ಬಗೆ ಬಗೆ ಬಣ್ಣ ಈ ಶರೀರದಲ್ಲೂ . ಆಡು ಭಾಷೆಯಲ್ಲಿ ಬಣ್ಣದ ಗಮ್ಮತ್ತು. ಆದರೂ ಮನಸ್ಸು ಶಾಂತತೆ ತುಂಬಿರಲಿ ಎಂದು ಹೇಳುತ್ತಾ ಕಣ್ಣಲ್ಲಿ ಕಾಮನ ಬಿಲ್ಲು ಇದ್ದರೂ ಸ್ನೇಹ , ಪ್ರೀತಿ, ಶಾಂತತೆ, ತಾಳ್ಮೆ , ಸೌರ್ಹಾದತೆ,ಎಲ್ಲ ಬಿಳಿ ಎಂದು ಸಾರಿದ್ದಾರೆ ಕವಯಿತ್ರಿ ಈ ಹೋಳಿ ಹಬ್ಬದ ಸಂದರ್ಭದಲ್ಲಿ.
************
ಬಣ್ಣ ಬಣ್ಣಿಸಲೇ
ಎಳೆ ಮಗುವಿನ ತುಟಿ
ನಸು ಗುಲಾಬಿನೇರಳೆ ಕಣ್ಣಿನ
ಕಂದನಲ್ಲೆಯ ಅಂಗಾಲು
ನಸು ಗೆಂಪುಕೋಪದಿ ಬಿಟ್ಟ
ಕೆಂಗಣ್ಣುಚಳಿಗೆ ನೀಲಿಗಟ್ಟಿದ
ತುಟಿಕೆನೆ ಬಣ್ಣದ
ಮೈ ಬಣ್ಣತಾಂಬೂಲದಿಂದ
ಕೆಂಪಾದ ನಾಲಗೆಕಪ್ಪನೆ ಮೋಡದಂತ
ಮುಂಗುರುಳುಹಸಿರು ಪಿತ್ತ
ಹರಿಶಿನ ಕಾಮಾಲೆ
ರಕ್ತ ಕೆಂಪುರಕ್ತವಿಲ್ಲದೇ ಬಿಳಿಚಿ
ಬೆಳ್ಳಗಾದ ಉಗುರುಹಾಲು ಬಿಳುಪು
ಕೆನ್ನೆ ಕೆಂಪುನೀಲ ಮೇಘ ಶ್ಯಾಮ
ನೀಲ ಕಂಠಬಣ್ಣದ ಓಕುಳಿ
ದೇಹವಿದು …ಮನಸ್ಸಿರಲಿ
ಶಾಂತ ಬಿಳಿಡಾII ರಜನಿ