ಮನು ಹಳೆಯೂರ್
ಬಿಳಿಯ ಪಾರಿವಾಳ ನಾನು, ಹಾರುತ
ಸಾಗುತಿರುವೆ ಜಗವ ಸುತ್ತಲೆಂದು॥ಕೆಳಗೆ ಕಂಡೆ ಸಾವಿರ ಸಾವಿರ
ಹೂಗಳು ಕೆಲವು ಹಸಿರು
ಹಲವು ಕೇಸರಿ, ಅವುಗಳೆಡೆ
ಮೋಹಗೊಂಡೂ ಕೂರಲೊರಟೆಬಿಳಿಯ ಪಾರಿವಾಳ ನಾನು, ಹಾರುತ
ಸಾಗುತಿರುವೆ ಜಗವ ಸುತ್ತಲೆಂದು॥ದೂರದಿಂದ ಚೆಂದ ಕಂಡ ಹೂಗಳು
ಬಳಲಿದಂತೆ ಕಾಣಲು ಚುಕ್ಕೆ ರೋಗದಿ
ಮಾತಿಗೆಳೆಯಲು ಸನಿಹದಿ ಪರಿವೆಯಿಲ್ಲ
ಅವುಗಳಿಗೆ, ಕೆಂಪು ಬಣ್ಣದ ಮೋಹ ಅವಕೆಬಿಳಿಯ ಪಾರಿವಾಳ ನಾನು, ಹಾರುತ
ಸಾಗುತಿರುವೆ ಜಗವ ಸುತ್ತಲೆಂದು॥ನನ್ನೆಡಗೂ ಎರಚಿದವು ಕೆಂಬಣ್ಣವ
ಮೇಲೆ ಮೇಲೆ ಹಾರಿದೆ ತಪ್ಪಿಸಿಕೊಳ್ಳಲು
ರೆಕ್ಕೆ ಪುಕ್ಕಗಳು ಅಂತೂ ಕೆಂಪಿನಿಂದ
ಕಪ್ಪಿಟ್ಟವು, ಬೇಕಾಗಿದೆ ನನಗೆ ಮೊದಲ ಬಿಳಿ.ಬಿಳಿಯ ಪಾರಿವಾಳ ನಾನು, ಹಾರುತ
ಸಾಗುತಿರುವೆ ಜಗವ ಸುತ್ತಲೆಂದು॥
ಮನು ಹಳೆಯೂರ್, ವಿಜ್ಞಾನ ಶಿಕ್ಷಕರು. ಸರ್ಕಾರಿ ಪ್ರೌಢಶಾಲೆ, ಬೋರನಕಣಿವೆ