ತುರುವೇಕೆರೆ: ತಾಲ್ಲೂಕಿನ ಕೆ.ಮಾವಿನಹಳ್ಳಿ ಕುಮಾರ್ ಆಚಾರ್ ಪೊಲೀಸ್ ವಶದಲ್ಲಿರುವಾಗ ಸಾವನ್ನಪ್ಪಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಸೂಕ್ತ ತನಿಖೆ ಮಾಡಿ, ಮೃತರ ಕುಟುಂಬಕ್ಕೆ ನ್ಯಾಯ ಸಿಗುವಂತೆ ಮಾಡುವುದಾಗಿ ಕೆ.ಪಿ.ಸಿ.ಸಿ ಯ ಓಬಿಸಿ ಘಟಕದ ರಾಜ್ಯ ಉಪಾಧ್ಯಕ್ಷೆ ಡಾ.ಪವಿತ್ರಾ ಆರ್.ಪ್ರಭಾಕರ್ ರೆಡ್ಡಿಯವರು ತಿಳಿಸಿದರು.
ತಾಲ್ಲೂಕಿನ ಕೆ.ಮೇಲನಹಳ್ಳಿಯಲ್ಲಿರುವ ಕುಮಾರ್ ಆಚಾರ್ ಕುಟುಂಬದ ಸದಸ್ಯರನ್ನು ಬುಧವಾರ ಭೇಟಿ ಮಾಡಿ, ಸಾಂತ್ವನ ಹೇಳಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು
ಕುಮಾರ್ ಆಚಾರ್ ಸಾವು ಪೊಲೀಸ್ ದೌರ್ಜನ್ಯದಿಂದಲೇ ಆಗಿದೆ ಎಂದು ಮೇಲ್ನೋಟಕ್ಕೆ ತಿಳಿದಿದೆ. ಮೃತರು ಅವರ ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದರು. ಅವರ ಕುಟುಂಬ ಈಗ ಅನಾಥವಾಗಿದೆ. ಪತ್ನಿ, ಪುಟ್ಟ ಮಗು, ತಂದೆ ಸೇರಿದಂತೆ ಹಲವು ಮಂದಿ ಜೀವನ ನಡೆಸುವುದೇ ಕಷ್ಟವಾಗಿ ಬೀದಿಗೆ ಬೀಳುವ ಪ್ರಸಂಗ ಬಂದಿದೆಂದು ಆಪಾದಿಸಿದರು ಅವರು
ಮೃತರ ಕುಟುಂಬಕ್ಕೆ ತಮ್ಮ ವೈಯಕ್ತಿಕವಾಗಿ ಧನ ಸಹಾಯ ಮಾಡಿದ್ದೇನೆ. ಶೀಘ್ರವಾಗಿ ಸಿಓಡಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರವನ್ನು ಕೊಡಿಸುವ ಭರವಸೆಯನ್ನು ಕುಟುಂಬದ ಸದಸ್ಯರಿಗೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಕೆ.ಪಿ.ಸಿ.ಸಿ ಯ ಅಸಂಘಟಿತ ಕಾರ್ಮಿಕರ ಘಟಕದ ಪ್ರಧಾನ ಕಾರ್ಯದರ್ಶಿ ಮಾ.ನ.ಗುರುದತ್, ರಾಜ್ಯ ಓಬಿಸಿಯ ಉಪಾಧ್ಯಕ್ಷ ಚಿಕ್ಕನಾಯನಹಳ್ಳಿಯ ಡಾ.ವಿಜಯರಾಘವೇಂದ್ರ, ತಾಲ್ಲೂಕು ಕಾಂಗ್ರೆಸ್ ನ ಓಬಿಸಿ ಘಟಕದ ಅಧ್ಯಕ್ಷ ಸ್ಡುಡಿಯೋ ಮಹೇಂದ್ರ, ಪುಟ್ಟರಾಜ್, ದಲಿತ ಮುಖಂಡರಾದ ಕೆ.ಬಿ.ಹನುಮಂತಯ್ಯ, ಚಿಕ್ಕನಾಯಕನಹಳ್ಳಿ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಟಿ.ರಾಧ, ಗಾಯತ್ರಿ, ಸ್ಥಳೀಯ ವಿಶ್ವಕರ್ಮ ಸಮಾಜದ ಮುಖಂಡರಾದ ರಮೇಶ್, ವೇದಮೂರ್ತಿ, ಹುಲಿಕಲ್ ಕೃಷ್ಣಾಚಾರ್, ವೆಂಕಟೇಶ್, ಮಂಜುಳಾ, ಶಶಿಕುಮಾರ್, ಡಿ.ಆರ್.ಹುಚ್ಚಪ್ಪ, ಕಾರ್ಯದರ್ಶಿ ಚಂದ್ರು, ಜಿ.ಎನ್.ವಸಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.