ತುರುವೇಕೆರೆ:
ಪೊಲೀಸ್ ಲಾಕಪ್ ಡೆತ್ ನಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡ ಬೇಕು ಹಾಗು ತಪ್ಪಿತಸ್ಥ ಪೊಲೀಸ್ ಅಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಸಿ.ಪಿಐ ಕಚೇರಿ ಮುಂಬಾಗ ಮಾಜಿ ಶಾಸಕ ಜಯರಾಮ್ ಎ.ಎಸ್ ಅವರ ನೇತೃತ್ವದಲ್ಲಿ ತಾಲ್ಲೂಕು ಬಿಜೆಪಿ ಘಟಕವು ಸೋಮವಾರ ಅಹೋರಾತ್ರಿ ಧರಣಿ ನಡೆಸಿದರು.
ಮಾಜಿ ಶಾಸಕ ಜಯರಾಮ್ ಎ.ಎಸ್ ಮಾತನಾಡಿ, ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಕೆ.ಮಾವಿನಹಳ್ಳಿ ಗ್ರಾಮದ ಕುಮಾರ್ ಆಚಾರ್ ಹಾಗೂ ನಾಲ್ಕು ಜನರನ್ನು ಇಸ್ಪೀಟ್ ಆಡುತ್ತಿದ್ದಾರೆ ಎಂದು ಪಟ್ಟಣದ ಪಿ.ಎಸ್.ಐ ಗಣೇಶ್ ಹಾಗೂ ಸಿಬ್ಬಂದಿಗಳು ಬಂದಿಸಿ ಕರೆತರುವಾಗ ಕುಮಾರ ಆಚಾರ್ ನನ್ನು ಪೋಲಿಸರು ಒಡೆದು ಸಾಯಿಸಿದ್ದಾರೆ.
ಪೊಲೀಸರು ಇಲಾಖೆಯಲ್ಲಿ ಜೀಪ್ ಇದ್ದರೂ ಸಹ ಜೀಪನಲ್ಲಿ ತೆರಳಿಲ್ಲ, ಮಾರ್ಗ ಮದ್ಯೆ ಸಾವನ್ನಪ್ಪಿದ್ದಾನೆ ಎಂದಾದರೆ ಆಸ್ಪತ್ರೆ ಆಂಬೂಲೆನ್ಸ್ ಇದ್ದರು ಕರಸಿಕೊಳ್ಳದೆ ಯಾವುದೋ ಕಾರಿನಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಮೃತ ದೇಹ ತರಲಾಗಿದೆ.
ಕುಮಾರ್ ಆಚಾರ್ ಬದುಕಿದ್ದಾನೆ ಎಂದು ಕುಟುಂಬದವರಿಗೆ ಸುಳ್ಳು ಹೇಳಿಕೊಂಡು ತುರುವೇಕೆರೆ ಠಾಣೆಗೆ ಕರೆಯಿಸಿಕೊಂಡು ಕುಟುಂಬದ ಸದಸ್ಯರನ್ನು ಬೆದರಿಸಿ ಪತ್ನಿ, ತಂಗಿ, ತಂದೆ ಹತ್ತಿರ ಸಹಿ ಮಾಡಿಕೊಂಡಿದ್ದಾರೆ.
ಕುಮಾರ್ ಆಚಾರ್ನನ್ನು ಪೊಲೀಸರು ಎಡೆಮಟ್ಟೆಯಲ್ಲಿ ಒಡೆದು ಕೊಲೆ ಮಾಡಿ ಲಾಕಪ್ ಡೆಥ್ ಮುಚ್ಚಿಹಾಕಲು ಮೃತ ದೇಹವನ್ನು ತುಮಕೂರಿನಲ್ಲಿ ಮರಣ್ಣೋ ತ್ತರ ಪರೀಕ್ಷೆ ಮಾಡಿಸಿದ್ದಾರೆ. ಮೃತ ಕುಟುಂಬಕ್ಕೆ ನ್ಯಾಯ ದೊರಕಬೇಕು, ಸೂಕ್ತ ತನಿಖೆಯಾಗಬೇಕು ಕುಟುಂಬದ ಹೇಳಿಕೆಗಳನ್ನು ನಮ್ಮ ಮುಂದೆಯೇ ತೆಗೆದುಕೊಳ್ಳಬೇಕು, ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದರೆ ಸರ್ಕಾರ ನೀಡುವ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮೃತರ ಬಡ ಕುಟುಂಬಕ್ಕೆ ನ್ಯಾಯ ದೊರೆಯುವರೆಗೂ ಆಹೋರಾತ್ರಿ ಪ್ರತಿಭಟಣೆ ಮುಂದುವರೆಯಲಿದೆ. ಸ್ಥಳಕ್ಕೆ ಎಸ್.ಪಿ ಆಗಮಿಸಬೇಕು. ಈಗಾಗಲೇ ತಾಲ್ಲೂಕಿನ ಎಲ್ಲ ಸಂಘ ಸಂಸ್ಥೆಗಳು ಪ್ರತಿಭಟನೆ ಬೆಂಬಲ ಸೂಚಿಸಿದ್ದು ಉಗ್ರವಾದ ಹೋರಾಟ ಮಾಡಲಾಗುವುದು.
ಮೃತರ ಕುಟುಂಬಕ್ಕೆ ಹಾಗು ಪ್ರತಿಭಟನಾ ನಿರತ ಕಾರ್ಯಕರ್ತರಿಗೆ ಯಾವುದಾದರೂ ಅಹಿತಕರ ಘಟನೆಗಳು ಸಂಭವಿಸದರೆ ಪೊಲೀಸ್ ಇಲಾಖೆಯೇ ನೇರಹೊಣೆ ಎಚ್ಚರಿಸಿದರು.
ತಾಲ್ಲೂಕಿನ ಜನತೆ ಪಕ್ಷ ಬೇದ ಮರೆತು ಮೃತ ಬಡ ಕುಟುಂಬಕ್ಕೆ ನ್ಯಾಯ ಒದಗಿಸಲು ಪ್ರತಿಭಟನೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನಾ ಸ್ಥಳಕ್ಕೆ ಡಿವೈ.ಎಸ್.ಪಿ ಲಕ್ಷ್ಮೀಕಾಂತ್, ಸಿಪಿಐಗಳಾದ ಲೋಹಿತ್, ಅರುಣ್ ಬೇಟಿ ನೀಡಿ ಇಲಾಖಾ ತನಿಖೆ ಮಾಡಲಾಗುವುದು ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಪ್ರತಿಭಟನೆ ಮುಂದುವರೆಸಿದರು.
ಪ್ರತಿಭಟನೆಯಲ್ಲಿ ಮೃತ ಪತ್ನಿ ಮಂಜಮ್ಮ, ಸಹೋದರಿ ಪುಷ್ಪ, ತಂದೆ ರಂಗಚಾರ್ ಪಟ್ಟಣ ಪಂಚಾಯಿತಿ ಸದಸ್ಯರಾದ ಚಿದಾನಂದ್, ಪ್ರಭಾಕರ್, ಶೀಲಾ, ವಿಶ್ವಕರ್ಮ ಸಮಾಜದ ಅಧ್ಯಕ್ಷ ದೇವರಾಜು, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ವಿ.ಟಿ.ವೆಂಕಟರಾಮಯ್ಯ, ಡಿ.ಆರ್.ಬಸವರಾಜು, ವಿ.ಬಿ.ಸುರೇಶ್, , ಡಿ.ಆರ್.ಬಸವರಾಜು, ಉಗ್ರಯ್ಯ, ಚಂದ್ರಯ್ಯ, ಗೊಟ್ಟಿಕೆರೆಕಾಂತರಾಜು, ನಂಜೇಗೌಡ, ಗೌರೀಶ್, ಚೂಡಾಮಣಿ, ಜಯಶೀಲಾ, ಉಮಾರಾಜ್, ಪ್ರಕಾಶ್, ದಯಾನಂದ್, ಶಿವಕುಮಾರ್, ಬುಗಡನಹಳ್ಳಿರಾಜು, ಕುಮಾರ್, ಜಯಣ್ಣ ಸೇರಿದಂತೆ ಇತರರು ಇದ್ದರು.