ದಲಿತರು ಕುಣಿಕೇನಹಳ್ಳಿ ಕೆಂಪಮ್ಮದೇವಿ ದೇವಾಲ ಪ್ರವೇಶ ಸುಮ್ಮನೆ ಗೊಂದಲ ಸೃಷ್ಟಿ, ಗ್ರಾಮದಲ್ಲಿ ಸಾಮರಸ್ಯವಿದೆ
ತುರುವೇಕೆರೆ: ಕುಣಿಕೇನಹಳ್ಳಿ ಗ್ರಾಮದೇವತೆ ಕೆಂಪಮ್ಮದೇವಿಯ ದೇವಾಲಯ ಪ್ರವೇಶಕ್ಕೆ ದಲಿತರಿಗೇನೂ ನಿರಾಕರಣೆ ಮಾಡಿಲ್ಲ. ಊರ ದೇವತೆ ಎಲ್ಲರೂ ಹೋಗಬಹುದು ತಪ್ಪಿಲ್ಲ ಎಂದಿದ್ದೆವು.ಹೀಗಿದ್ದರೂ ಸಹ ಕೆಲ ದಲಿತ ಮುಖಂಡರು ಅಧಿಕಾರಿಗಳು, ಪೊಲೀಸರನ್ನು ಕರೆಯಿಸಿಕೊಳ್ಳುವ ಅವಶ್ಯಕತೆ ಏನಿತ್ತು? ಇದರಿಂದ ಗ್ರಾಮಕ್ಕೆ ಕೆಟ್ಟ ಹೆಸರು ಬಂದಂತೆ ಆಗುವುದಿಲ್ಲವೆ? ಎಂದು ಬಾಣಸಂದ್ರ ಗ್ರಾಮ ಪಂಚಾಯಿತಿ ಸದಸ್ಯ ಆನಂದ ಮರಿಯಾ ಪ್ರತಿಕ್ರಿಯಿಸಿದ್ದಾರೆ.
ತಾಲ್ಲೂಕಿನ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಣಿಕೇನಹಳ್ಳಿ ಗ್ರಾಮದೇವತೆ ಕೆಂಪಮ್ಮದೇವಿಯ ದೇವಾಲಯ ಆವರಣದಲ್ಲಿ ದಲಿತರ ದೇವಾಲಯ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ತಲತಲಾಂತರದಿಂದ ಈ ದೇವಿಗೆ ದಲಿತರು ಸೇರಿದಂತೆ ಎಲ್ಲ ಸಮುದಾಯದವರು ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ಎಲ್ಲರೂ ಅನ್ಯೋನ್ಯವಾಗಿದ್ದೇವೆ. ನಮ್ಮ ಕೆಂಪಮ್ಮದೇವಿಯ ಪಕ್ಕದಲ್ಲಿಯೇ ಆ ಸಮುದಾಯದವರ ಚಿಕ್ಕಮ್ಮ ದೇವಿ ದೇವಾಲಯ ನಿಮರ್ಾಣದಲ್ಲಿ ಗ್ರಾಮದವರೆಲ್ಲ ಸೇರಿ ಸಹಕಾರ ನೀಡಿದ್ದೇವೆ. ದೇವಸ್ಥಾನ ಉದ್ಘಾಟನೆ ವೇಳೆ ನಾವು ಭಾಗವಹಿಸಿ, ಗ್ರಾಮದವರೆಲ್ಲರೂ ಸಾಮೂಹಿಕವಾಗಿ ಮುಂದೆ ನಿಂತು ಪೂಜಾ ಕಾರ್ಯ ಮಾಡಿಸಿದೆವು. ಅವರು ಕೊಟ್ಟ ಪ್ರಸಾದ ಸೇವಿಸಿದ್ದೇವೆ ಎಂದರು.
ಇದುವರೆವಿಗೂ ಯಾರೊಂದಿಗೂ ಜಗಳವಿಲ್ಲದೆ ಸಾಮರಸ್ಯದಿಂದ ಹೋಗುತ್ತಿದ್ದೇವೆ. ಹೀಗಿರುವಾಗ ಸುಮ್ಮನೇ ಗ್ರಾಮದಲ್ಲಿ ಗೊಂದಲ ಸೃಷ್ಟಿಸಿ ಗ್ರಾಮದ ಹೆಸರು ಕೆಡಿಸುವುದಲ್ಲದೆ ಗ್ರಾಮಸ್ಥರಿಗೆ ನೋವು ಉಂಟು ಮಾಡುವುದು ಸರಿಯೇ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮದ ಹಿರಿಯರಾದ ಶಿವಾನಂದ ಮಾತನಾಡಿ, ಗ್ರಾಮದಲ್ಲಿ ಮೂರು ದೇವಾಲಯಗಳಿವೆ. ಅವುಗಳಿಗೂ ದಲಿತರು ಪ್ರವೇಶ ಮಾಡಬಹುದು. ಯಾರಿಂದಲೂ ಬರಬೇಡಿ ಅನ್ನುವ ಕಟ್ಟಾಜ್ಞೆ ಮಾಡಿಲ್ಲ, ತೊಂದರೆಯೂ ಕೊಟ್ಟಿಲ್ಲ. ಎಲ್ಲರೂ ಪರಸ್ಪರ ಸಹಬಾಳ್ವೆಯಿಂದ ಇದ್ದೇವೆ, ಯಾರಲ್ಲೂ ಭಿನ್ನಬೇಧ ಇಲ್ಲ. ಈ ಬಗ್ಗೆ ನಿನ್ನೆ ಬಂದಂತಹ ಡಿವೈಎಸ್ ಪಿ, ತಹಶೀಲ್ದಾರ್, ಪೊಲೀಸರು ಮತ್ತು ಎಲ್ಲ ಅಧಿಕಾರಿಗಳಿಗೂ ಇದನ್ನೇ ಹೇಳಿದ್ದೇವೆ. ವಿನಾಕಾರಣ ಗ್ರಾಮದಲ್ಲಿ ಅಶಾಂತಿ ಉಂಟುಮಾಡುವುದು ಯಾವ ನ್ಯಾಯ ಎಂದು ಅಸಮಾಧಾನ ತೋರಿದರು.
ಈ ಸಂದರ್ಭದಲ್ಲಿ ಗುಡಿಗೌಡರಾದ ಶೇಖರ್, ಗ್ರಾಮದ ಹಿರಿಯರಾದ ಗಂಗಾಧರಯ್ಯ, ಚಂದ್ರಯ್ಯ, ಕೃಷ್ಣೇಗೌಡ, ಗಂಗಾಧರ್, ಧನಂಜಯ, ಭೈರಪ್ಪ, ಗಣೇಶ್, ಮರಿಯಣ್ಣ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.