Publicstory. in
ತುಮಕೂರು: ತುಮಕೂರು ನಗರದ ಸದಾಶಿವ ನಗರದ ಕೃಷ್ಣ ಬೇಕರಿಯ ಹಿಂಭಾಗದ ಮನೆಯಲ್ಲಿ ನಿಗಾವಣೆಯಲ್ಲಿದ್ದ ಇಬ್ಬರಿಗೆ ಕರೊನಾ ದೃಢಪಟ್ಟಿದೆ ಎಂದು ಇಂಗ್ಲಿಷ್ ನಲ್ಲಿ ಬರೆದಿರುವ ಸುದ್ದಿ ಗುರುವಾರ ಯುಗಾದಿ ದಿನ ವಾಟ್ಸಾಪ್, ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಅದರೆ ಈ ಸುದ್ದಿ ಸುಳ್ಳು. Fake news.
ಇಲ್ಲಿ ಯಾರಿಗೂ ಕೊರೊನಾ ದೃಢಪಟ್ಟಿಲ್ಲ. ಕಿಡಿಗೇಡಿಗಳು ಸುದ್ದಿ ಸೃಷ್ಟಿಸಿ ಹರಿ ಬಿಟ್ಟಿದ್ದಾರೆ.
ಸದಾಶಿವ ನಗರದ ಸುದ್ದಿ ಸುಳ್ಳು. ತುಮಕೂರು ಜಿಲ್ಲೆಯಲ್ಲಿ ಈವರೆಗೂ ಒಂದೇ ಒಂದು ಪ್ರಕರಣವು ಕಾಣಿಸಿಕೊಂಡಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಚಂದ್ರಿಕಾ publicstory. in ಗೆ ಮಾಹಿತಿ ನೀಡಿದರು.
ಈ ಹಿಂದೆಯೂ ಇದೇ ರೀತಿಯ ಸುಳ್ಳು ಸುದ್ದಿ ಹರಿ ಬಿಡಲಾಗಿತ್ತು. ಆಗ, ಜಿಲ್ಲಾ ಅರೋಗ್ಯಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದರು. ಇಂತಹ ಸುದ್ದಿಗಳನ್ನು ಯಾರೂ ಪಾರ್ವಡ್ ಮಾಡಬಾರದು. ಅಧಿಕೃತವಾಗಿ ಪತ್ರಿಕೆಗಳು ಅಥವಾ ವಿಶ್ವಾಸಾರ್ಹ ವೆಬ್ ಮೀಡಿಯಾಗಳಲ್ಲಿ ಒಂದಿದ್ದನ್ನು ಮಾತ್ರ ನಂಬಬೇಕು.
ಈ ಸುದ್ದಿಯ ಜತೆಗೆ ಶ್ರೀರಾಮನಗರದಲ್ಲಿ ಕ್ವಾರಂಟೈನ್ ನ ಮನೆಯ ಮೇಲೆ ಜಿಲ್ಲಾಡಳಿತ ಹಾಕಿರುವ ಭಿತ್ತಿ ಪತ್ರವನ್ನು ಹರಿಯಬಿಡಲಾಗಿದೆ.
ಶ್ರೀರಾಮದ ಮನೆಯೊಂದರ ಮೇಲೆ ಅಂಟಿಸಿರುವ ಭಿತ್ತಿಪತ್ರಕ್ಕೂ ಸದಾಶಿವನಗರದ fake news ಗೂ ಸಂಬಂಧ ಇಲ್ಲವಾಗಿದೆ.
ಶ್ರೀರಾಮನಗರದ ಮನೆಯ ಚಿಕ್ಕ ಮಗುವೊಂದು ಅಮೆರಿಕದಿಂದ ಬಂದಿದ್ದ ಸಂಬಂಧಿಕರೊಂದಿಗೆ ಆಟ ವಾಡಿ ನಂತರ ಮನೆಗೆ ಬಂದಿತ್ತು. ಹೀಗಾಗಿ ಆ ಕುಟುಂಬವನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈ ಮನೆಯವರಲ್ಲಿ ಯಾರಿಗೂ ಸೋಂಕು ಇನ್ನೂ ದೃಢಪಟ್ಟಿಲ್ಲ. ವಿದೇಶದಿಂದ ಬಂದಿರುವ, ಎಲ್ಲ ಶಂಕಿತ ಸೋಂಕಿತರಿರುವ ಮನೆಗಳ ಮೇಲೆ ಈ ರೀತಿಯ ಭಿತ್ತಿಪತ್ರ ಹಾಕಲಾಗುತ್ತಿದೆ. ಸ್ಥಳೀಯರು, ಅಕ್ಕ ಪಕ್ಕದ ಮನೆಯವರು ಎಚ್ಚರಿಕೆ ವಹಿಸಬೇಕು. ಇಂತಹ ವ್ಯಕ್ತಿಗಳೊಂದಿಗೆ ಮಾತನಾಡುವುದಾಗಲೀ, ಮುಟ್ಟುವುದಾಗಲೀ ಮಾಡಬಾರದು ಎಂದು ಈ ಮನೆಯ ನಿಗಾವಣೆ ಹೊಣೆ ಹೊತ್ತಿರುವ ಡಾ.ಮಹೇಶ್ ಪಬ್ಲಿಕ್ ಸ್ಟೋರಿ.ಇನ್ ಗೆ ಮಾಹಿತಿ ನೀಡಿದರು.