ತುಮಕೂರು: ಶಾಸಕ ಗೌರಿಶಂಕರ್ ಅಕ್ರಮ ಮಾರ್ಗದಿಂದ ಆಯ್ಕೆಯಾಗಿದ್ದು, ಇದರಿಂದ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಭಾರೀ ನಷ್ಟವಾಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗೌರಿಶಂಕರ್ ಎಂಥವರು ಎಂದು ನ್ಯಾಯಾಲಯವೇ ಹೇಳಿದೆ. ಅಕ್ರಮವನ್ನು ಸಕ್ರಮ ಮಾಡುವ ಕಾಲ ಈಗ ಬಂದಿದೆ. ಸುರೇಶಗೌಡರು ಸಿಟ್ಟಾಗಿ ಮಾತನಾಡಿದರೂ ಅವರ ಮನಸ್ಸು ಮಗುವಿನಂತದು ಎಂದರು.
ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಬಿ.ಸುರೇಶಗೌಡ ಪರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭಾನುವಾರ ಅಬ್ಬರದ ಪ್ರಚಾರ ನಡೆಸಿದರು.
ಗೂಳೂರಿನಲ್ಲಿ ನಡೆದ ಪ್ರಚಾರದಲ್ಲಿ ಬೃಹತ್ ಸೇಬಿನ ಹಾರ ಹಾಕಿ ಮುಖ್ಯಮಂತ್ರಿ ಅವರನ್ನು ಸನ್ಮಾನಿಸಲಾಯಿತು.
ಸುರೇಶಗೌಡರು ಒಬ್ಬ ಸಾಧಕರು.ಕಳೆದ ಸಲ ಅವರು ಗೆಲುವು ಸಾಧಿಸಿದ್ದರೆ 5000 ಸಾವಿರ ಕೋಟಿ ಅನುದಾನ ಕ್ಷೇತ್ರಕ್ಕೆ ತರುತ್ತಿದ್ದರು ಎಂದರು.
ಶಾಸಕ ಗೌರಿಶಂಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ನ್ಯಾಯಾಲಯದಲ್ಲಿ ಸುರೇಶಗೌಡರಿಗೆ ಗೆಲವು ಆಗಿದೆ.ಇನ್ನೂ ಜನತಾ ನ್ಯಾಯಾಲಯದಲ್ಲಿ ಗೆಲುವು ಸಿಗಬೇಕಾಗಿದೆ ಎಂದರು.