Thursday, November 21, 2024
Google search engine
Homeಪೊಲಿಟಿಕಲ್ಗಾಯ ಲೆಕ್ಕಿಸದೇ ಪ್ರಚಾರ ಆರಂಭಿಸಿದ ಪರಮೇಶ್ವರ್

ಗಾಯ ಲೆಕ್ಕಿಸದೇ ಪ್ರಚಾರ ಆರಂಭಿಸಿದ ಪರಮೇಶ್ವರ್

ತಲೆಗೆ ಬ್ಯಾಂಡಿಜ್ ಹಾಕಿಕೊಂಡು ಮತ್ತೆ ಪ್ರಚಾರಕ್ಕಿಳಿದ ಡಾ.ಜಿ.ಪರಮೇಶ್ವರ್
ಕೊರಟಗೆರೆಯಲ್ಲಿ ನಾಳೆ ಸಿದ್ದರಾಮಯ್ಯ  ಚುನಾವಣಾ ಪ್ರಚಾರ:

ತುಮಕೂರು: ಶುಕ್ರವಾರದಂದು ಪ್ರಚಾರದ ವೇಳೆ ತಲೆಗೆ ಕಲ್ಲೇಟು ಬಿದ್ದು ಗಾಯಗೊಂಡಿದ್ದ ಶಾಸಕರು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ್ ಅವರು ಚಿಕಿತ್ಸೆ ಬಳಿಕ ಮತ್ತೆ ಕೊರಟಗೆರೆ ಇಂದಿನಿಂದ(ಭಾನುವಾರದಿಂದ) ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದರು.

ತಲೆಗೆ ಬ್ಯಾಂಡಿಜ್ ಹಾಕಿದ್ದು, ಟೋಪಿ ಧರಿಸಿಕೊಂಡು ಪ್ರಚಾರಕ್ಕೆ ಧುಮಕಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೆ೧ರಂದು ಭಾಗವಹಿಸಲಿರುವ ಕೊರಟಗೆರೆ ರಾಜೀವ್ ಭವನದ ಸಮಾವೇಶದ ವೇದಿಕೆ ಪರಿಶೀಲನೆ ಮಾಡಿದರು.

ಇಲ್ಲಿ ಸೋಮವಾರ ಮಧ್ಯಾಹ್ನ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರು ಆದ ಸಿದ್ಧರಾಮಯ್ಯ ನವರು ಪ್ರಚಾರ ಸಭೆಯಲ್ಲಿ ನಡೆಸಲಿದ್ದಾರೆ.


ಹಳ್ಳಿಗಳಲ್ಲಿ ಮತ ಪ್ರಚಾರ:
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಹೊಳವನಹಳ್ಳಿ ಹೋಬಳಿಯ ಬೈರನಹಳ್ಳಿ ಕ್ರಾಸ್‌ನಿಂದಲೇ ಇಂದು ಮತ್ತೆ ಮತ ಪ್ರಚಾರ ಆರಂಭಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ, ಕಲ್ಲೆಸತದ ಘಟನೆಯ ಬಗ್ಗೆ ಬೇಸರ ವ್ಯಕ್ಪಡಿಸಿ, ಜನತೆ ಆರ್ಶೀವಾದದ ರಕ್ಷಣೆ ಇರುವ ತನಕ ಯಾವುದಕ್ಕೂ ಅಂಜುವುದಿಲ್ಲ. ನನ್ನ ಬಗ್ಗೆ ಕ್ಷೇತ್ರದ ಜನರಲ್ಲಿ ನಂಬಿಕೆ ಇದೆ. ಯಾರೂ ಸಹ ಆತಂಕಕ್ಕೆ ಒಳಗಾಗಬಾರದು. ಇದು ಚುನಾವಣಾ ಸಮಯ. ಶಾಂತಿಯಿಂದ ವರ್ತಿಸಿ. ಯಾವುದೇ ಅಹಿತಕರ ಘಟನೆಗಲಿಗೆ ಅವಕಾಶ ನೀಡಬೇಡಿ. ಹೆಚ್ಚಿನ ಮತ ನೀಡುವ ಮೂಲಕ ವಿರೋಧಿಗಳಿಗೆ ಉತ್ತರ ನೀಡಿ ಎಂದು ಕರೆ ನೀಡಿದರು.


ನನಗೆ ಡ್ರಾಮಾ ಮಾಡಿ ಅಭ್ಯಾಸ ಇಲ್ಲಾ. ಅದರ ಅವಶ್ಯಕತೆ ನನಗೆ ಇಲ್ಲಾ. ೩೫ ವರ್ಷದ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆಯಿಲ್ಲದೆ ರಾಜಕಾರಣ ಮಾಡಿದ್ದೇನೆ. ನಾನು ತೆರೆದ ಪುಸ್ತಕ. ಬೇಕಾದರೆ ಓದಿಕೊಳ್ಳಿ ಎಂದು ವಿರೋಧ ಪಕ್ಷಗಳ ಕೆಲವು ನಾಯಕರ ಹೇಳಿಕೆಗೆ ಪರಮೇಶ್ವರ್ ತಿರುಗೆಟು ನೀಡಿದರು.

ನಂತರ ರಾಯವಾರ- ಕಳ್ಳಿಪಾಳ್ಯ, ರೆಡ್ಡಿಹಳ್ಳಿ ಗ್ರಾಮದಲ್ಲಿ ಅತ್ಯಂತ ನಿರೀಕ್ಷಿತ ಜನಬೆಂಬಲ ವ್ಯಕ್ತವಾದರೆ, ಬೈಚಾಪುರ ಗ್ರಾಮ ಪಂಚಾಯ್ತಿಯ ಬಸವನಹಳ್ಳಿ ಗ್ರಾಮದಲ್ಲಿ ಭಾರೀ ಜನಬೆಂಬಲದೊಂದಿಗೆ ಪರಮೇಶ್ವರ ಅವರು ಮತಯಾಚನೆ ಮಾಡಿದರು.


ಬೈರನಹಳ್ಳಿಯಂದ ಚಿಕ್ಕೇನಹಳ್ಳಿ ತನಕ ೧೦ ಗ್ರಾಮಗಳಲ್ಲಿ ಮತಯಾಚನೆ ಮಾಡಿದ ಪರಮೇಶ್ವರ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಗ್ಯಾರಂಟಿ ಭರವಸೆಗಳನ್ನು ಈಡೇರಿಸಲಿದೆ ಎಂದರು.

ಪಕ್ಷಕ್ಕೆ ಸೇರ್ಪಡೆ:
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕಳ್ಳಿಪಾಳ್ಯ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆಯಲ್ಲಿ ವಿಪಕ್ಷಗಳನ್ನು ತೊರೆದು ಕಾಂಗ್ರೆಸ್‌ಗೆ ಮುಖಂಡರು ಸೇರ್ಪಡೆಯಾದರು. ಬೈಚಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೆಡ್ಡಿಹಳ್ಳಿ ಗ್ರಾಮದ ಮುಖಂಡ ಹಾಗೂ ನಿವೃತ್ತ ಶಿಕ್ಷಕರಾದ ರಾಮಕೃಷ್ಣಯ್ಯ ನವರು ಜೆಡಿಎಸ್ ಪಕ್ಷ ತೊರೆದು ಡಾ ಜಿ ಪರಮೇಶ್ವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಇದೇ ವೇಳೆ ಆರ್ ವೆಂಕಟಾಪುರದ ಗ್ರಾಮದ ಬಿಜೆಪಿ ಮುಖಂಡ ಹನುಮಂತರಾಯಪ್ಪ ಅವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರಿದರೆ,ಸಿ.ಎನ್.ದುರ್ಗ ಹೋಬಳಿ ಗಟ್ಲಹಳ್ಳಿ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕರಿಯಣ್ಣ ಅವರನ್ನೂ ಕಾಂಗ್ರೆಸ್ಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?