ಮಹೇಂದ್ರ ಕೃಷ್ಣಮೂರ್ತಿ
ಆಗಷ್ಟೇ ಮದುವೆಯಾಗಿದ್ದ ಲಕ್ಷ್ಮೀ ಇಲಿ ಪಾಷಾಣ ಕುಡಿದುಬಿಟ್ಟಳು.
ಮದುವೆಯಾಗಿ ಆರು ತಿಂಗಳಲ್ಲೇ ಗಂಡನ ಎಲ್ಲ ಮುಖ ಪರಿಚಯವಾಗಿತ್ತು. ಅವನಿಗೆ ಬೇರಾವುದೊ ಸಂಬಂಧ. ಗಂಡನ ಸರಿದಾರಿಗೆ ತರಬಹುದೆಂಬ ನಂಬಿಕೆಯಲ್ಲಿ ಲಕ್ಷ್ಮೀ ಪ್ರಾಣ ಕಳೆದುಕೊಳ್ಳಲು ರೆಡಿಯಾಗಿದ್ದಳು….
ಹಾಗಾದರೆ ಇಲಿ ಪಾಷಾಣ ಕುಡಿದ ಲಕ್ಷ್ಮೀ ಉಳಿಸಿಕೊಳ್ಳುವುದೆಂತು?
ಇಲಿ ಪಾಷಾಣ ಅಷ್ಟೆ ಅಲ್ಲ, ಫಾಲಿಡಾರ್, ಸೀಮೆ ಎಣ್ಣೆ, ಡಿಡಿಟಿ, ಹೀಗೆ ಬೇರೆ ಬೇರೆ ವಿಷ ಸೇವಿಸಿದವರ ಕತೆ ಈ ಫಾಲಿಡಾರ್ ಪುಸ್ತಕದಲ್ಲಿದೆ.
ಖ್ಯಾತ ವೈದ್ಯೆ ಡಾ.ರಜನಿ ಎಂ. ಅವರ ಪುಸ್ತಕವಿದು. ಆರೋಗ್ಯದ ಕುರಿತು ಜನರನ್ನು ಸಾಕ್ಷರನ್ನಾಗಿ ಮಾಡುವ ಉದ್ದೇಶದಿಂದ ಈ ಪುಸ್ತಕ ಹೊರ ತರಲಾಗಿದೆ.
ಬಹಳ ಹಳೆಯ ಪುಸ್ತಕವಾದರೂ ಈಗ ಅನಿವಾರ್ಯತೆ ಹೆಚ್ಚಿದೆ. ಆಗಿಗಿಂತಲು ಈಗ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತಿದೆಯಲ್ಲವೇ ?.
ಏನೇ, ಎಂಥದೇ ವಿಷ ಕುಡಿದರೂ ವಾಂತಿ ಮಾಡಿಸಬೇಕು ಎಂಬುದೇ ಬಹುತೇಕರ ನಂಬಿಕೆ.
ಮನುಷ್ಯರನ್ನು ಉಳಿಸಿಕೊಳ್ಳಲು ಪ್ರಾಥಮಿಕ ಚಿಕಿತ್ಸೆಯೇ ಪ್ರಮುಖ. ಎಲ್ಲ ಥರದ ವಿಷ ಕುಡಿದವರಿಗೆ ವಾಂತಿ ಮಾಡಿಸುವುದೇ ಪ್ರಥಮ ಚಿಕಿತ್ಸೆ ಅಲ್ಲ..
ಸೀಮೆ ಎಣ್ಣೆ ಕುಡಿದವರಿಗೆ ವಾಂತಿ ಮಾಡಿಸುವಂತಿಲ್ಲ. ತಪ್ಪು ಪ್ರಥಮ ಚಿಕಿತ್ಸೆಯೂ ಪ್ರಾಣಕ್ಕೆ ಕುತ್ತು ತರಬಹುದು.
ಹಳ್ಳಿ ನಾವೀನ್ಯತೆಯ ಬೆಚ್ಚಗಿನ ಸರಳ ಭಾಷೆಯಲ್ಲಿ ಎಂ. ರಜನಿ ಕತೆಗಳ ಮೂಲಕ ಬದುಕಿಸುವ ಪಾಠವನ್ನು ಹೇಳಿದ್ದಾರೆ.
ಹೆಸರಾಂತ ಕಥೆಗಾರ, ವೈದ್ಯ ಡಾ. ಬೆಸಗರಹಳ್ಳಿ ರಾಮಣ್ಣ ಅವರ ಗರಡಿಯಲ್ಲಿ ಪಳಗಿರುವ ಡಾ.ರಜನಿ ಅವರ ಪುಸ್ತಕ ಎಲ್ಲರ ಮನೆಯ ಕಪಾಟಿನಲ್ಲಿದ್ದರೆ ಒಳಿತು. ಹಳೆಯ ಪುಸ್ತಕದ ಮರು ಮುದ್ರಣದ ಅಗತ್ಯ ಸಕಾಲಿಕವಾಗಿದೆ.