ತುರುವೇಕೆರೆ:
ತಾಲ್ಲೂಕಿನ ಕೆ.ಮಾವಿನಹಳ್ಳಿ ಕುಮಾರ್ ಆಚಾರ ಯುವಕನನ್ನು ಪೊಲೀಸರು ಇಸ್ಪೀಟ್ ನೆಪದಲ್ಲಿ ಬಂಧಿಸಿ ಅವರ ವಶದಲ್ಲಿ ಇರುವಾಗಲೇ ಯುವಕ ಸಾವನ್ನಪ್ಪಿರುವುದು ಕುಟುಂಬಸ್ಥರ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದ್ದು ಈ ಬಗ್ಗೆ ತೀವ್ರ ತನಿಖೆಯಾಗ ಬೇಕು ಮತ್ತು ತಪ್ಪಿತಸ್ಥ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಕಾನೂನು ಕ್ರಮ ಜರುಗಿಸಬೇಕೆಂದು ಮಾಜಿ ಶಾಸಕ ಜಯರಾಮ್ ಎ.ಎಸ್ ಒತ್ತಾಯಿಸಿದರು.
‘ಪಟ್ಟಣದ ತಮ್ಮ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಅ.23 ರಂದು ನಡೆದ ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ ನಾಲ್ವರನ್ನು ತಮ್ಮ ವಶಕ್ಕೆ ಪಡೆದು ಅವರ ಸ್ವಂತ ದ್ವಿಚಕ್ರ ವಾಹನದಲ್ಲಿ ಪೊಲೀಸ್ ಠಾಣೆಗೆ ಕರೆತರುವ ಮಾರ್ಗ ಮಧ್ಯೆ ಕುಮಾರ ಆಚಾರ್(47) ಎಂಬುವರು ಇದ್ದಕ್ಕಿದ್ದ ಹಾಗೆ ವಾಹನದಿಂದ ಕುಸಿದು ಕೆಳಗೆ ಬಿದ್ದಿದ್ದಾನೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಕುಮಾರ್ ಆಚಾರ್ನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಆತ ಈಗಾಗಲೇ ಮೃತಪಟ್ಟಿದ್ದಾನೆಂದು ದೃಢಪಡಿಸಿದ್ದಾರೆ ಎಂದು ಪಟ್ಟಣದ ಪೊಲೀಸರು ಎಫ್ ಐಆರ್ ಮಾಡಿದ್ದಾರೆ.’
ಆದರೆ ಇದು ಸ್ವಾಭಾವಿಕ ಸಾವಲ್ಲ ಅನುಮಾನಾಸ್ಪದ ಸಾವು. ಮೃತಪಟ್ಟ ವ್ಯಕ್ತಿಯನ್ನು ಪೊಲೀಸರೇ ಎಡೆ ಮಟ್ಟೆಯಲ್ಲಿ ಒಡೆದು ಆತನನ್ನು ಆಸ್ಪತ್ರೆಗೆ ಕರೆತಂದಿರುವ ಸಾದ್ಯತೆಗಳಿವೆ ಎಂದು ಆರೋಪಿಸಿದ ಅವರು ಇಲ್ಲಿಯೇ ಪೋಸ್ಟ್ ಮಾರ್ಟಂ ಮಾಡಿಸದೆ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಏಕೆ ತೆಗೆದುಕೊಂಡು ಹೋದರು.
18 ಗಂಟೆಗಳ ನಂತರ ಪೋಸ್ಟ್ ಮಾರ್ಟಂ ಮಾಡಿಸಿದ್ದಾರೆ. ಇದು ಪೊಲೀಸರು ತಾವು ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಹಾಡಿರುವ ನಾಟಕ. ಯಾವುದೇ ಕಾರಣಕ್ಕೂ ಇದು ಸ್ವಾಭಾವಿಕ ಸಾವಲ್ಲ ಆತನನ್ನು ಪೊಲೀಸರೇ ಹೊಡೆದು ಸಾಯಿಸಿದ್ದಾರೆ. ಇದರ ಬಗ್ಗೆ ಸರಿಯಾದ ತನಿಖೆಯಾಗಬೇಕು, ಇಲ್ಲವಾದಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿಯ ಮುಂದೆ ವಿಶ್ವಕರ್ಮ ಜನಾಂಗದವರು ಹಾಗೂ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಸಂಸದರು, ಪದಾಧಿಕಾರಿಗಳು, ಸೇರಿ ಪ್ರತಿಭಟನೆಯನ್ನು ಮಾಡಲಾಗುವುದು ಎಂದು, ಎಚ್ಚರಿಕೆ ನೀಡಿದರು.
ಮೃತನ ಕುಟುಂಬವು ಸಹ ಇದು ಸಹಜ ಸಾವಲ್ಲ ಪೊಲೀಸರೇ ಒಡೆದು ಸಾಯಿಸಿದ್ದಾರೆ, ನಮಗೆ ನ್ಯಾಯ ಬೇಕು. ಸರಿಯಾದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಮೃತ ಕುಮಾರ್ ಆಚಾರ್ ಗೆ ಒಬ್ಬರು ಮಡದಿ, ಒಬ್ಬ ಮಗ, ಹೆಣ್ಣು ಮಗು, ವಯಸ್ಸಾದ ತಂದೆ ,ಮತ್ತು ಅಕ್ಕ, ಇದ್ದಾರೆ ಇವರನ್ನು ಸಾಕುವವರು ಯಾರು ಎಂದು ಖಾರವಾಗಿ ಪ್ರಶ್ನಿಸಿದರು.
ಸುದ್ದಿ ಗೋಷ್ಟಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ಹರಿಕಾರನಹಳ್ಳಿ ಸಿದ್ದಪ್ಪಾಜಿ, ಯು.ಬಿ.ಸುರೇಶ್, ಮೃತನ ಪತ್ನಿ ಮಂಜಮ್ಮ, ತಂಗಿ ಪುಷ್ಪ, ತಂದೆ ರಂಗಚಾರ್, ಭಾವ ಶಿವಲಿಂಗಚಾರ್ ಇತರರು ಇದ್ದರು.