ಪಾವಗಡ: ಪಾಲಸಿದಾರರು, ಏಜೆಂಟರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಭಾರತೀಯ ಜೀವ ವಿಮಾ ನಿಗಮ ಸಂಘದ ನೇತೃತ್ವದಲ್ಲಿ ಪಟ್ಟಣದ ಎಲ್.ಐ.ಸಿ ಕಚೇರಿ ಮುಂದೆ ಏಜೆಂಟರು ಪ್ರತಿಭಟನೆ ನಡೆಸಿದರು.
ಸಂಘಟನಾ ಕಾರ್ಯದರ್ಶಿ ಎ.ನಾಗಭೂಷಣ, ವಿಮಾ ಪ್ರತಿನಿಧಿಗಳ ಗುಂಪು ವಿಮೆಯನ್ನು ಹೆಚ್ಚಿಸಬೇಕು. ಅನಾರೋಗ್ಯ ಹಾಗೂ ಅಪಘಾತಗಳ ಸಮಯದಲ್ಲಿ ಕ್ಲೈಂ ಪಡೆಯುವ ನೀತಿ0ುನ್ನು ಸರಳಗೊಳಿಸಿ ಎಲ್.ಐ.ಸಿ ಏಜೆಂಟರ ಅಭ್ಯುದಯಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶಪ್ಪ, ಪಾಲಿಸಿದಾರರ ಬೋನಸ್ ಹೆಚ್ಚಿಸಬೇಕು. ಪೆಡಂಭೂತದಂತೆ ಬೆಳೆದಿರುವ ಜಿ.ಎಸ್.ಟಿ ಯನ್ನು ಕಡಿತಗೊಳಿಸಬೇಕು. ದೇಶದಾದ್ಯಂತ ಎಲ್.ಐ.ಸಿ ಏಜೆಂಟರು ಈಗಾಗಲೇ ಧರಣಿ ನಡೆಸಲಾಗುತ್ತಿದೆ. ಸರ್ಕಾರ ಮತ್ತು ವಿಮಾ ಕಂಪನಿ ನಿರ್ಲಕ್ಷ ತೋರಿದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಭಾರತೀ0ು ಜೀವ ವಿಮಾ ಪ್ರತಿನಿಧಿಗಳ ಸಂಘದ ಉಪಾಧ್ಯಕ್ಷ ಕೆ.ಆರ್. ಹನುಮಂತರಾ0ು, ಖಜಾಂಜಿ ಬಾಲಕೃಷ್ಣ, ಕಾರ್ಯದರ್ಶಿ ಎಸ್.ಕೆ. ನಾಗರಾಜು, ಸದಸ್ಯ ನಾಗಬೂಷಣ್, ಇ.ಅಕ್ಕಲಪ್ಪ, ಡಿ.ರಾಜೇಂದ್ರ, ಶ್ರೀರಾಮಪ್ಪ, ಆರ್.ಸಂತೋಷ್ಕುಮಾರ್, ಗೋವಿಂದರಾಜು, ನೇಮಿರಾಜು, ಸುಬ್ಬರಾ0ುಪ್ಪ, ಹೆಚ್.ಕೃಷ್ಣಪ್ಪ, ನರಸಿಂಹರೆಡ್ಡಿ, ಮೈಲಾರಪ್ಪ, ಧರ್ಮಪಾಲ್, ಗೋಪಾಲಪ್ಪ, ಫಣಿರಾಜು, ಅಂಜಿನಪ್ಪ, ವೀರಾಂಜನೇ0ು, ಸಿದ್ದಗಂಗಮ್ಮ, ಸುಬ್ಬರಾ0ುಪ್ಪ ಉಪಸ್ಥಿತರಿದ್ದರು.