ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಮೇಲನಹಳ್ಳಿ ಬಳಿಯಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹಿಂಬದಿಯಿರುವ ಗುಡ್ಡದ ಬಳಿ ಚಿರತೆ ಮರಿಯೊಂದು ಓಡಾಡುತ್ತಿರುವ ಬಗ್ಗೆ ಶಾಲೆಯ ಸೆಕ್ಯುರಿಟಿ ಸಿ ಜಯರಂಗಯ್ಯ ಮಾಹಿತಿ ನೀಡಿದ್ದರು.
ಅವರ ಮಾಹಿತಿಯನ್ನನುಸರಿಸಿ ಅರಣ್ಯ ಇಲಾಖೆಯಿಂದ ಅಲ್ಲಿ ಬೋನೊಂದನ್ನು ಇಟ್ಟು, ಅದರಲ್ಲಿ ಕೋಳಿಯನ್ನು ಬಿಡಲಾಗಿತ್ತು. ಕೋಳಿಯನ್ನು ತಿನ್ನುವ ಆಸೆಗೆ ಬಿದ್ದು ಚಿರತೆ ಬೋನಿಗೆ ನುಗ್ಗಿ ಲಾಕ್ ಆಗಿದೆ.
ಶುಕ್ರವಾರ ಬೆಳಗ್ಗೆ ಅದೇ ಸೆಕ್ಯುರಿಟಿ ಜಯರಂಗಯ್ಯನವರು ಚಿರತೆ ಬೋನಿಗೆ ಬಿದ್ದಿರುವುದನ್ನು ಗಮನಿಸಿ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿಂದ ಚಿರತೆಯನ್ನು ಹೊಸಹಳ್ಳಿ ನರ್ಸರಿ ಫೀಲ್ಡ್’ಗೆ ಸಾಗಿಸುವ ತಯಾರಿ ನಡೆಸಿದ್ದಾರೆ.
ಚಿರತೆಯ ವೈದ್ಯಕೀಯ ಪರೀಕ್ಷೆ ನಡೆಸಿ, ನಂತರ ಬನ್ನೇರುಘಟ್ಟ ರಾಷ್ಟ್ರೀಯ ವನಕ್ಕೆ ಅದನ್ನು ಬಿಡಲಾಗುವುದು.
_ಸಂಚಲನ
ಚಿಕ್ಕನಾಯಕನ ಸೀಮೆಯಿಂದ