Tumkur: ತುಮಕೂರಿನ ಕನ್ನಡ ಭವನದಲ್ಲಿ ಇಂದು ನಡೆದ 2019ನೇ ಸಾಲಿನ ವೀಚಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಸ್. ಗಂಗಾಧರಯ್ಯನವರ ದೇವರ ಕುದುರೆ ಕಥಾ ಸಂಕಲನ ಮತ್ತು ಸುರೇಶ್ ನಾಗಲಮಡಿಕೆ ಅವರ ಹಲವು ಬಣ್ಣದ ಹಗ್ಗ ವಿಮರ್ಶಾ ಕೃತಿಗಳಿಗೆ ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಭುನನಾ ಹೀರೇಮಠ ಅವರ ಟ್ರಯಲ್ ರೂಮಿನ ಅಪ್ಸರೆಯರು ಕವನ ಸಂಕಲನಕ್ಕೆ ವೀಚಿ ಉದಯೋನ್ಮಖ ಸಾಹಿತ್ಯ ಪ್ರಶಸ್ತಿ, ಸಿ ಎನ್ ಹನುಮಯ್ಯನವರಿಗೆ ಜಾನಪದ ಪ್ರಶಸ್ತಿ ಹಾಗು ಎಂ ಆರ್ ವೆಂಕಟೇಶ್ ರವರಿಗೆ ಕನಕ ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಶ್ರೀ ಎಸ್ ಜಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾದ ಕರೀಗೌಡ ಬೀಚನಹಳ್ಳಿ, ಡಾ ವಸುಂಧರ ಭೂಪತಿ ಹಾಗು ಡಾ ರವಿಕುಮಾರ್ ಕೃತಿಗಳ ಕುರಿತು ವಿಮರ್ಷಿಸಿದರು. ವೀಚಿ ಟ್ರಸ್ಟ್ ನ ಅಧ್ಯಕ್ಷರಾದ ಬಸವಯ್ಯ ಉಪಸ್ಥಿತರಿದ್ದರು.