Thursday, November 21, 2024
Google search engine
Homeನಮ್ಮೂರುಗಂಗರ ತುಮಕೂರಿಗೆ‌ ತುಮಕೂರು‌‌ ಹೆಸರು ಬಂದಿದ್ದು ಹೇಗೆ ಗೊತ್ತಾ?

ಗಂಗರ ತುಮಕೂರಿಗೆ‌ ತುಮಕೂರು‌‌ ಹೆಸರು ಬಂದಿದ್ದು ಹೇಗೆ ಗೊತ್ತಾ?

ವಿಶೇಷ ವರದಿ;
ಲಕ್ಷ್ಮೀಕಾಂತರಾಜು ಎಂಜಿ
9844777110

ಇದು ರಾಜ್ಯದ ಎರಡನೇಯ ಅತಿ ದೊಡ್ಡ ಜಿಲ್ಲೆ. ತೆಂಗಿಗೆ ಹೆಸರಾಗಿ ಕಲ್ಪತರು ನಾಡೆಂದು ಪ್ರಸಿದ್ಧವಾಗಿರುವ ಜಿಲ್ಲೆ. ಅದುವೇ ತುಮಕೂರು ಜಿಲ್ಲೆ.

ತುಮಕೂರು ಇಂದು ಶೈಕ್ಷಣಿಕ ನಗರವಾಗಿ ಬೆಳೆದಿದ್ದು ಜಿಲ್ಲೆಗೆ ಮಾತ್ರವೇ ಯೂನಿವರ್ಸಿಟಿಯೂ ಇದೆ. ತ್ರಿವಿಧ ದಾಸೋಹಿ ,ಅಕ್ಷರ ಸಂತ ಶ್ರೀ ಶಿವಕುಮಾರ ಸ್ವಾಮೀಜಿಯವರು ಸೇವೆಗೈದ ಕರ್ಮ ಭೂಮಿ ತುಮಕೂರು.

ಇಂಥಹ ವಿಶೇಷವುಳ್ಳ ತುಮಕೂರು ನಗರಕ್ಕೆ ತುಮಕೂರು ಎಂದು ಹೆಸರಾದರು ಬಂದದ್ದಾರು ಹೇಗೆ ಎಂದು ತಿಳಿಯೋಣ ಬನ್ನಿ

ಸುಮಾರು ನಾಲ್ಕುನೂರು ವರ್ಷಗಳ ಹಿಂದೆ ಈಗಿನ ಕರ್ನಾಟಕದ ಬಹುಪಾಲು ಭಾಗವನ್ನು ತಲಕಾಡಿನ ಗಂಗರು ಆಳುತ್ತಿದ್ದರು. ಈ ಸಮಯದಲ್ಲಿ ತುಮಕೂರಿನ ಉತ್ತರ ಭಾಗವು ನೊಳಂಭವಾಡಿ ಪ್ರಾಂತ್ಯಕ್ಕೆ ಸೇರಿತ್ತು.

ಪ್ರಸ್ತುತವಾಗಿ ಆಂಧ್ರಕ್ಕೆ ಸೇರಿರುವ ಹೇಮಾವತಿಯು ನೊಳಂಬವಾಡಿಯ ರಾಜಧಾನಿಯಾಗಿತ್ತು.ಇಂದಿನ ತುಮಕೂರಿನ ದಕ್ಷಿಣ ಭಾಗವು ಗಂಗವಾಡಿ ಪ್ರಾಂತ್ಯಕ್ಕೆ ಸೇರಿದ್ದು ನೊಳಂಬವಾಡಿ ಹಾಗೂ ಗಂಗವಾಡಿ ಪ್ರಾಂತ್ಯದ ನಡುವೆ ಒಂದು ಸಣ್ಣ ಸಂಸ್ಥಾನವಿತ್ತು. ಅದುವೇ ಕ್ರೀಡಾಪುರ. ( ಇಂದಿನ ಕೈದಾಳ)

ಈ ಕ್ರೀಡಾಪುರದ ಅರಸರು ಗಂಗವಾಡಿ ಪ್ರಾಂತ್ಯದ ಅರಸರಿಗೆ ಸಾಮಂತರಾಗಿದ್ದ ಕಾರಣ ನೊಳಂಬವಾಡಿಯ ಅರಸರಿಗೆ ಇದನ್ನು ಸಹಿಸಲಾಗದೆ ಗಂಗವಾಡಿಯ ಅರಸರ ಮೇಲೆ ಯುದ್ಧ ಸಾರುತ್ತಿದ್ದರು

ನೊಳಂಬವಾಡಿಯ ರಾಜರುಗಳು ಗಂಗವಾಡಿಯ ಸೈನ್ಯಕ್ಕೆ ಯಾವುದೇ ಮುನ್ಸೂಚನೆ ನೀಡದೆ ಯುದ್ಧ ನೀತಿಗಳನ್ನ ಕೈಬಿಟ್ಟು ಯಾವಾಗ ಅಂದ್ರೆ ಅವಾಗ ಯುದ್ಧಕ್ಕೆ ಬರುತ್ತಿದ್ದರು

ನೊಳಂಬವಾಡಿಯ ಅರಸರ ಈ ಅಧರ್ಮ ಯುದ್ಧ ನೀತಿಯಿಂದ ಬೇಸತ್ತ ಗಂಗವಾಡಿಯ ಅರಸರು ಮತ್ತು ಸೈನ್ಯ ಸದಾ ಯುದ್ಧಕ್ಕೆ ಸನ್ನದ್ಧರಾಗಬೇಕಿತ್ತು

ಯಾವಾಗ ಅಂದರೆ ಅವಾಗ ಯುದ್ಧಕ್ಕೆ ಬರುತ್ತಿದ್ದ ನೊಳಂಬವಾಡಿ ಸೈನ್ಯ ಗುರುತಿಸಿ ಗಂಗವಾಡಿ ಸೈನ್ಯಕ್ಕೆ ತಿಳಿಸಲು ಒಂದು ಎತ್ತರದ ಪ್ರದೇಶದಲ್ಲಿ ಕಾವಲುಗಾರನನ್ನ ನೇಮಿಸಿ ಸೈನ್ಯ ಕಂಡೊಡನೆ ಕಾವಲುಗಾರ ಟುಮಕಿ ಬಾರಿಸುತ್ತಿದ್ದ. ಈ ಟುಮಕಿ ಬಾರಿಸಿದನೆಂದರೆ ಗಂಗವಾಡಿಯ ಸೈನ್ಯ ಯುದ್ಧಕ್ಕೆ ಸನ್ನದ್ದರಾಗುತ್ತಿದ್ದರು. ಟುಮಕಿ ಅಂದರೆ ಒಂದು ರೀತಿಯ ವಾದ್ಯ ಸಾಧನ.

ಈ ಟುಮಕಿ ಬಾರಿಸುತ್ತಿದ್ದ ಸ್ಥಳ ಟುಂಕನಹಳ್ಳಿ ಎಂದಾಯಿತು. ನಂತರ ಬೆಳೆಯುತ್ತಾ ಟುಂಕೂರು,ತುಮಕೂರು ಆಗಿ ಇಂದು ಬೃಹತ್ ನಗರವಾಗಿ ಬೆಳೆದು ನಗರಸಭೆಯಿಂದ ಮಹಾನಗರಪಾಲಿಕೆಯಾಗಿ ಬೆಳೆದು ನಿಂತು ಬೆಂಗಳೂರಿನ ಭವಿಷ್ಯದ ಲೇ ಔಟ್ ಆಗಿದೆ.

ಇದೆಲ್ಲದರ ಜೊತೆಗೆ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿದ್ದು ಮುಂಬರುವ ದಿನಗಳಲ್ಲಿ ತುಮಕೂರು ಮತ್ತಷ್ಟು ಅಭಿವೃದ್ಧಿ ಹೊಂದಿ ಮೆರಗು ಪಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?