Publicstory.in
Sira: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಕ್ಷೀರಭಾಗ್ಯ ಮತ್ತು ಬಿಸಿಯೂಟ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನ ಮಾಡುವುದರ ಮೂಲಕ ಅಪೌಷ್ಟಿಕತೆ ದೂರಮಾಡಲು ಸಹಕಾರಿಯಾಗಿದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಗಂಗಾಧರ್ ಹೇಳಿದರು.
ಸಿರಾ ತಾಲ್ಲೂಕಿನ ಗೌಡಗೆರೆ ಹೋಬಳಿ ಶಾಲೆಗಳ ಅಕ್ಷರ ದಾಸೋಹ ಸಿಬ್ಬಂದಿಗೆ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ
ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಅಡುಗೆ ಸಿಬ್ಬಂದಿಯ ಪರಿಶ್ರಮದಿಂದ ಇಂದು ಮಕ್ಕಳಿಗೆ ಯಾವುದೇ ಲೋಪವಿಲ್ಲದೆ ಅಕ್ಷರ ದಾಸೋಹ ನಡೆಯುತ್ತಿದ್ದು, ತಾಯಂದಿರ ಸೇವೆ ಹೀಗೇ ಮುಂದುವರೆಯುವ ಮೂಲಕ ಸರ್ಕಾರದ ಆಶಯ ಈಡೇರಲಿ ಎಂದರು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎನ್.ಕುಮಾರ್ ಮಾತನಾಡಿ, ಮಕ್ಕಳಿಗೆ ಸ್ವಚ್ಛತೆಯಿಂದ ಅಡುಗೆ ತಯಾರಿಸುವ ಮೂಲಕ ಮಗುವಿನ, ಶಾಲೆಯ, ಶಿಕ್ಷಣ ಇಲಾಖೆಯ ಆರೋಗ್ಯ ಕಾಪಾಡುತ್ತಿರುವುದು ಪ್ರಶಂಸಾರ್ಹ. ಹಿಂದಿನ ಕಾಲದಲ್ಲಿ ಮನೆತುಂಬಾ ಮಕ್ಕಳಿರುತ್ತಿದ್ದರು. ಪ್ರಸ್ತುತ ವಿಘಟನೆ ಹೊಂದಿದ ಕುಟುಂಬಗಳಲ್ಲಿ ಒಂದು ಅಥವಾ ಎರಡು ಮಕ್ಕಳು ಮಾತ್ರ ಶಾಲೆಗೆ ಬರುತ್ತಾರೆ. ಅವರಿಗೆ ಯಾವುದೇ ಅವಘಡಗಳು ನಡೆಯದಂತೆ ಎಚ್ಚರ ವಹಿಸಬೇಕು. ಈ ನಿಟ್ಟಿನಲ್ಲಿ ತಾಲ್ಲೂಕು ಪಂಚಾಯತಿ ವತಿಯಿಂದ ನೀಡುತ್ತಿರುವ ತರಬೇತಿಯನ್ನು ಸದುಪಯೋಗ ಮಾಡಿಕೊಳ್ಳಲು ತಿಳಿಸಿದರು.
ಕಾರ್ಯಾಗಾರದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕುಮಾರ್,
ಸುರಕ್ಷತೆ ಕುರಿತ ಸಂಪನ್ಮೂಲ ವ್ಯಕ್ತಿ ಈಶ್ವರ್, ಕಾರ್ಮಿಕ ಇಲಾಖೆಯ ಲೇಪಾಕ್ಷಿ, ಸಿ ಆರ್ ಪಿಗಳಾದ ಕೃಷ್ಣಮೂರ್ತಿ, ಶ್ರೀರಾಮನಾಯಕ, ಭೂತನಾಯಕ ಇತರರು ಪಾಲ್ಗೊಂಡಿದ್ದರು.