ಗುಬ್ಬಿ : ಕನ್ನಡ ನಾಡು ನುಡಿಗೆ ದಕ್ಕೆ ಬಾರದಂತೆ ನಾವೆಲ್ಲರೂ ಬದ್ಧರಾಗಿ ಕಾನೂನುಗಳನ್ನು ಪಾಲಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ತಹಶೀಲ್ದಾರ್ ಬಿ.ಆರತಿ ತಿಳಿಸಿದರು.
ಕನ್ನಡ ರಾಜ್ಯೋತ್ಸವ ಆಚರಣೆ ಸಮಿತಿ ತಾಲೂಕು ಪಂಚಾಯಿತಿ ಪಟ್ಟಣ ಪಂಚಾಯಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡಕ್ಕಾಗಿ ದುಡಿಯುವವರನ್ನು ನೆನೆಯುವ ದಿನ ಕನ್ನಡ ರಾಜ್ಯೋತ್ಸವ ದಿನವಾಗಬೇಕು. ಕನ್ನಡದ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕನ್ನಡ ಭಾಷೆಯನ್ನು ಭಾಷಾ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾದಾಪುರ ಶಿವಪ್ಪ ಮಾತನಾಡಿ, ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸುವ ದಿನವಾಗಿ ಕನ್ನಡ ರಾಜೋತ್ಸವವನ್ನು ಆಚರಿಸಲಾಗುತ್ತಿದೆ. ಕನ್ನಡಕ್ಕೆ ಮಹಾನ್ ವ್ಯಕ್ತಿಗಳು ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಾದ ರಂಗಭೂಮಿಯಲ್ಲಿ ಎಂಎನ್ ನಾರಾಯಣಪ್ಪ, ಸಮಾಜಸೇವೆ ಹೆಚ್.ಡಿ.ಎಲ್ಲಪ್ಪ, ಕೃಷಿ ಕ್ಷೇತ್ರ ಟಿ.ನಳಿನ, ಶಿಕ್ಷಣ ಕ್ಷೇತ್ರ ಜಿ.ಪ್ರಕಾಶ್, ಜಾನಪದ ಕ್ಷೇತ್ರ ಜಿ.ಆರ್.ಮಧು, ಪರಿಸರ ಕ್ಷೇತ್ರ ಎಸ್.ರಘು, ಸಾಹಿತ್ಯ ಕ್ಷೇತ್ರ ಅರುಣ್ ಕುಮಾರ್ , ವೈದ್ಯಕೀಯ ಕ್ಷೇತ್ರ ಲೋಕೇಶ್ ಹನುಮಪ್ಪ ಹೊಸಮನಿ ಇವರನ್ನ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಬಿಇಒ ಮಧುಸೂದನ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಂಜುಳದೇವಿ, ಪ್ರಾಂಶುಪಾಲ ಡಾ. ಪ್ರಸನ್ನ ಕುಮಾರ್, ಆರಕ್ಷಕರು ವೃತ್ತ ನಿರೀಕ್ಷಕ ಗೋಪಿನಾಥ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ ಎಚ್ ರಮೇಶ್, ಎಇಇ ನಟರಾಜು, ವೇಂಕಟೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್‌ಸಿ ಯತೀಶ್, ಹಾಗೂ ಪಟ್ಟಣ ಪಂಚಾಯಿತಿ ಎಲ್ಲಾ ಚುನಾಯಿತ ಸದಸ್ಯರು ತಾಲೂಕು ಆಡಳಿತ ಸಿಬ್ಬಂದಿಗಳು ಮತ್ತಿತರರು ಇದ್ದರು.