ಪಾವಗಡ :ಈ ಭಾಗದ ಸೋಲಾರ್ ನಿರ್ಮಾಣ ಮಾಡಿ ಇಡೀ ಪ್ರಪಂಚ ತಿರುಗಿ ನೋಡುವಂತೆ ಮಾಡಿದ ನನಗೆ ಈ ಋಣ ತೀರಿಸಬೇಕಾದರೆ ಈ ಭಾಗದ ಎಚ್ ವಿ ವೆಂಕಟೇಶ್ ನಾಮಪತ್ರ ಸಲ್ಲಿಕೆ ವೇಳೆ ಆಶೀರ್ವಾದ ಮಾಡಲು ಹರಿದು ಬಂದ ಜನಸಾಗರವೇ 2023ರ ಚುನಾವಣೆಯ ಕಾಂಗ್ರೆಸ್ ಪಕ್ಷ ಗೆಲುವಿಗೆ ನಿಮ್ಮ ಮತವನ್ನು ಹಾಕಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೇಳಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹೆಚ್ ವಿ ವೆಂಕಟೇಶ್ ಅವರು ಪಟ್ಟಣದಲ್ಲಿ ಬೃಹತ್ ಶಕ್ತಿ ಪ್ರದರ್ಶನದ ಮೂಲಕ ಸಾವಿರಾರು ಕಾರ್ಯಕರ್ತ ಬೆಂಬಲಿಗರ ಸಮ್ಮುಖದಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿದ ನಂತರ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು
ನಿಮ್ಮ ಮಗ ನಾನೊಬ್ಬನಿದ್ದೇನೆ ನಾನು ಸಮಾಜದ ರೈತ ಮಗ ಇಲ್ಲಿ ಎಚ್‌ವಿ ವೆಂಕಟೇಶ್ ಅಭ್ಯರ್ಥಿಯಲ್ಲ ನಾನು ಡಿಕೆ ಶಿವಕುಮಾರ್ ಎಂದು ಮನವರಿಕೆ ಮಾಡಿಕೊಂಡು ಮತ ನೀಡಿ ಎಂದು ಪಾವಗಡದ ಮನೆ ಮಹಾಜನತೆಗೆ ಕೇಳಿಕೊಂಡರು.
ಕಾಂಗ್ರೆಸ್ ಪಕ್ಷ ಮತ ನೀಡಿ ಅಧಿಕಾರಕ್ಕೆ ಬಂದ ತಕ್ಷಣವೇ ತಾಲೂಕಿನ ಜನತೆಗೆ 24 ಗಂಟೆ ಉಚಿತ ವಿದ್ಯುತ್, ಪ್ರತಿಯೊಬ್ಬ ವ್ಯಕ್ತಿಗೆ 10 ಕೆಜಿ ಅಕ್ಕಿ, ಪ್ರತಿಯೊಂದು ಮನೆಯ ಕುಟುಂಬದ ಮಹಿಳೆಯ ಯಜಮಾನಿಗೆ 2,000 ರೂ ತಮ್ಮ ಖಾತೆಗೆ ಸರ್ಕಾರದಿಂದ ನೇರವಾಗಿ ಜಮಾ ಮಾಡಲಾಗುವುದೆಂದು ಕಾಂಗ್ರೆಸ್ ಪ್ರಣಾಳಿಕೆಯ ಯೋಜನೆಗಳನ್ನು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರು ಹಾಗೂ ಲಕ್ಷ್ಮಣ್ ಸೌದಿ ಸೇರಿದಂತೆ ಹಲವಾರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಅನೇಕ ನಾಯಕರುಗಳು ತಮ್ಮ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದರಿಂದ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಹಾಗಾಗಿ ಮುಂದಿನ ದಿನಗಳಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ನೀವೆಲ್ಲರೂ ಮತ ನೀಡಿ ಸಹಕರಿಸಿ ಎಂದು ಹೇಳಿದರು.
ನೀವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬೆಂಬಲಿಸಿದರೆ ಅಧಿಕಾರಕ್ಕೆ ಬಂದ ತಕ್ಷಣ ನಿಮ್ಮ ಋಣವನ್ನು ನಾನು ತೀರಿಸುತ್ತೇನೆ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ ಎನ್ ಚಂದ್ರಪ್ಪ . ಆಂಧ್ರಪ್ರದೇಶದ ಮಾಜಿ ಸಚಿವ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಎನ್ ರಘುವೀರ ರೆಡ್ಡಿ. ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್ ವಿ ವೆಂಕಟೇಶ್ . ಪುರಸಭಾ ಮಾಜಿ ಅಧ್ಯಕ್ಷ ಮಾನಂ ವೆಂಕಟಸ್ವಾಮಿ. ಎ ಶಂಕರ್ ರೆಡ್ಡಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು. ರಾಮಾಂಜಿನಪ್ಪ. ವಕೀಲ ಭಗವಂತಪ್ಪ. ವೆಂಕಟರಾಮರೆಡ್ಡಿ. ಸೇರಿದಂತೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಮೆರವಣಿಗೆಯಲ್ಲಿ 30 ಸಾವಿರ ಕಾರ್ಯಕರ್ತರು ಭಾಗಿ
ಪಾವಗಡ ಪಟ್ಟಣದ ಟೋಲ್ ಗೇಟ್ ಬಳಿ ಇರುವ ಅಂಬೇಡ್ಕರ್ ವೃತ್ತದಿಂದ ಹಿಡಿದು ಶನಿ ಮಹಾತ್ಮ ವೃತ್ತದವರೆಗಿನ 30 ಸಾವಿರಕ್ಕೂ ಅಧಿಕ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಜೊತೆಗೂಡಿ ಎಚ್ ವಿ ವೆಂಕಟೇಶ್ ರವರ ನಾಮಪತ್ರ ಸಲ್ಲಿಸಿ ಬೃಹತ್ ಮೆರವಣಿಗೆ ಮೂಲಕ ಸುಡುವ ಬಿಸಿಲಿನಲ್ಲೂ ಸಾವಿರಾರು ಕಾರ್ಯಕರ್ತರು ಕುಣಿಯುತ್ತ ತಮ್ಮ ನಾಯಕನ ಪರವಾನಗಿ ಜೈಕಾರ ಹಾಕಿ ಕಾಂಗ್ರೆಸ್ ಪಕ್ಷದ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು.