ಪಾವಗಡ : ತಾಲ್ಲೂಕಿನ ಗಡಿಗ್ರಾಮ ವೆಂಕಟಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ಇಂದು ಭರ್ಜರಿ ಪ್ರಚಾರನಡೆಸಿದರು.
ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಜನರ ಜೀವನ ದುಸ್ಥರವಾಗಿದೆ, 40%ಕಮೀಷನ್ ಹಣ,,ಹಗರಣಗಳಿಂದ ಕೊಡಿದ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸಲೇ ಇಲ್ಲ ಎಂದರು .
ಸರ್ವೆಗಳ ಪ್ರಕಾರ ಜೆಡಿಎಸ್‌ಪಕ್ಷ 18 ರಿಂದ24 ಸ್ಥಾನ ಪಡೆಯಬಹುದು.ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ಬರುವುದರಿಂದ ಪಾವಗಡದಲ್ಲೂ ಸಹ ಕಾಂಗ್ರೆಸ್ ಅಭ್ಯರ್ಥಿ ಯಾದ ನನಗೆ ಮತನೀಡಿ ಜಯಶೀಲರನ್ನಾಗಿ ಮಾಡಿ ,ರಾಜ್ಯದಲ್ಲಿ ಕಾಂಗ್ರೆಸ್ ಪಾವಗಡದಲ್ಲೂ ಕಾಂಗ್ರೆಸ್ ಗೆದ್ದರೆ ಅಭಿವೃದ್ಧಿ ಕಾಮಗಾರಿಗಳನ್ನೂ,ಶಾಶ್ವತ ಯೋಜನೆಗಳನ್ನು ಪಾವಗಡಕ್ಕೆ ತರಬಹುದೆಂದು ಭರವಸೆಯ ನುಡಿಗಳನ್ನಾಡಿದರು.
ನನ್ನ ತಂದೆ ವೆಂಕಟರಮಣಪ್ಪ ತಾಲ್ಲೂಕಿಗೆ ಹಲವು ಶಾಶ್ವತ ಯೋಜನೆಗಳನ್ನು ತಂದು ಜನಮನ್ನಣೆ ಗಳಿಸಿದ್ದಾರೆ.ತಂದೆ ವೆಂಕಟರಮಣಪ್ಪ ಹಾದಿಯಲ್ಲೇ ಸಾಗಿ ತಾಲ್ಲೂಕನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಮತ ನೀಡಿ ಆಶೀರ್ವಾದಿಸುವಂತೆ ಜನರನ್ನು ಕೋರಿದರು.
ಕಾಂಗ್ರೆಸ್ ಮುಖಂಡರಾದ ಬತ್ತಿನೇನಿ ನಾನಿ, ಮಾನಂ ವೆಂಕಟಸ್ವಾಮಿ ನೇತೃತ್ವದಲ್ಲಿ ವೆಂಕಟಮ್ಮನಹಳ್ಳಿ, ಕ್ಯಾತಗನಚೇರ್ಲು,ವಳ್ಳೂರು, ಇಂಟುರಾಯನಹಳ್ಳಿ, ಬಳ್ಳಸಮುದ್ರ, ರಾಯಚೆರ್ಲು,ಆರ್ ಅಚ್ಚಮ್ಮನಹಳ್ಳಿ,ತಿರುಮಣಿ,ಅನ್ನದಾನಪುರ ಗ್ರಾಮಗಳಲ್ಲಿ ನೂರಾರು ಮಂದಿ ಗ್ರಾಮಸ್ಥರು ಅಭ್ಯರ್ಥಿ ವೆಂಕಟೇಶ್ ರಿಗೆ ಭವ್ಯ ಸ್ವಾಗತವನ್ನು ಕೋರಿದರು.
ಈ ವೇಳೆಯಲ್ಲಿ ಸಣ್ಣ ಕೃಷ್ಣಪ್ಪ. ಚನ್ನಕೇಶವ. ಗೋಪಾಲರೆಡ್ಡಿ. ನಂಬರು ಪೋತಣ್ಣ. ಫಕೃದ್ದೀನ್. ತಾಳ್ಳೂರು ವೆಂಕಟಸ್ವಾಮಿ.ಮಾದಿಗ ನಾರಾಯಣಪ್ಪ. ಮೆಂಬರ್ ಮುತ್ಯಾಲು.ಸುದರ್ಶನ್ ಬಾಬು.ಮುತ್ಯಾಲಪ್ಪ. ಎರ್ರ ಸ್ವಾಮಿ.ಚಕ್ಕರಪ್ಪ. ಎವಿಎಂ ಅಶೋಕ್. ತಿರುಪತಿಯ್ಯ. ನಾಗರಾಜು. ರಾಮಲಿಂಗ.ರಾಮಚಂದ್ರರೆಡ್ಡಿ ಚಲಪತಿ. ನಾಗು. ನವೀನ್. ಮುರಳಿ. ಜಯರಾಮ.ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು.
ಪಾವಗಡ ಪಟ್ಟಣದ ಕುಮಾರಸ್ವಾಮಿ ಬಡವಾಣೆಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಹೆಚ್‌ವಿ ವೆಂಕಟೇಶ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೂ ಈ ಬಡವಾಣೆಗೂ ಸಂಬಂಧವೇ ಇಲ್ಲ, ಪುರಸಭೆ ವ್ಯಾಪ್ತಿಯ ಬಡವರಿಗೆ ಅನುಕೂಲವಾಗಲೆಂದು ನನ್ನತಂದೆ ವೆಂಕಟರಮಣಪ್ಪ ಜಮೀನು ಮಂಜೂರು ಮಾಡಿಸಿ ಮನೆ ಕಟ್ಟಿಸುವ ಜೊತೆಗೆ ನಿವೇಶನವನ್ನು ಸಹ ಹಂಚಿದರು.ಈ ಬಡವಾಣೆಗೆ ಕುಮಾರಸ್ವಾಮಿ ಬದಲು ವೆಂಕಟರಮಣಪ್ಪ ಬಡವಾಣೆ ಎನ್ನುವುದೇ ಸಮಂಜಸ ಎಂದ ವೆಂಕಟೇಶ್ ಈ ವಾರ್ಡ್ ನ ಕೋಳಿ ಬಾಲಾಜಿ ಕಾಂಗ್ರೆಸ್ ಪಕ್ಷದಿoದ ಪುರಸಭೆ ಸದಸ್ಯೆಳಾಗಿ,ಅವರ ಪತ್ನಿಯನ್ನು ಉಪಾಧಕ್ಷರನ್ನಾಗಿ ಮಾಡಿದರು ಪಕ್ಷಕ್ಕೆ ದ್ರೊಹವೆಸಗಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ದ್ರೋಹ ಎಸಗುವವರಿಗೆ ತಕ್ಕ ಪಾಠ ಕಲಿಸಬೇಕೆoದು ಜನರಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಸೈಯದ್ ತಾಮಿಜ್ ಹಾಗೂ ಸಹೋದರರು ಕುಟುಂಬಗಳು , ಕನ್ನಮ್ನಚೆರ್ಲು ಜೆಡಿಎಸ್ ಮುಖಂಡ ಖಲಿದ್ ಅಹಮ್ಮದ್ ಜೆಡಿಎಸ್ ಪಕ್ಷ ತೊರೆದು ಪುರಸಭೆ ಸದಸ್ಯೆ ಮಾಲಿನ್ ತಾಜ್ , ತಾಲ್ಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಿಸ್ಸಾರ್ ಹಾಗೂ ಇಸ್ಮಾಯಿಲ್ ನೇತೃತ್ವದಲ್ಲಿ ನೂರಾರು ಜನ ಮುಸ್ಲಿಂ ಸಹೋದರರು ಜೆಡಿಎಸ್ ತೊರದು ಕಾಂಗ್ರೆಸ್ ಪಕ್ಷ ಸೇರ್ಪಡೆ ಯಾದರು.
ವರದಿ; ಕುಮಾರ ನಾಗಲಾಪುರ