Public story/prajayoga
ತುರುವೇಕೆರೆ: ಚೆಕ್ ಬೌನ್ಸ್ ಪ್ರಕರಣಗಳನ್ನು ನಡೆಸುವಾಗ ವಕೀಲರು ಸೂಕ್ಷ್ಮತೆಯಿಂದ ಪ್ರಕರಣವನ್ನು ಗಮನಿಸಬೇಕು ಎಂದು ಸುಫಿಯ ಕಾನೂನು ಕಾಲೇಜಿನ ಪ್ರಾಂಶುಪಾಲರ ಡಾ. ರಮೇಶ್ ಅವರು ಹೇಳಿದರು.
ಜಾಹೀರಾತು
ಇಲ್ಲಿ ರಾಜ್ಯ ವಕೀಲರ ಪರಿಷತ್ , ತುರುವೇಕೆರೆ ವಕೀಲರ ಸಂಘ, ಕಾನೂನು ಸೇವಾ ಪ್ರಾಧಿಕಾರದಿಂದ ವಕೀಲರಿಗೆ ಆಯೋಜಿಸಿದ್ದ ಕಾನೂನು ಕಾರ್ಯಾಗಾರದಲ್ಲಿ ಮಾತನಾಡಿದರು.
ಆರೋಪಿಯು ತನ್ನ ಖಾತೆಯಲ್ಲಿ ಹಣ ಇಲ್ಲದಾಗ, ಸಹಿ ಹೊಂದಾಣಿಕೆಯಾಗದೇ ಇದ್ದಾಗ, ಚೆಕ್ ಕಳವು ಹೀಗೆ ನಾನಾ ರೀತಿಯಲ್ಲಿ ಪ್ರಕರಣಗಳು ಬರುತ್ತವೆ. ಪ್ರತಿ ಪ್ರಕರಣ ನಡೆಸುವಾಗಲೂ ಎಚ್ಚರಿಕೆ ಅಗತ್ಯ. ಪ್ರತಿ ವಿವಾದವೂ ಒಂದೊಂದು ದೃಷ್ಟಿಕೋನದಲ್ಲಿ ನೋಡಬೇಕಾಗ ಬಹುದು ಎಂದರು.
ಚೆಕ್ ಕಳವು ಮಾಡಲಾಗಿದೆ ಎಂದು ಹೇಳಿದಾಗ ದೂರುದಾರನ ಮೇಲೆ ಅದನ್ನು ಸಾಬೀತು ಪಡಿಸುವ ಹೊಣೆ ಬೀಳಲಿದೆ. ಇದು ಅತ್ಯಂತ ತ್ರಾಸದಾಯಕ ಹೊಣೆಯಾಗಲಿದೆ, ಚೆಕ್ ಸಹಿ ಹೊಂದಾಣಿಕೆ ಆಗದ ವಿಚಾರ ಬಂದಾಗ ಆರೋಪಿಯ ಮೇಲೆ ಹೊಣೆ ಬೀಳಲಿದೆ ಎಂದರು.
ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಹಣ ಕೊಟ್ಟವನು ಹಣ ಕೊಡುವಷ್ಟು ಸಶಕ್ತನೇ? ಹೇಗೆ ಕೊಟ್ಟ, ಅದನ್ನು ಹೇಗೆ ಸಂಪಾದಿಸಿದ, ಎಲ್ಲಿ ಕೊಟ್ಟ ಹೀಗೆ ನಾನಾ ವಿಷಯಗಳನ್ನು ಹೊರೆಗಲ್ಲಿಗೆ ಹಚ್ಚುವ ಕೆಲಸವನ್ನು ವಕೀಲರು ಮಾಡಬೇಕು. ಈ ಪ್ರಕರಣಗಳು ಅತ್ಯಂತ ಗಂಭೀರವಾದ ಪ್ರಕರಣಗಳಾಗಿರು ತ್ತವೆ ಎಂದು ವಿಶ್ಲೇಷಿಸಿದರು.
ಪಾಟೀ ಸವಾಲು, ವಾದ –ವಿವಾದಗಳ ವಿಚಾರದಲ್ಲಿ ಆಯಾ ವಕೀಲರ ಸೂಕ್ಷ್ಮತೆ ಮೇಲೆಯೂ ಪ್ರಕರಣ ನಿಂತಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಈಜ್ ಮೆಂಟ್ ಆ್ಯಕ್ಟ್ ಕುರಿತು ಮಾತನಾಡಿದ ಅವರು, ಒಬ್ಬ ವ್ಕಕ್ತಿಯ ಓಡಾಟವನ್ನು ತಡೆಯಲು ಸಾಧ್ಯವಿಲ್ಲ. ದಾರಿ ಬಳಕೆ ಪ್ರತಿ ವ್ಯಕ್ತಿಯ ಹಕ್ಕು ಎಂದರು.