ಗುಬ್ಬಿ: ಸ್ವಯಂ ಉದ್ಯೋಗ ಮಾಡಿ ಆರ್ಥಿಕ ಮಟ್ಟವನ್ನು ಸುದರಿಸಿಕೊಳ್ಳುವುದರ ಜೊತೆಗೆ ನಾಲ್ಕಾರು ಜನರಿಗೆ ಉದ್ಯೋಗ ನೀಡುವಲ್ಲಿ ಯುವಜನರು ಮುಂದಾಗಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಎಲ್.ಜಾರಕಿಹೊಳಿ ತಿಳಿಸಿದರು.
ತಾಲ್ಲೂಕಿನ ನಾರನಹಳ್ಳಿ ಗ್ರಾಮದಲ್ಲಿ ತೇಜಸ್ ಎಂಟರ್ ಪ್ರೈಸಸ್ ಅರೆಕಾಪ್ಲೇಟ್ಉತ್ಪಾದನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಕೋ ಫ್ರೆಂಡ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕ ಪರಿಸರ ಸಂರಕ್ಷಣೆಯಾಗುತ್ತದೆ.
ಬ್ಯಾಂಕ್ ಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡು ವ್ಯವಹಾರ ಯೋಜನೆಯನ್ನು ತಯಾರಿಸಿ ಕೊಟ್ಟರೆ, ಅದು ಸಮಂಜಸವಾಗಿದ್ದರೆ ಬ್ಯಾಂಕುಗಳು ಸಾಲ ಸೌಲಭ್ಯವನ್ನು ಒದಗಿಸುವಲ್ಲಿ ಮುಂದಾಗುತ್ತವೆ. ಸರ್ಕಾರವು ಕೆ.ಎಸ್.ಎಫ್.ಸಿ ಮೂಲಕ ಕಡಿಮೆ ಬಡ್ಡಿದರದಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯ ನೀಡುತ್ತಿದೆ ಎಂದರು.
ಮೀಸಲಾತಿ ನೀಡುವಲ್ಲಿ ಇರುವ ಸರ್ಕಾರವೆಂದರೆ ಸಿದ್ದರಾಮಯ್ಯನವರ ಸರ್ಕಾರ.
ವಿಶೇಷವಾಗಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡುವ ಯೋಜನೆಗಳನ್ನು ಸರ್ಕಾರ ತರುತ್ತದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ಮುಖ್ಯ ವಾಹಿನಿಯಲ್ಲಿ ಬರುವಲ್ಲಿ ಮುಂದಾಗಬೇಕು.
ಶಿಕ್ಷಣ ಪಡೆದರೆ ಬುದ್ಧ, ಬಸವ,ಅಂಬೇಡ್ಕರ್, ಜಗಜೀವನ್ ರಾಮ್ ರವರ ಚರಿತ್ರೆಯನ್ನು ತಿಳಿಯಲು ಅನುಕೂಲವಾಗುತ್ತದೆ.
ಆದಿಜಾಂಬವ ಬ್ರಿಗೇಡ್ ವತಿಯಿಂದ ತರಬೇತಿ ಪಡೆದು ಸ್ವಯಂ ಕೈಗಾರಿಕೆಗಳನ್ನು ಸ್ಥಾಪಿಸಿ ಸ್ವತಃ ಉದ್ದಿಮೆಯನ್ನು ಪ್ರಾರಂಭಿಸಿ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗುವ ನಿಟ್ಟಿನಲ್ಲಿ ಆದಿಜಾಂಬವ ಜನಾಂಗ ಮುಂದೆಬರಬೇಕು.
ಮಾನವ ಬಂಧತ್ವ ವೇದಿಕೆಯಲ್ಲಿ ಅನೇಕ ತರಬೇತಿಗಳನ್ನು ನೀಡಲಾಗುತ್ತದೆ.
ಇದರ ಸದುಪಯೋಗ ಪಡೆದುಕೋಳ್ಳಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಮಂಜು ಮಾತನಾಡಿ, ಸರಳ ಸಜ್ಜನಿಕೆಯ ಸಚಿವರು ನಮ್ಮ ಪುಟ್ಟ ಗ್ರಾಮಕ್ಕೆ ಬಂದು ಈ ಕೈಗಾರಿಕೆಯನ್ನು ಉದ್ಘಾಟಿಸಿರುವುದುಇತರೆ ಉದ್ಯಮಿಗಳಿಗೆ ಸ್ಪೂರ್ತಿ ನೀಡುತ್ತದೆ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು ಮಾತನಾಡಿ, ಸಿಎಸ್ ಪುರ ಹೋಬಳಿ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದರಿಂದ ಹೆಚ್ಚು ಅನುದಾನವನ್ನು ಕೊಟ್ಟು ರಸ್ತೆಗಳ ಅಭಿವೃದ್ಧಿಗೆ ಸಹಕರಿಸಿ ಎಂದು ಕೇಳಿಕೊಂಡರು.
ಕಾರ್ಯಕ್ರಮದಲ್ಲಿ ಆದಿಜಾಂಬವ ಯುವ ಬ್ರಿಗೇಡ್ ರಾಜ್ಯ ಅಧ್ಯಕ್ಷ ಏಳುಕೊಟಪ್ಪ ಪಾಟೀಲ್ ಮಾತನಾಡಿದರು.
ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಅಭಿಯಂತರ ಎನ್ .ಸಿ. ಕೃಷ್ಣಕಾಂತ್, ಉದ್ಯಮಿ ಮಂಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್, ಎಸ್ ಬಿ ಐ ಬ್ಯಾಂಕ್ ವ್ಯವಸ್ಥಾಪಕ ಶಿವಾನಂದ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ, ಚಾಲುಕ್ಯ ಆಸ್ಪತ್ರೆಯ ಸಿಇಓ ನಾಗಭೂಷಣ್, ಮುಖಂಡರಾದ ವೆಂಕಟರಮಣ, ಪುಟ್ಟರಾಜು, ತಿಮ್ಮೆಶ್, ಗುರುದತ್, ಮಂಜಣ್ಣ, ಮೂರ್ತಿ, ಶಿವನಂಜಪ್ಪ, ಡಿಎಸ್ಎಸ್ ಸಂಚಾಲಕ ಬಸವರಾಜು, ಗುತ್ತಿಗೆದಾರ ರಾಜಣ್ಣ ಇತರರು ಭಾಗವಹಿಸಿದ್ದರು.