Thursday, November 21, 2024
Google search engine
Homeತುಮಕೂರು ಲೈವ್'ಕೊರೊನಾ' ಅಂಬುಲೆನ್ಸ್ ಕೊಡುವಾಗಲೇ ನಿಯಮ ಪಾಲಿಸದ ಶಾಸಕರು!

‘ಕೊರೊನಾ’ ಅಂಬುಲೆನ್ಸ್ ಕೊಡುವಾಗಲೇ ನಿಯಮ ಪಾಲಿಸದ ಶಾಸಕರು!

ಸತೀಶ್


ಬೆಂಗಳೂರು: ಅಂಬುಲೆನ್ಸ್ ಕೊಡುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಕೈಜೋಡಿಸುತ್ತಿರುವುದಾಗಿ ಹೇಳಿರುವ ತುಮಕೂರು ಜಿಲ್ಲೆಯ ತಿಪಟೂರು ಶಾಸಕರಾದ ಬಿ.ಸಿ.ನಾಗೇಶ್, ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರೀಗ ಟ್ರೋಲ್ ಆಗಿದ್ದಾರೆ.

ಗುಂಪುಗೂಡದಂತೆ ನೋಡಿಕೊಳ್ಳುವುದು ಈಗ ಬಹುಮುಖ್ಯ. ಇದಕ್ಕಾಗಿಯೇ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಆದರೆ ಬಿ.ಸಿ.ನಾಗೇಶ್ ಅವರು ಅಂಬುಲೆನ್ಸ್ ಕೊಡುವಾಗ ತಮ್ಮ ಹಿಂಬಾಲಕರ ಪಡೆಯನ್ನೇ ಜತೆಯಲ್ಲಿ ಇಟ್ಟುಕೊಂಡಿದ್ದಾರೆ.

ಇಲ್ಲಿ ಸಾಮಾಜಿಕ ಅಂತರವನ್ನೇ ಕಾಪಾಡಿಲ್ಲ. ಅಕ್ಕಪಕ್ಕದಲ್ಲೇ ನಿಂತುಕೊಂಡಿದ್ದಾರೆ. ಇದರಲ್ಲಿ ಕೆಲವರು ಮಾಸ್ಕ್ಅನ್ನು ಸರಿಯಾಗಿ ಹಾಕಿಕೊಂಡಿಲ್ಲ. ಬುದ್ದಿವಂತ ಶಾಸಕರೇ ಹೀಗಾದರೆ ಹೇಗೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಿ.ಸಿ.ಗೌರಿಶಂಕರ್ ಸಹ ಅಂಬುಲೆನ್ಸ್ ಕೊಡುಗೆ ನೀಡುವಾಗ ಮಾಸ್ಕ್ ಕೆಳಗೆ ಜಾರಿಸಿದ್ದಾರೆ.

ಅಂಬುಲೆನ್ಸ್ ಕೊಡುಗೆ ಪ್ರಯೋಜನವೇನು?


ಅಂಬುಲೆನ್ಸ್ ಕೊಡುಗೆ ನೀಡುವುದರಿಂದ ಯಾವುದೇ ಪ್ರಯೋಜನ ಆಗದು. ಪೂರ್ಣ ಪ್ರಯೋಜನ ಆಗಬೇಕಾದರೆ ಶಾಸಕರು ಏನ್ ಮಾಡಬೇಕು ಗೊತ್ತಾ?

ದಿನಪೂರಾ ಕೆಲಸ ಮಾಡಲು ಮೂವರು ಚಾಲಕರು, ಅಂಬುಲೆನ್ಸ್ ಗೆ ಬೇಕಾದ ಪೆಟ್ರೋಲ್, ಅರೆ ವೈದ್ಯಕೀಯ ಸಿಬ್ಬಂದಿ, ಡಿಪೋಸಬಲ್ ವಸ್ತುಗಳು, ಆಕ್ಸಿಜನ್ ಇವು ಪ್ರತಿ ಅಂಬುಲೆನ್ಸ್ ನಲ್ಲೂ ಇರಬೇಕಾಗುತ್ತದೆ. ಇದನ್ನು ಕೊಡುವವರು ಯಾರು ಎಂದು ಶಾಸಕರು ಖಾತರಿಪಡಿಸಬೇಕಾಗಿದೆ.

ಆಸ್ಪತ್ರೆಗಳಿಗೆ ಅಂಬುಲೆನ್ಸ್ ಕೊಟ್ಟುಬಿಟ್ಟರೆ ಸಾಕಾಗುವುದಿಲ್ಲ. ಅದಕ್ಕೆ ಬೇಕಾದ ಚಾಲಕರ ಹುದ್ದೆಯನ್ನು, ಪ್ರತಿದಿನ ಬೇಕಾಗುವ ಪೆಟ್ರೋಲ್ ಬಜೆಟ್, ಅರೆ ವೈದ್ಯಕೀಯ ಸಿಬ್ಬಂದಿಯನ್ನು ಸರ್ಕಾರದಿಂದ ನೇಮಕ ಮಾಡಿಸಿಕೊಂಡು ಬರಬೇಕು. ಕೂಡಲೇ ಶಾಸಕರ ನೆರವಿನ ಹಸ್ತಕ್ಕೆ ಸರ್ಕಾರವೂ ಕೈ ಜೋಡಿಸಬೇಕಾಗಿದೆ.

ಇದಕ್ಕೆ ತಗುಲಬಹುದಾದ ವೆಚ್ಚವನ್ನು ಶಾಸಕರ ಸ್ವಂತ ಹಣದಿಂದ ಭರಿಸುವವರೇ? ಶಾಸಕರ ಅನುದಾನದಿಂದ ನೀಡುವವರೇ? ಸರ್ಕಾರದಿಂದ ಮಂಜೂರು ಆಗಿದೆಯೇ ಅಥವಾ ಜಿಲ್ಲಾಧಿಕಾರಿ ಅವರ ಅಡಿ ಬರುವ ನೈಸರ್ಗಿಕ ವಿಕೋಪ ಪರಿಹಾರ ನಿಧಿಯಿಂದ ಬಳಕೆ ಮಾಡಿಕೊಳ್ಳಲಾಗುತ್ತದೆಯೇ ಎಂಬ ಬಗ್ಗೆಯೂ ಜನರಿಗೆ ತಿಳಿಸಬೇಕಾಗಿದೆ. ಇದಕ್ಕಾಗಿ ಅನುದಾನ ಬಳಸುವತ್ತ ನಿರ್ಧಾರ ಕೈಗೊಳ್ಳಬೇಕಾಗಿದೆ.

ಬಜೆಟ್ ಮಂಜೂರಾಗದ ಹೊರತು ಅಂಬುಲೆನ್ಸ್ ಬಳಸಲು ಆಸ್ಪತ್ರೆ ಅಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ. ವಾಹನದ ನಿರಂತರ ಬಳಕೆ ಆಗಬೇಕಾದರೆ ಈ ಮೇಲಿನವು ಮುಖ್ಯವಾಗುತ್ತವೆ.

ಇಂತ ಸಂದರ್ಭದಲ್ಲಿ ಅಂಬುಲೆನ್ಸ್, ನಾಲ್ಕಾರು ಆಕ್ಸಿಜನ್ ನೀಡಲು ಸಾಕಷ್ಟು ಮುಂದೆ ಬರುತ್ತಾರೆ. ಆದರೆ ಇವು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಲು ಬೇಕಾದ ಖರ್ಚು-ವೆಚ್ಚ, ಅಗತ್ಯ ಸಿಬ್ಬಂದಿ ಯಾರು ಕೊಡುತ್ತಾರೆ ಎಂಬುದೇ ಈಗಿರುವ ಪ್ರಶ್ನೆಯಾಗಿದೆ. ಈ ವಿಚಾರದಲ್ಲಿ ಎಲ್ಲ ಶಾಸಕರು ಒಂದುಗೂಡಿ ಸರ್ಕಾರದ ಮೇಲೆ ಒತ್ತಡ ಹಾಕಿ ಹೆಚ್ಚುವರಿ ಹುದ್ದೆ, ಬಜೆಟ್ ಮಂಜೂರು ಮಾಡಿಸಬೇಕು‌. ಈ ನಿಟ್ಟಿನಲ್ಲಿ ಮಾದರಿ ಕೆಲಸ ಮಾಡಿರುವ ಈ ಇಬ್ಬರು ಶಾಸಕರ ಜತೆ ಉಳಿದ ಶಾಸಕರು ಕೈ ಜೋಡಿಸಬೇಕು ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಹಲವು ಅಧಿಕಾರಿಗಳು.

ಆಕ್ಸಿಜನ್ ಯುಕ್ತ ಹಾಸಿಗೆಯುಳ್ಳ ಹಾಲ್, ತಕ್ಷಣಕ್ಕೆ ಹೆಚ್ಚು ಸಂಬಳ ನೀಡಿ ಅರೆ ವೈದ್ಯಕೀಯ ಸಿಬ್ಬಂದಿ ನೇಮಕದ ಬಗ್ಗೆ ತುರ್ತು ಗಮನ ಹರಿಸುವುದು ಅಗತ್ಯವಾಗಿದೆ ಎನ್ನುತ್ತಾರೆ ರಾಜ್ಯದ ಆರೋಗ್ಯದ ಇಲಾಖೆಯ ಉನ್ನತ ಅಧಿಕಾರಿಗಳು.

RELATED ARTICLES

2 COMMENTS

  1. ಶಾಸಕರಾದ ಗೌರಿಶಂಕರ್ ರವರು ಪಿಪಿಇ ಕಿಟ್ ನೀಡಬೇಕಾದರೇ ಅವರೊಬ್ಬರ ಮಾಸ್ಕ್ ಜರುಗಿದೆ ಇನ್ನುಳಿದವರ ಎಲ್ಲರ ಮಾಸ್ಕ್ ಸರಿಯಾಗಿಯೇ ಇದೆ. ಸಾಮಾದಿಕ ಅಂತರದಲ್ಲಿ ರಾಜಿಯೇ ಆಗಲಿಲ್ಲಾ. ಜೊತೆಗೆ ಅಂಬ್ಯುಲೆನ್ಸ್ ನ ರೂರ್ಣ ಖರ್ಚನ್ನು ನಮ್ಮ ಶಾಸಕರೇ ನೋಡಿಕೊಳ್ಳಲಿದ್ದಾರೆ. ನಮ್ಮ ಶಾಸಕರಿಗೆ ಬದ್ದತೆ ಇದೆ. ಯಾವುದೇ ಕೆಲಸ ಮಾಡಿದರು ಆ ವ್ಯವಸ್ಥೆ ಶಾಶ್ವತವಾಗಿ ಇರುವ ಕೆಲಸವನ್ನೇ ಮಾಡುತ್ತಾರೆ.

  2. ಶಾಸಕರಾದ ಗೌರಿಶಂಕರ್ ರವರು ಪಿಪಿಇ ಕಿಟ್ ನೀಡಬೇಕಾದರೇ ಅವರೊಬ್ಬರ ಮಾಸ್ಕ್ ಜರುಗಿದೆ ಇನ್ನುಳಿದವರ ಎಲ್ಲರ ಮಾಸ್ಕ್ ಸರಿಯಾಗಿಯೇ ಇದೆ. ಸಾಮಾಜಿಕ ಅಂತರದಲ್ಲಿ ಕಾರ್ಯಕ್ರಮ ನಡೆಯುವಾಗ ಆಗಲಿಲ್ಲಾ. ಜೊತೆಗೆ ಅಂಬ್ಯುಲೆನ್ಸ್ ನ ಪೂರ್ಣ ಖರ್ಚನ್ನು ನಮ್ಮ ಶಾಸಕರೇ ನೋಡಿಕೊಳ್ಳಲಿದ್ದಾರೆ. ನಮ್ಮ ಶಾಸಕರಿಗೆ ಬದ್ದತೆ ಇದೆ. ಯಾವುದೇ ಕೆಲಸ ಮಾಡಿದರು ಆ ವ್ಯವಸ್ಥೆ ಶಾಶ್ವತವಾಗಿ ಇರುವ ಕೆಲಸವನ್ನೇ ಮಾಡುತ್ತಾರೆ.

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?