Publicstory. in
Tumkur: ಇಲ್ಲಿನ ಝೆನ್ ಟೀಮ್ ವತಿಯಿಂದ ಇದೇ ತಿಂಗಳ 10 ರಂದು ಸೋಮವಾರ ಸಂಜೆ 6.45 ಕ್ಕೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನೀನಾಸಂ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ನೊಬೆಲ್ ಪಾರಿತೋಷಕ ಪ್ರಶಸ್ತಿ ಪುರಸ್ಕøತ ಫ್ರೆಂಚ್ ನಾಟಕಕಾರ ಮಾರಿಸ್ ಮೆಟರ್‍ಲಿಂಕ್ ರಚಿಸಿರುವ ಅಂತರಂಗ ಎಂಬ ಈ ನಾಟಕವನ್ನು ಹೆಸರಾಂತ ನಿರ್ದೇಶಕ ಶಂಕರ್ ವೆಂಕಟೇಶ್ವರನ್ ನಿರ್ದೇಶಿಸಿದ್ದಾರೆ.
ಜಾಹೀರಾತು
ಈ ನಾಟಕಕ್ಕೆ 40 ರುಪಾಯಿ ಪ್ರವೇಶ ದರ ನಿಗದಿ ಮಾಡಲಾಗಿದೆ ಎಂದು ಝೆನ್ ಟೀಮ್‍ನ ಮುಖ್ಯಸ್ಥ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.
1 ಗಂಟೆ 20 ನಿಮಿಷ ಅವಧಿಯ ಈ ನಾಟಕ ವಿಶಿಷ್ಟ ರಂಗಕೃತಿ. ಪ್ರೇಕ್ಷಕರನ್ನು ಆವರಿಸಿಕೊಳ್ಳುವ ಈ ನಾಟಕ ನಮ್ಮ ತಿಳಿವಿನ ಆಚೆಗಿರುವ ಅರಿವಿಲ್ಲದ ಸ್ಥಿತಿಯ ಬಗ್ಗೆ. ನಮ್ಮ ಮನಸ್ಸಿನ ಕಗ್ಗತ್ತಲೆಯೊಳಗೆ ನಾವೆ ಬಚ್ಚಿಟ್ಟುಕೊಂಡಿರುವ ಸಂಗತಿಯೊಂದನ್ನು ಅನಾವರಣಗೊಳಿಸುತ್ತದೆ.
ಸಂಕೇತವಾದಿ ಚಳವಳಿಯ ಪ್ರಮುಖನಾದ ಮಾರಿಸ್ ಮೆಟರ್‍ಲಿಂಕ್ ತನ್ನ ನಾಟಕದಲ್ಲಿ ಮುಖ್ಯವಾಗಿ ಸಾವು ಹಾಗೂ ಬದುಕಿನ ಅರ್ಥವನ್ನು ವಿಷಯವಾಗಿಟ್ಟುಕೊಂಡು ರಚಿಸಿದ್ದಾನೆ. ಎಲ್ಲರ ಬದುಕೂ ಸೂತ್ರದ ಗೊಂಬೆಗಳಂತೆಯೇ ತೆಳುವಾದ ದಾರವೊಂದನ್ನು ಆಶ್ರಯಿಸಿ ನೇತಾಡುತ್ತಿದೆ. ಇಂಥ ಲೋಕದೊಳಕ್ಕೆ ನಮ್ಮನ್ನು ಕರೆದೊಯ್ಯುವ ಮೆಟರ್‍ಲಿಂಗ್ ಈ ಜಗದ ಕಗ್ಗತ್ತಲೆಯನ್ನು ಅಷ್ಟಿಷ್ಟು ಬೆಳಗಿಸಿ ನಮ್ಮ ತಿಳಿವಿನಾಚೆಯ ವಲಯದೊಳಗಿರುವ ಸಂಗತಿಗಳ ದರ್ಶನ ಮಾಡಿಸುತ್ತಾನೆ.