Public story.in
ಮಧುಗಿರಿ : ಕನ್ನಡದ ಬಗೆಗಿನ ಅಭಿಮಾನ ಮತ್ತು ಉತ್ಸಾಹವು ಕೇವಲ ಬಾಯಿ ಮಾತಿನದ್ದಾಗಿರಬಾರದು ದಿನನಿತ್ಯದ ನಡೆನುಡಿಯಲ್ಲಿ ನೈಜ ಕನ್ನಡತನ ಹೊರಹೊಮ್ಮಬೇಕು ಎಂದು ಹಿರಿಯ ಲೇಖಕಿ ಸಿ.ಎ.ಇಂದಿರಾ ತಿಳಿಸಿದರು.
ತಾಲೂಕಿನ ಬ್ಯಾಲ್ಯ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಧುಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮೀನಾಕ್ಷಮ್ಮ ಭೀಮಯ್ಯ ದತ್ತಿ ಉಪನ್ಯಾಸ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಭಾಷೆ ಕನ್ನಡತನದ ಜೊತೆಗೆ ಕನ್ನಡದ ಗುಣಗಳನ್ನು ಮಕ್ಕಳಲ್ಲಿ ಬೆಳೆಸುವ ಮೂಲಕ ಕನ್ನಡವನ್ನು ಉಳಿಸಿಕೊಳ್ಳುವ ಬಹುದೊಡ್ಡ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಮ.ಲ.ಮೂರ್ತಿ ಅವರು ಮಾತನಾಡಿ ಕನ್ನಡದ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಈ ಇತಿಹಾಸಕ್ಕೆ ದಕ್ಕೆ ಬಾರದಂತೆ ನಾವೆಲ್ಲರೂ ನಡೆದುಕೊಳ್ಳಬೇಕು. ಇತಿಹಾಸವನ್ನು ಕೇವಲ ನೆನಪು ಮಾಡಿಕೊಂಡು ಸಂಭ್ರಮಿಸಿದರೆ ಸಾಲದು ಕನ್ನಡಕ್ಕಾಗಿ ಎಲ್ಲ ರೀತಿಯಿಂದಲೂ ಎಲ್ಲರೂ ಶ್ರಮಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷೆ ಬ.ಹ.ರಮಾಕುಮಾರಿ ಮಾತನಾಡಿ ಕನ್ನಡ ಕೇವಲ ಭಾಷೆಯಲ್ಲ ಅದು ಉಸಿರಾಗಬೇಕು. ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ದಕ್ಕೆ ಉಂಟಾದಾಗ ಎಂಥಹ ತ್ಯಾಗಕ್ಕೂ ಸಿದ್ದರಾಗಿಬೇಕು ಎಂದರು
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಮಾತನಾಡಿ ಕನ್ನಡ ಭಾಷೆ ಸಾಹಿತ್ಯಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು ಸರೋಜಿನನಿಮಹಿಷಿ ಅವರು ಕನ್ನಡದ ಅಭಿವೃದ್ದಿಗೆ ನೀಡಿದ ವರದಿಯನ್ನು ಸರ್ಕಾರ ಯಥಾವತ್ತಾಗಿ ಜಾರಿಗೆ ತರಲಿ ಎಂದರು.
ಸಮಾರಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಹೆಚ್.ಡಿ.ನರಸೇಗೌಡ ಉಪಪ್ರಾಂಶುಪಾಲ ಬಿ.ಟಿ.ಆಶ್ವತ್ಥಯ್ಯ, ದತ್ತಿದಾನಿ ಬಿ.ಸನತ್‍ಕುಮಾರ್‍ಗುಪ್ತ, ಮುಖಂಡ ವರದರಾಜು ಮಾತನಾಡಿದರು. ದಾನಿಗಳಾದ ಬಿ.ರಾಧಾಕೃಷ್ಣಶೆಟ್ಟಿ, ಬಿ.ಆರ್.ರಾಜಜಶೇಖರ್, ದೇವರಾಜು, ಕಾಮರಾಜ್, ಶಿಕ್ಷಕ ದೊಡ್ಡನಾಗಪ್ಪ, ವಿನುತಾ ಮತ್ತು ಹರ್ಶಿತಾ ಮುಂತಾದವರು ಉಪಸ್ಥಿತರಿದರು.