ತುರುವೇಕೆರೆ: ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತಬಾಂಧವರು ಪರಿಹಾರದ ಹಣವನ್ನು ಪಡೆಯಲು ಖಡ್ಡಾಯವಾಗಿ ಎಫ್.ಐ.ಡಿ ಮಾಡಿಸಬೇಕೆಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಒಟ್ಟು 223726 ತಾಕುಗಳಿದ್ದು ಇದುವರೆವಿಗೂ ಫ್ರೂಟ್ ತಂತ್ರಾಂಶದಲ್ಲಿ 128328 ತಾಕುಗಳನ್ನು ಮಾತ್ರ ಸೇರ್ಪಡೆಗೊಳಿಸಿ, ರೈತರುಗಳು ಎಫ್.ಐ.ಡಿಗಳನ್ನು ಸೃಜನೆ ಮಾಡಿಸಿದ್ದಾರೆ. ಇನ್ನೂ 95398 ತಾಕುಗಳನ್ನು ಫ್ರೂಟ್ ತಂತ್ರಾಂಶದ ಎಫ್.ಐ.ಡಿಗಳಿಗೆ ಜೋಡಣೆ ಮಾಡಬೇಕಿದೆ.
2023-24ನೇ ಸಾಲಿನ ಮುಂಗಾರು ಹಂಗಾಮಿನ ಬರಪರಿಹಾರದ ಹಣವನ್ನು ಪಡೆದುಕೊಳ್ಳಲು ರೈತರು ಈ ಕೂಡಲೇ ತಮ್ಮ ಜಮೀನಿನ ಸರ್ವೇ ನಂಬರ್ ಗಳನ್ನು ಎಫ್.ಐ.ಡಿ ಗಳಿಗೆ ಸೇರ್ಪಡೆಗೊಳಿಸಬೇಕು. ಹಾಗು ಇದುವರೆವಿಗೂ ಎಫ್.ಐ.ಡಿ ಮಾಡಿಸದ ರೈತರು ಪಹಣಿ, ಆಧಾರ್, ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ಗಳ ಜೆರಾಕ್ಸ್ ಪ್ರತಿಗಳೊಂದಿಗೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಎಫ್.ಐ.ಡಿಗಳನ್ನು ಸೃಜನೆ ಮಾಡಬೇಕಾಗಿ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಕೃಷಿ ಹೋಬಳಿ ಕೇಂದ್ರದ ಅಧಿಕಾರಿ ಗಿರೀಶ್,ರುದ್ರಪ್ಪ ಮತ್ತು ಸಿಬ್ಬದಿಗಳು ಇದ್ದರು.