ತುಮಕೂರು ಗ್ರಾಮಾಂತರ ಅಭ್ಯರ್ಥಿ ಸುರೇಶಗೌಡರನ್ನು ಆರ್ಶೀವದಿಸಿದ ಪ್ರಧಾನಿ ನರೇಂದ್ರ ಮೋದಿ.
ತುಮಕೂರು: ರಾಷ್ಟ್ರಾಭಿವೃದ್ಧಿಯಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸಿದ್ದು, ದೇಶಕ್ಕೆ ಹೆಚ್.ಎ.ಎಲ್. ನಿಂದ ದೊಡ್ಡ ಮಟ್ಟದ ಲಾಭವಾಗಿದೆ. ಹೆಚ್.ಎ. ಎಲ್.ಹೆಸರೇ ಕಾಂಗ್ರೆಸ್ ನವರಿಗೆ ಗೊತ್ತಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು ಶುಕ್ರವಾರ ಸಂಜೆ ನಗರದ ಸರ್ಕಾರಿ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಅಭ್ಯರ್ಥಿಗಳ ಪರ ಮತ ಯಾಚಿಸಿ ಮಾತನಾಡಿದರು.
ಜನರತ್ತ ಕೈ ಮುಗಿದ ಪ್ರಧಾನಿ ನರೇಂದ್ರ ಮೋದಿ
ನಮ್ಮ ಸರ್ಕಾರದಿಂದ ಹೆಚ್ ಎ ಎಲ್‍ನ್ನು ಉನ್ನತ ದರ್ಜೆಗೇರಿಸಿದ್ದೇವೆ. ಕರ್ನಾಟಕದ ತುಮಕೂರು ಜಿಲ್ಲೆಯಲ್ಲೂ ಇದರ ಘಟಕ ಕಾರ್ಯನಿರ್ವಹಿಸುತ್ತಿದೆ. ದೇಶದ ರಕ್ಷಣೆಗೆ ಸುಧಾರಿತ ಹೆಲಿಕ್ಯಾಪ್ಟರ್ ಅನ್ನು ತಯಾರು ಗೊಳಿಸುವ ಅತ್ಯುನ್ನತ ಕಂಪನಿ ಇದಾಗಿದೆ. ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹೆಚ್‍ಎಎಲ್ ನ್ನೇ ದಿವಾಳಿಗೆ ತಂದಿತ್ತು. ಭ್ರಷ್ಟಾಚಾರದ ಮೂಲ ಭೇರು ಕಾಂಗ್ರೆಸ್‍ನಿಂದಲೇ ಚಿಗುರಿದೆ. ಕಾಂಗ್ರೆಸ್ 85% ಕಮೀಷನ್ ಪಡೆದು ದೇಶವನ್ನು ಹಾಳುಮಾಡಿದೆ ಎಂದರು.
ಯುವಕರ ಭವಿಷ್ಯದ ಬಗ್ಗೆ ಅವರಿಗೆ ದೂರ ದೃಷ್ಟಿಇಲ್ಲ. ತನ್ನ ಸುಳ್ಳನ್ನು ಒಪ್ಪಿಕೊಳ್ಳದೇ ಬಿಜೆಪಿಯ ಜನಪರ ಕಾರ್ಯಕ್ರಮಗಳನ್ನು ವಿರೋಧಿ ಸುವುದೇ ಅದರ ಕೆಲಸವಾಗಿದೆ. ಜನರೇ ಎಚ್ಚೆತ್ತುಕೊಳ್ಳಿ , ಮೋಸ ಮಾಡಿದ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಕಾಂಗ್ರೆಸ್ ತೊಲಗಿಸಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿ ರಾಜ್ಯದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲು ಅವಕಾಶ ನೀಡಿ ಎಂದು ಜಿಲ್ಲೆಯ ಮತದಾರರಲ್ಲಿ ಮನವಿ ಮಾಡಿದರು.
ನಮ್ಮ ಸರ್ಕಾರ ತುಮಕೂರು ಜಿಲ್ಲೆಯನ್ನು ಅಭಿವೃದ್ಧಿ ಮಾಡಿದೆ. ಹೆಚ್‍ಎಎಲ್ ಸೇರಿದಂತೆ ತುಮಕೂರು-ರಾಯದುರ್ಗ, ತುಮಕೂರು-ಚಿತ್ರದುರ್ಗ ರೈಲ್ವೇ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಬಾರಿ ಬಿಜೆಪಿಗೆ ರಾಜ್ಯದಲ್ಲಿ ಅಧಿಕಾರ ನೀಡಿ ತುಮಕೂರು ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಯಾಗಲಿದೆ ಎಂದರು.
ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಸಂಸದ ಜಿ.ಎಸ್.ಬಸವರಾಜು, ರಾಜ್ಯಸಭಾ ಸದಸ್ಯ ಜಗ್ಗೇಶ್, ಸೇರಿದಂತೆ ಜಿಲ್ಲೆಯ 11 ವಿಧಾನ ಸಭಾ ಕ್ಷೇತ್ರದ ಅಭ್ಯ ರ್ಥಿಗಳು ಹಾಗೂ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.