ ಶತಮಾನಗಳಿಂದ ಮಾರಾಟಕ್ಕೆ ಬರುತ್ತದೆ. ಬೆಳೆಗಾರರೇ ನೇರವಾಗಿ ಗ್ರಾಹಕರಿಗೆ ಮತ್ತು ಮಧ್ಯವರ್ತಿ ಗಳಿಗೆ ಮಾರಾಟ ಮಾಡುವುದು ನಡೆಯುತ್ತಿದೆ.
ಇಲ್ಲಿನ ಕಟ್ಟು ಗಳಲ್ಲಿ ನೂರು ಎಲೆಗಳಿಗಿಂತ ಹೆಚ್ಚು ಇರುತ್ತವೆ. ಕಡಿಮೆ ಇಟ್ಟು ಮಾಡುವುದಿಲ್ಲವೆಂದು ಬೇರೆ ಸ್ಥಳದ ಗ್ರಾಹಕರು ನಂಬಿದ್ದಾರೆ.
ಪ್ರತಿ ಶುಕ್ರವಾರ
ಬೆಳಿಗ್ಗೆ ಏಳು ಗಂಟೆಗೆ ಪ್ರಾರಂಭವಾಗುವ ವೀಳ್ಯದೆಲೆ ಸಂತೆ ಹತ್ತು ಗಂಟೆಗೆ ಮುಕ್ತಾಯ ವಾಗುತ್ತದೆ.
ನೂರು ಕಟ್ಟಗಳ ಹಲವು ಪೆಂಡಿಗಳು ಮಾರಾಟಕ್ಕೆ ಬಂರುತ್ತಿದ್ದವು. ಈಗ ಒಂದು ಪೆಂಡಿಯೂ ಕಂಡು ಬರುವುದಿಲ್ಲ.
ಕೆಲವು ಚಿಲ್ಲರೆ ಮಾರಾಟಗಾರ ಹತ್ತು ರೂಗಳಿಗೆ ಮೂರು ಎಲೆಗಳನ್ನು ಮಾರಾಟ ಮಾಡ ಬೇಕು. ಬಹಳ ಕಷ್ಟ. ಮಾರಾಟ ಮಾಡುವುದನ್ನು ನಿಲ್ಲಿಸಿದ್ದಾರೆ.
ಪ್ರತಿ ದಿನ ಹಲವು ಸಲ ಎಲೆ ಅಡಿಕೆ ಜಿಗಿಯುತ್ತಿದ್ದ ಮಹಿಳೆಯರು ಒಂದೇ ಎಲೆಯನ್ನು ಹಲವು ತುಂಡ ಮಾಡಿ ಕೊಂಡು 2–3 ಸಲ ಉಪಯೋಗ ಮಾಡುತ್ತಿದ್ದಾರೆ.
ಕೆಲವು ಮಹಿಳೆಯರು ಇತರರ ಮುಂದೆ ಜಿಗಿಯದೇ ಕದ್ದು ಮುಚ್ಚಿ ಹಾಕಿ ಕೊಳ್ಳುವುದು ಈಗಲೂ ನಡೆಯುತ್ತಿದೆ.
ಹಲವು ದಶಕಗಳ ನಂತರ ಬೆಳೆಗಾರರು ನಿರಂತರವಾಗಿ ಉತ್ತಮ ಬೆಲೆಯನ್ನು ಪಡೆಯುತ್ತಿದ್ದಾರೆ
ಎನ್ನುತ್ತಾರೆ ಚಿಲ್ಲರೆ ವ್ಯಾಪಾರಿ ತೋವಿನಕೆರೆ ರಂಗನಾಥ ರಾವ್.