ತುಮಕೂರು: ಆನ್ ಲೈನ್ ಖರೀದಿಯಲ್ಲಿ ಮೋಸ ಹೆಚ್ಚುತ್ತಿದ್ದು, ಮೋಸ, ವಂಚನೆಗೊಳಗಾಗುವ ಗ್ರಾಹಕರು ಗ್ರಾಹಕರ ವೇದಿಕೆಯಲ್ಲಿ ದೂರು ನೀಡಿ ಸುಲಭವಾಗಿ ಪರಿಹಾರ, ಹಣ ವಾಪಸ್ ಪಡೆಯಬಹುದಾಗಿದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ತುಮಕೂರು ಜಿಲ್ಲಾಧ್ಯಕ್ಷೆ ಜಿ.ಟಿ.ವಿಜಯಲಕ್ಷ್ಮಿ ತಿಳಿಸಿದರು.
ನಗರದ ಸುಫಿಯಾ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಶ್ರಯದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಮತ್ತು ಗ್ರಾಹಕ ಹಕ್ಕುಗಳ ದಿನಾಚರಣೆಯಲ್ಲಿ ಗ್ರಾಹಕರ ಹಕ್ಕುಗಳು, ಬಾಧ್ಯತೆಗಳು ಮತ್ತು ಪರಿಹಾರ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದರು.
ಗ್ರಾಹಕರಿಗೆ ತಮ್ಮ ಹಕ್ಕುಗಳ ಕುರಿತು ತಿಳುವಳಿಕೆ ಕಡಿಮೆ ಇದೆ. ಯಾವುದೇ ಮಾರಾಟಗಾರ ಮೋಸ, ವಂಚನೆ ಮಾಡಿದಾಗ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ನೀಡಿ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿ ನ್ಯಾಯವು ಸುಲಭ ಹಾಗೂ ಬೇಗ ಸಿಗುತ್ತದೆ. ನ್ಯಾಯಾಲಯದ ಖರ್ಚು ವೆಚ್ಚ ಸಹ ಕಡಿಮೆ ಇರುತ್ತದೆ ಎಂದರು.
ಗ್ರಾಹಕರಿಗೆ ಇರುವ ಹಕ್ಕು ಭಾದ್ಯತೆಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಲು ಗ್ರಾಹಕರು ಹಿಂದು ಮುಂದು ನೋಡಬಾರದು ಎಂದು ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಮಾತನಾಡಿ. ಹನ್ನೆರಡನೇ ಶತಮಾನದಲ್ಲೇ ಬಸವಣ್ಣನವರ ಅನುಭವ ಮಂಟಪ ಈಗಿನ ಸಂಸತ್ ನಂತೆ ಕೆಲಸ ನಿರ್ವಹಿಸುತ್ತಿತ್ತು. ಬಸವಣ್ಣನವರ ವಚನಗಳಲ್ಲೇ ಕಾನೂನು ಸಂಹಿಯೆತ ಲಕ್ಷಣಗಳನ್ನು ಕಾಣಬಹುದಾಗಿದೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯುಲೂ ಬೇಡ ವಚನದ ಸಾಲುಗಳನ್ನು ಉಲ್ಲೇಖಿಸಿ ಉದಾಹರಿಸಿದರು.
ಪ್ರಾಂಶುಪಾಲ ಡಾ. ಎಸ್. ರಮೇಶ್ ಮಾತನಾಡಿ. ಬಸವಣ್ಣವರ ಕಾಯಕತತ್ವ, ಮಾನವೀಯತೆ. ಪ್ರಜಾಪ್ರಭುತ್ವದ ಮೌಲ್ಯಗಳು ಇಡೀ ಜಗತ್ತಿನ ದಾರಿದೀಪಗಳಂತೆ ಕೆಲಸ ಮಾಡುತ್ತಿವೆ ಎಂದರು.
ಸುಫಿಯಾ ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಸುಫಿಯಾ, ಉಪ ಪ್ರಾಂಶುಪಾಲ ಟಿ.ಓಬಯ್ಯ, ಸಹ ಪ್ರಾಧ್ಯಾಪಕರಾದ ಮಮತಾ, ಕಾಶಿಪ್, ಗ್ರಂಥಪಾಲಕ ಸುಬ್ಬು, ಸೂಪರಿಡಿಂಡ್ ಟೆಂಟ್ ಎಂಎಂಟಿ ಜಗದೀಶ್ ಇತರು ಇದ್ದರು.