ತುಮಕೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಗೆ ಕೊರೊನಾ ಸೈನಿಕರು ಭೇಟಿ ನೀಡಿ ಮಾಹಿತಿ ತರಬೇತಿ ಪಡೆದರು. ಕೊರೊನಾ ಸೈನಿಕರು ಎಂಬ ಪರಿಕಲ್ಪನೆಯ ಉದ್ದೇಶ ಹಾಗೂ ಅಗತ್ಯತೆಯ ಬಗ್ಗೆ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಡಿ. ಅವರು ಕೊರೊನಾ ಸೈನಿಕರಿಗೆ ವಿವರಣೆ ನೀಡಿದರು.
ಕೊರೊನಾ ವೈರಾಣು ಹರಡುವಿಕೆ ಕುರಿತಾಗಿ ವಿವಿಧ ಮಾಧ್ಯಮ, ಸಾಮಾಜಿಕ ಮಾಧ್ಯಮ, ಜಾಲತಾಣಗಳಲ್ಲಿ ಮೂಡಿಬರುವ ವದಂತಿಗಳ ಬಗ್ಗೆ ಪರಾಮಾರ್ಶಿಸಿ, ನೈಜ ಮಾಹಿತಿ ಕೊಡುವುದು ಹಾಗೂ ಸ್ಥಳೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಕೊಡುವುದು ಕೊರೊನಾ ಸೈನಿಕರ ಕೆಲಸವಾಗಿದೆ ಎಂದು ಹೇಳಿದರು.
ತುಮಕೂರಿನಲ್ಲಿ 19 ಜನ ಸ್ವಯಂ ಸೇವಕರು ಕೊರೊನಾ ಸೈನಿಕರಾಗಲು ನೋಂದಾಯಿಸಿದ್ದು, ಕೊರೊನಾ ವೈರಾಣು ಹರಡುವುದನ್ನು ತಪ್ಪಿಸಲು ತಮ್ಮಿಂದಾಗುವ ಸೇವೆ ಸಲ್ಲಿಸಲು ಸಿದ್ಧ ಎಂಬ ಸಂದೇಶವನ್ನು ಎಲ್ಲಾ ಸ್ವಯಂ ಸೇವಕರು ನೀಡಿದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಕರ್ನಾಟಕ ಹಾಗೂ ಕಾರ್ಮಿಕ ತರಬೇತಿ ಸಂಸ್ಥೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಭಾಗ್ವಿತದಲ್ಲಿ “ಕೊರೊನಾ ಸೈನಿಕರು” ಎಂಬ ಟೆಲಿಗ್ರಾಮ್ ಗುಂಪು ರಚನೆಯಾಗಿರುತ್ತದೆ.