ಶಂಕರ್ ಬರಕನಹಾಲ್
ಜಾಗತಿಕ ಕರೊನಾ ಭಯದಲ್ಲಿ
ಬದುಕುಳಿಯುವ
ಯೋಚನೆಯ ಅಡಿಯಲ್ಲಿ
ಸಾಗಲಾರದೆ ಸಾಗುತಿದೆ
ನೀರಸ ಪಯಣ.
ಬಣ್ಣ ಬಣ್ಣದ ಜಗತ್ತಿನಲ್ಲಿ
ಕಪ್ಪು ಬಿಳುಪಿನ ಬದುಕಿನಲ್ಲಿ
ಗುರಿಗಳಿಗೆ ಗುರುಗಳಿಲ್ಲ
ಗುರುಗಳಿಗೂ ಮಾರ್ಗವಿಲ್ಲ
ಅರ್ಥವಾಗದ ಜಗತ್ತಿನಲ್ಲಿ
ಮೂಕಪ್ರೇಕ್ಷಕ ನಾವಿಂದು.
ಮನಸಿನ ಮಾತುಗಳಿಗೆ
ಬೆಲೆಗಳಿಲ್ಲ,ಅರ್ಥಗಳಿಲ್ಲ
ಜಂಗಮವಾಣಿ ಜಾಗದೊಳ್
ಜಂಗಮರು ನಾವಿಂದು
ಜಂಗಮವಾಣಿಯ ಅಡಿಯೊಳಗೇ.
ಯಾಂತ್ರಿಕ ಮನುಷ್ಯನಾ
ತಾಂತ್ರಿಕತೆಯ ಬದುಕಿನಲ್ಲಿ
ಖುಷಿಯಲ್ಲಿ ನಿರ್ಮಿಸಿದ ಆ ಮನೆಯೊಳಗೆ ಸುಖ ಶಾಂತಿಯೇ ಸಾಮಾಜಿಕ ಜಾಲತಾಣಗಳು.
EMI ನಲ್ಲಿ ತಂದ ಬರ್ಮೋಡ ಚಡ್ಡಿ,
ಅಪ್ಪ ಹಾಕಿಸಿದ ಪೆಟ್ರೋಲ್
ಖುಷಿಯಾಗಿ ಚಲಿಸಲೆಂದು ತಂದ
ವಾಹನಗಳಿಗೆ ಚಲಿಸುವ ಮಾರ್ಗವಿಲ್ಲ.
ಅಂತದ್ರಲ್ಲಿ ಇಂದಿನ ಯುವಪೀಳಿಗೆ
ತುಂಬಾ ಉತ್ಸಾಹದಿಂದ
ಸಾಮಾಜಿಕ ಜಾಲತಾಣದ
ಭ್ರಮೆಯಲ್ಲಿ ತೇಲುತ್ತಿರುವ ಮಹನೀಯರೇ ಅದು
ಅಮಲು ಪದಾರ್ಥವೋ ಅಥವಾ ಔಷಧಿಯೋ ಎಂದು
ಮೊದಲು ಯೋಚಿಸಿ.
ಮನೆ ಮುರುಕ ಯುವಕರು ಸಾಮಾನ್ಯ ಜ್ಞಾನ ಇಲ್ಲದೆ ಸಾಮಾಜಿಕ ಜಾಲ ತಾಣಗಳಲ್ಲಿ ಮುಳುಗಿ ಹೋಗುವಂತೆ ಆಗಿದೆ..